ಕಣಿವೆ ಪ್ರದೇಶದಲ್ಲಿ ತಗ್ಗಿದ ಉಗ್ರ ಚಟುವಟಿಕೆ
Team Udayavani, Sep 28, 2020, 4:29 PM IST
ಮಣಿಪಾಲ: ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ ಕಣಿವೆ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಮತ್ತು ಹಿಂಸಾಕೃತ್ಯಗಳ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ಕೇಂದ್ರ ಸರಕಾರ 2019ರ ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿತ್ತು. ಆ ಬಳಿಕ ಕಣಿವೆ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಅಲ್ಲದೆ ಕಳೆದೊಂದು ವರ್ಷದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರೀ ಯಶಸ್ಸು ಸಾಧಿಸಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕಳೆದ ಕೆಲವು ದಶಕಗಳಿಂದ ಪಾಕ್ ಪ್ರೇರಿತ ಉಗ್ರರ ನೆಲೆಯಾಗಿ ಮಾರ್ಪಟ್ಟಿದ್ದ ಕಣಿವೆ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಸೇರಿದಂತೆ ಹಿಂಸಾಚಾರದ ಪ್ರಕರಣಗಳ ಪ್ರಮಾಣದಲ್ಲಿ ಗಮನಾರ್ಹ ಮಟ್ಟದಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿ ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕರಣ್ ಜೋಹರ್‌ಗೂ ಡ್ರಗ್ ಸಂಕಷ್ಟ? ವಿಡಿಯೋ ತಿರುಚಿದ್ದಲ್ಲ: FSL ವರದಿಯಿಂದ ಸ್ಪಷ್ಟ
ಹತ್ಯೆ ಪ್ರಕರಣಗಳು
2019ರ ಆ. 5 ರಿಂದ ಮತ್ತು 2020ರ ಆ. 31ರ ವರೆಗೆ ಕಣಿವೆ ರಾಜ್ಯದಲ್ಲಿ ನಡೆದ ಉಗ್ರಗಾಮಿ ಕೃತ್ಯಗಳಲ್ಲಿ 45 ಮಂದಿ ನಾಗರಿಕರು ಮತ್ತು 54 ಭದ್ರತಾ ಸಿಬಂದಿ ಸಾವನ್ನಪ್ಪಿದ್ದು, ಕಳೆದ ವರ್ಷ ಇದರ ಪ್ರಮಾಣ ಕ್ರಮವಾಗಿ 54 ಮತ್ತು 125 ಆಗಿತ್ತು.
ಒಳನುಸುಳುವಿಕೆ ಪ್ರಕರಣಗಳು
ಕಳೆದ ಎರಡು ವರ್ಷಗಳಲ್ಲಿ 2020ರ ಜುಲೈವರೆಗೆ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ಥಾನ ಬೆಂಬಲಿತ ಉಗ್ರರಿಂದ 47 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ ಎಂದು ಅಂದಾಜಿಸಲಾಗಿದೆ. 2019ರಲ್ಲಿ ಇಂತಹ 219 ಪ್ರಯತ್ನಗಳು ನಡೆದಿದ್ದವು. 2018ರಲ್ಲಿ 328 ಒಳ ನುಸುಳುವಿಕೆ ಪ್ರಯತ್ನಗಳು ನಡೆದಿದ್ದವು. 2020ರ ಜುಲೈವರೆಗೆ ಅಧಿಕೃತವಾಗಿ 28 ಒಳನುಸುಳುವಿಕೆ ಪ್ರಕರಣಗಳು ದಾಖಲಾಗಿದ್ದು, 2019ರಲ್ಲಿ 141 ಮತ್ತು 2018ರಲ್ಲಿ 143 ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ :ರಾಗಿಣಿ, ಸಂಜನಾ ಜಾಮೀನು ಅರ್ಜಿ ತಿರಸ್ಕಾರ: ನಟಿಯರ ಜೈಲುವಾಸ ಮುಂದುವರಿಕೆ
2019ರ ಆ.5ರಿಂದ 2020ರ ಸೆ. 9ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ನಡೆದಿಲ್ಲ. ಭಯೋತ್ಪಾದನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣ ಪಡೆಗಳ ನಿಯೋಜನೆಯ ಜತೆಯಲ್ಲಿ ಯೋಧರಿಗೆ ಅಗತ್ಯವಿರುವ ಎಲ್ಲ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ.
ಉಗ್ರಗಾಮಿ ಕೃತ್ಯಗಳಲ್ಲಿ ಶೇ.53ರಷ್ಟು ಇಳಿಕೆ
2019ರ ಆ.5ರಿಂದ 2020ರ ಸೆ. 9ರ ವರೆಗೆ 211 ಭಯೋತ್ಪಾದಕ ಸಂಬಂಧಿ ಘಟನೆ ಗಳು ಕಣಿವೆ ಪ್ರದೇಶ ದಲ್ಲಿ ಸಂಭವಿಸಿವೆ. 2018 ಮತ್ತು 2019ರ ಇದೇ ಅವಧಿಯಲ್ಲಿ 455 ಪ್ರಕರಣಗಳು ನಡೆದಿದ್ದು ಇದಕ್ಕೆ ಹೋಲಿಸಿದರೆ ಶೇ.53ರಷ್ಟು ಕಡಿಮೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.