ಬ್ರಾಹ್ಮಣ ಸಮುದಾಯದ ಜನಗಣತಿ ಆಗಲಿ
Team Udayavani, Sep 27, 2020, 3:53 PM IST
ಮಾಗಡಿ: ರಾಜ್ಯ ಸರ್ಕಾರ ಈಗ ಬ್ರಾಹ್ಮಣರಿಗೆ ಜಾತಿ ಆದಾಯ ಪ್ರಮಾಣ ಪತ್ರ ನೀಡುತ್ತಿರುವುದರಿಂದ ಮಾಗಡಿ ತಾಲೂಕಿನಲ್ಲಿ ಬ್ರಾಹ್ಮಣಸಮುದಾಯದ ಜನಗಣತಿಆಗಬೇಕುಎಂದು ತಾಲೂಕು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೋಪಾಲ್ ದೀಕ್ಷಿತ್ ಹೇಳಿದರು.
ಪಟ್ಟಣದ ಶ್ರೀರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಪ್ರಥಮಸಭೆಯಲ್ಲಿಮಾತನಾಡಿದ ಅವರು, ಸರ್ಕಾರದ ಸವಲತ್ತು ಪಡೆದುಕೊಳ್ಳಲು ಕಡ್ಡಾಯವಾಗಿ ಎಲ್ಲರೂ ಜಾತಿ ಆದಾಯ ಪ್ರಮಾಣ ಮಾಡಿಸಿದಾಗ ಮಾತ್ರಬ್ರಾಹ್ಮಣರಜನಸಂಖ್ಯೆ ಸರ್ಕಾರಕ್ಕೆ ಗೊತ್ತಾಗುತ್ತದೆ ಎಂದರು.
ರಾಜ್ಯದಲ್ಲಿ47ಲಕ್ಷಬ್ರಾಹ್ಮಣರಿದ್ದಾರೆ. ಆದರೆ ಸರ್ಕಾರದ ಲೆಕ್ಕದಲ್ಲಿ 17 ಸಾವಿರ ಎಂದು ತೋರಿಸುತ್ತಿದೆ. ಆದ್ದರಿಂದ ಜನಗಣತಿ ಕಡ್ಡಾಯವಾಗಿಆಗಬೇಕಿದ್ದು, ಸ್ಥಳೀಯ ತಾಲೂಕು ಕಚೇರಿ ಅಥವಾ ನೆಮ್ಮದಿ ಕೇಂದ್ರಕ್ಕೆ ತೆರಳಿ ಜಾತಿ ಆದಾಯ ಪ್ರಮಾಣ ಪತ್ರ ಮಾಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇನ್ನು ಕೆಲವೇ ದಿನಗಳಲ್ಲಿ ತಾಲೂಕು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಜನಗಣತಿ ಪ್ರವಾಸವನ್ನು ಮಾಗಡಿತಾಲೂಕಿನಲ್ಲಿಹಾಕಿಕೊಳ್ಳಲಿದ್ದು, ಬ್ರಾಹ್ಮಣ ಜನಾಂಗದ ಜನಗಣತಿ ಮಾಡುವುದರ ಜೊತೆಗೆ ನಮ್ಮ ಅಭಿವೃದ್ಧಿ ಮಂಡಳಿಗೆ ಕಡ್ಡಾಯವಾಗಿ ಒಬ್ಬರು ಅಥವಾ ಇಬ್ಬರು ಸದಸ್ಯರಾಗಬೇಕು. ಆಗ ಮಾತ್ರ ಸರ್ಕಾರದ ಸವಲತ್ತುಗಳನ್ನು ಕೊಡಿಸಲು ಸಾಧ್ಯ ಎಂದರು.
ಹಿಂದುಳಿದ ಬ್ರಾಹ್ಮಣರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಕೇಂದ್ರ ಸರ್ಕಾರಕ್ಕೆ ಬ್ರಾಹ್ಮಣ ಜನಾಂಗವನ್ನು ಕೂಡ ಅಸಂಘಟಿತ ಕಾರ್ಮಿಕರೆಂದು ಘೋಷಣೆ ಮಾಡಲು ಒತ್ತಾಯಿಸಲು ತೀರ್ಮಾನಿಸಲಾಯಿತು. ವೆಂಕಟೇಶ್ ಮೂರ್ತಿ, ಉಪಾಧ್ಯಕ್ಷೆ ಪದ್ಮಾ ಜಗನ್ನಾಥ್, ಖಜಾಂಚಿ ನಾಗರಾಜು, ಜಂಟಿ ಕಾರ್ಯ ದರ್ಶಿ ಚಕ್ರಬಾವಿ ಸುಧೀಂದ್ರ, ಸತ್ಯನಾರಾಯಣ್, ನಿರ್ದೇಶಕರಾದ ಲಕ್ಷ್ಮೀ ನಾರಾಯಣ್, ಇಂದುಮತಿ, ಚಂದ್ರಶೇಖರ್, ನರಸಿಂಹರಾವ್, ಪ್ರಸಾದ್ ರಾವ್, ರಾಮಚಂದ್ರರಾವ್, ದೀಪ ಕೃಷ್ಣ, ವಿನಯ್ ಕುಮಾರ್, ಜಯಲಕ್ಷ್ಮೀ, ರಾಧಾ, ಹರೀಶ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.