ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!
ರಾಯಲ್ಸ್ ಗೆಲುವಿಗೆ ಸಹಕಾರಿಯಾದ ಸ್ಮಿತ್, ಸ್ಯಾಮ್ಸನ್ ಫಿಪ್ಟೀ ಮತ್ತು ರಾಹುಲ್ ತೆವಾಟಿಯಾ - ಜೋಫ್ರಾ ಆರ್ಚರ್ ಸ್ಪೋಟಕ ಬ್ಯಾಟಿಂಗ್
Team Udayavani, Sep 27, 2020, 11:13 PM IST
31 ಎಸೆತಗಳಲ್ಲಿ 53 ರನ್ ಗಳಿಸಿ ರಾಯಲ್ಸ್ ಗೆಲ್ಲಿಸಿದ ರಾಹುಲ್ ತೆವಾಟಿಯಾ ಬ್ಯಾಟಿಂಗ್ ಶೈಲಿ.
ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 224 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ದಿಟ್ಟತನದ ಹೋರಾಟ ನೀಡಿ ವೀರೋಚಿತ ಗೆಲುವನ್ನು ಸಂಪಾದಿಸಿದೆ.
31 ಎಸೆತಗಳಲ್ಲಿ 53 ರನ್ ಗಳಿಸಿ ರಾಯಲ್ಸ್ ಗೆಲ್ಲಿಸಿದ ರಾಹುಲ್ ತೆವಾಟಿಯಾ ಬ್ಯಾಟಿಂಗ್ ಶೈಲಿ.
224 ರನ್ ಗಳ ಬೃಹತ್ ಗುರಿಯನ್ನು ಜಬರ್ದಸ್ತಾಗಿ ಬೆನ್ನಟ್ಟಿದ ಪಂಜಾಬ್ ಗೆ ನಾಯಕ ಸ್ಮಿತ್ (50) ಹಾಗೂ ಸಂಜು ಸ್ಯಾಮ್ಸನ್ (85) ಸ್ಪೋಟಕ ಆಟ ನೆರವಾಯಿತು. ಆದರೆ ರಾಯಲ್ಸ್ ಗೆಲುವನ್ನು ಪಕ್ಕಾಗೊಳಿಸಿದ್ದು ಮಾತ್ರ ಯುವ ಲೆಫ್ಟ್ ಹ್ಯಾಂಡರ್ ರಾಹುಲ್ ತೆವಾಟಿಯಾ!
ಹೌದು, ಸ್ಮಿತ್ ಮತ್ತು ಸ್ಯಾಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದಷ್ಟೂ ಹೊತ್ತು ಎರಡೂ ತಂಡಕ್ಕೆ ಈ ಪಂದ್ಯವನ್ನು ಗೆಲ್ಲುವ ಭರವಸೆ 50-50 ಇತ್ತು. ಆದರೆ ಅವಕಾಶ ಮಾತ್ರ ಪಂಜಾಬ್ ಪರ ಹೆಚ್ಚಿತ್ತು!
ಇದನ್ನೂ ಓದಿ: ರಾಹುಲ್–ಮಯಾಂಕ್ ಭರ್ಜರಿ ಬ್ಯಾಟಿಂಗ್ ಜೊತೆಯಾಟ: ರಾಯಲ್ಸ್ ಬೆವರಿಳಿಸಿದ ‘ಕರುನಾಡ ಹುಡುಗರು’!
ಆದರೆ 18ನೇ ಓವರಿನಲ್ಲಿ ಕಾಟ್ರೆಲ್ ಬೌಲಿಂಗ್ ನಲ್ಲಿ ತೆವಾಟಿಯಾ ಬಾರಿಸಿದ ಆ 5 ಸಿಕ್ಸರ್ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತು. ಶಾರ್ಜಾ ಮೈದಾನದಲ್ಲಿ ಹೊಸ ಬ್ಯಾಟಿಂಗ್ ಸೆನ್ಸೇಷನ್ ಹುಟ್ಟಿಕೊಂಡುಬಿಟ್ಟಾಗಿತ್ತು. ಪಂಜಾಬ್ ಪರ ವಾಲುತ್ತಿದ್ದ ಪಂದ್ಯವನ್ನು ತನ್ನ ಸ್ಪೋಟಕ ಬ್ಯಾಟಿಂಗ್ ಮೂಲಕ ರಾಜಸ್ಥಾನ ಪರ ವಾಲಿಸಿದ ಆ ಲೆಫ್ಟ್ ಹ್ಯಾಂಡರ್ ಸಿಡಿಸಿದ್ದು 31 ಎಸೆತಗಳಲ್ಲಿ 53 ರನ್. ಇದರಲ್ಲಿ ಸೇರಿದ್ದು 7 ಭರ್ಜರಿ ಸಿಕ್ಸರ್.
ಕೊನೆಯಲ್ಲಿ ರಾಜಸ್ಥಾನ ಗೆಲುವನ್ನು ಖಚಿತಪಡಿಸಿದ್ದು 3 ಎಸೆತಗಳಲ್ಲಿ 13 ರನ್ ಸಿಡಿಸಿದ ಜೋಫ್ರಾ ಆರ್ಚರ್. 19ನೇ ಓವರಿನಲ್ಲಿ ಮಹಮ್ಮದ್ ಶಮಿ ಬೌಲಿಂಗ್ ನಲ್ಲಿ ತೆವಾಟಿಯಾ 1 ಸಿಕ್ಸರ್ ಬಾರಿಸಿದರೆ, ಆರ್ಚರ್ 2 ಸಿಕ್ಸರ್ ಬಾರಿಸಿದರು. ಆ ಓವರಿನಲ್ಲಿ 19 ರನ್ ಹರಿದುಬಂತು. ಹಾಗಾಗಿ ಕೊನೆಯ ಓವರಿನಲ್ಲಿ ರಾಯಲ್ಸ್ ಗೆಲುವಿಗೆ 2 ರನ್ ಮಾತ್ರವೇ ಬೇಕಾಗಿತ್ತು.
ಸ್ಪಿನ್ನರ್ ಮುರುಗನ್ ಅಶ್ವಿನ್ ಎಸೆದ ಆ ಓವರ್ ನ ಮೊದಲ ಎಸೆತದಲ್ಲಿ ಪರಾಗ್ ಬೌಲ್ಡ್ ಆದರು. ಆದರೆ ಮುಂದಿನ ಎಸೆತದಲ್ಲಿ ಕರನ್ ಬೌಂಡರಿ ಬಾರಿಸುವುದರೊಂದಿಗೆ ರಾಜಸ್ಥಾನ ಗೆಲುವು ಪಕ್ಕಾ ಆಯಿತು.
ರಾಜಸ್ಥಾನ ಪರ ಕಪ್ತಾನ ಸ್ಟೀವನ್ ಸ್ಮಿತ್ (50), ಸಂಜು ಸ್ಯಾಮ್ಸನ್ (42 ಎಸೆತಗಳಲ್ಲಿ 85), ರಾಹುಲ್ ತೆಮಾಟಿಯಾ (53) ಅರ್ಧ ಶತಕ ಬಾರಿಸಿದ್ದು ವಿಶೇಷವಾಗಿತ್ತು.
ಜಾಸ್ ಬಟ್ಲರ್ (4) ಹಾಗೂ ರಾಬಿನ್ ಉತ್ತಪ್ಪ (9) ಬ್ಯಾಟಿಂಗ್ ವೈಫಲ್ಯವನ್ನೂ ಮೆಟ್ಟಿನಿಂತು ಇವರೆಲ್ಲರ ಸಾಹಸದಿಂದ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ರಾಯಲ್ಸ್ ಮುಂದಿನ ಪಂದ್ಯಕ್ಕೆ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬಿಕೊಂಡಿತು.
ಮಹಮ್ಮದ್ ಶಮಿ ದುಬಾರಿಯಾದರೂ 3 ವಿಕೆಟ್ ಪಡೆದರು. ತೆವಾಟಿಯಾ ಕೈಯಲ್ಲಿ ಒಂದೇ ಓವರಿನಲ್ಲಿ 5 ಸಿಕ್ಸರ್ ಹೊಡೆಸಿಕೊಂಡ ಶೆಲ್ಡನ್ ಕಾಟ್ರೆಲ್ 3 ಓವರ್ ಗಳಲ್ಲಿ 52 ರನ್ ನೀಡಿ ಬಹು ದುಬಾರಿಯಾದರು.
What an absolutely incredible win for @rajasthanroyals ! I’ve known @iamSanjuSamson for a decade & told him when he was 14 that he would one day be the next MS Dhoni. Well, that day is here. After his two amazing innings in this IPL you know a world class player has arrived.
— Shashi Tharoor (@ShashiTharoor) September 27, 2020
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.