ಜಾನಪದ ಕಲೆಯೇ ಬದುಕು:ಕಲಾವಿದ ಶಿವಣ್ಣ
Team Udayavani, Sep 28, 2020, 3:02 PM IST
ರಾಮನಗರ: ಸಭೆ-ಸಮಾರಂಭಗಳಲ್ಲಿ, ಗ್ರಾಮಗಳಲ್ಲಿ ಮಂಟೇಸ್ವಾಮಿ ಕಥೆ, ಸಿದ್ದಪ್ಪಾಜಿ ಕಥೆ, ಸಂಕಮ್ಮನ ಕಥೆ, ಹೀಗೆ ಕಥಾಕಾಲಕ್ಷೇಪಗಳನ್ನು ಮಾಡಿಕೊಂಡು ಜಾನಪದಕಲೆಯನ್ನು ಉಳಿಸಿಕೊಂಡು ಬದುಕು ನಡೆಸುತ್ತಿದ್ದೇವೆ ಎಂದು ಜವಳಗೆರೆ ದೊಡ್ಡಿಯ ತಂಬೂರಿ ಕಲಾವಿದ ಶಿವಣ್ಣ ಹೇಳಿದರು.
ಕಲಾಜ್ಯೋತಿ ನೃತ್ಯಶಾಲೆಯಲ್ಲಿ ಚನ್ನಪಟ್ಟಣ ತಾಲೂಕಿನ ಹೊನ್ನಿಗಾನಹಳ್ಳಿಯ ತರಂಗ ಜಾನಪದ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನಡೆದ ಮೂಲ ಜಾನಪದ ಹಾಡು, ಜಾನಪದ ನೃತ್ಯ, ಹಾಗೂ ಲಾವಣಿ ಪದಗಳ ಕಾರ್ಯಕ್ರಮವನ್ನು ತಂಬೂರಿ ನುಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರಿಂದ ಸಾಹಿತ್ಯ, ಕಲೆ ಜೀವಂತ: ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಕನ್ನಡ ನಾಡು ಕಲೆ, ಸಂಸ್ಕೃತಿ, ಸಂಪ್ರದಾಯಗಳ ತವರು, ಜನಪದ ಕಲಾವಿದರಿಂದಾಗಿ ಜನಪದ ಸಾಹಿತ್ಯ, ಕಲೆ ಜೀವಂತವಾಗಿದೆ. ಸಾಕ್ಷಿ ಕಲ್ಲು, ವೀರಗಲ್ಲು, ಮಹಾಸತಿ ಕಲ್ಲುಗಳು, ಗತಕಾಲದ ಕಥನಾವಳಿಗಳು, ಘಟನಾವಳಿಗಳನ್ನು ಹೇಳುತ್ತವೆ ಎಂದರು.
ಟ್ರಸ್ಟ್‌ನ ಕಾರ್ಯದರ್ಶಿ ಜಾನಪದ ಕಲಾವಿದ ಬಿ.ಸಿದ್ದ ರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚೌ.ಪು.ಸ್ವಾಮಿ ಅವರು ಲಾವಣಿಪದಗಳನ್ನು ಹಾಡಿದರು. ಚಕ್ಕೆರೆ ಸಿದ್ದರಾಜು, ಸುಣ್ಣಘಟ್ಟ ಗಂಗಾಧರ್, ಸಾವಿತ್ರಿರಾವ್ ಮೂಲ ಜನಪದ ಗೀತೆಗಳನ್ನು ಹಾಡಿದರು. ತಂಬೂರಿ ರಾಜಮ್ಮ-ಶಿವಣ್ಣ, ಮಲ್ಲಯ್ಯ ಹಾಗೂ ಲಿಂಗರಾಜು ಮಂಟೇ ಸ್ವಾಮಿ ಕಥಾ ಪ್ರಸಂಗ ಪ್ರಸ್ತುತ ಪಡಿಸಿದರು. ಹರಿ ಅವರು ಹಾರ್ಮೋನಿಯಂ, ನಟರಾಜ್ ಅವರಿಂದ ತಬಲ ಮತ್ತು ಮನೋಜ್ ಅವರಿಂದ ವಾದ್ಯಗೋಷ್ಠಿ ಇತ್ತು.
ರೇಣುಕಾ ಪ್ರಸಾದ್, ಎನ್.ವಿ.ಲೋಕೇಶ್, ಯುವ ಪ್ರತಿಭೆ ಶಿವಕುಮಾರ್ ಕೋಡಂಬಹಳ್ಳಿ ಹಾಜರಿದ್ದರು. ನೃತ್ಯ ಪ್ರದರ್ಶಿಸಿದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಬಿ.ಸಿದ್ದರಾಜಯ್ಯ ಸ್ವಾಗತಿಸಿದರು. ಗಾಯಕ ಚೌ.ಪು.ಸ್ವಾಮಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.