ಹೊಸ ಸೇನಾನಿಗಳಿಗೆ ಸಮರಾಭ್ಯಾಸ ಹೊಣೆ

ಬಿಜೆಪಿ ಸಂಘಟನೆಗೆ ಅನುಭವಿಗಳ ಜತೆ ಹೊಸ ಚಿಂತನೆಯ ತರುಣರಿಗೆ ಅವಕಾಶ

Team Udayavani, Sep 28, 2020, 5:11 PM IST

ಹೊಸ ಸೇನಾನಿಗಳಿಗೆ ಸಮರಾಭ್ಯಾಸ ಹೊಣೆ

ದೇಶದಲ್ಲಿ ಸತತ ಎರಡನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದು ಬಿಜೆಪಿ ಉಚ್ಛಾ†ಯ ಸ್ಥಿತಿಯಲ್ಲಿರುವ ಹೊತ್ತಿನಲ್ಲೇ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ನೇಮಕದಲ್ಲಿ ಕರ್ನಾಟಕಕ್ಕೆ ಸಿಂಹಪಾಲು ದೊರಕಿದೆ. ರಾಷ್ಟ್ರ ಮಟ್ಟದಲ್ಲಿ ಪಕ್ಷದ ಸಂಘ ಟನಾತ್ಮಕ ವ್ಯವಸ್ಥೆಯಲ್ಲಿ ಎರಡನೇ ಅತೀ ಮಹತ್ವದ ಹುದ್ದೆಯಾದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಸ್ಥಾನದ ಜತೆಗೆ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷಗಿರಿ, ರಾಷ್ಟ್ರೀಯ ವಕ್ತಾರ ಜವಾಬ್ದಾರಿಗಳು ರಾಜ್ಯ ಬಿಜೆಪಿಗೆ ಒಲಿದಿವೆ. ಆ ಮೂಲಕ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಹೊಸ ರಕ್ತ, ಹೊಸ ಮುಖ, ಹೊಸ ನಾಯಕತ್ವ ಬೆಳೆಸಿ ಕೊಳ್ಳಲು ಒತ್ತು ನೀಡಿ ಮುಂದಿನ ಕೆಲವು ದಶಕಗಳ ಕಾಲ ಪಕ್ಷವನ್ನು ಕಟ್ಟಿ, ಬಲಗೊಳಿಸಿ ಬೆಳೆಸುವ ಕಾರ್ಯಕ್ಕೆ ಪಕ್ಷ ಸೇನಾನಿಗಳನ್ನು ಗುರುತಿಸಿ ಹೊಣೆ ವಹಿಸಿದೆ.

ಪ್ರಾದೇಶಿಕ ಪಕ್ಷಗಳ ಪಾರುಪತ್ಯವೇ ಜೋರಾಗಿರುವ ದಕ್ಷಿಣ ಭಾರತ ರಾಜ್ಯಗಳಲ್ಲಿ ಬಿಜೆಪಿ ಪ್ರವೇಶಕ್ಕೆ ಕರ್ನಾಟಕ ಹೆಬ್ಟಾಗಿಲು. ಎರಡನೇ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸುವ ಮೂಲಕ ಪಕ್ಷ ಇನ್ನಷ್ಟು ಬಲ ವಾಗಿ ನೆಲೆಯೂರಲು ಕಸರತ್ತು ನಡೆಸಿದೆ. ಹಾಗಾಗಿ ಸಹಜವಾಗಿಯೇ ಪಕ್ಷದ ವರಿಷ್ಠರು ಕರ್ನಾಟಕಕ್ಕೆ ಹಂತ ಹಂತವಾಗಿ ಪ್ರಾತಿನಿಧ್ಯ ನೀಡಲಾರಂಭಿಸಿದ್ದಾರೆ. ರಾಜ್ಯದಲ್ಲಿ ದಾಖಲೆ ಸಂಖ್ಯೆಯ 25 ಸಂಸದರು ಆಯ್ಕೆಯಾಗಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇಂದ್ರ ಸಂಪುಟದಲ್ಲೂ ರಾಜ್ಯದ ಮೂವರು ಸಚಿವರಿದ್ದು, (ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಇತ್ತೀಚೆಗೆ ಮೃತಪಟ್ಟಿದ್ದಾರೆ), ಪ್ರಮುಖ ಖಾತೆಗಳನ್ನೂ ನೀಡಿ ಆದ್ಯತೆ ಕೊಡಲಾಗಿದೆ. ಸರಕಾರದಲ್ಲಿ ಮಾತ್ರವಲ್ಲದೆ, ಪಕ್ಷದಲ್ಲೂ ರಾಜ್ಯದವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಕರ್ನಾಟಕ ರಾಷ್ಟ್ರ ಮಟ್ಟದಲ್ಲೂ ಸಂಘಟನೆಗೆ ಕೊಡುಗೆ ನೀಡಲು ಅವಕಾಶ ಕೊಟ್ಟಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳಿದ್ದು, ಈಗಿನಿಂದಲೇ ಸಂಘಟನೆ ಬಲಪಡಿಸಿಕೊಳ್ಳಲು ಹೊಸ ಜವಾಬ್ದಾರಿ ವಹಿಸಿದಂತೆ ತೋರುತ್ತಿದೆ.

ರಾಷ್ಟ್ರ ಮಟ್ಟದಲ್ಲಿ ಪಕ್ಷದ ಅತೀ ಮಹತ್ವದ ಜವಾಬ್ದಾರಿ ಎನಿಸಿದ ಸಂಘಟನ ಪ್ರಧಾನ ಕಾರ್ಯದರ್ಶಿ ಜವಾ ಬ್ದಾರಿಯನ್ನು ಈ ಹಿಂದೆಯೇ ರಾಜ್ಯದವರಾದ ಬಿ.ಎಲ್‌. ಸಂತೋಷ್‌ ಅವರಿಗೆ ವಹಿಸಲಾಗಿತ್ತು. ಹಾಗೆಯೇ ಪಕ್ಷ ದಲ್ಲಿ ಎರಡನೇ ಮಹತ್ವದ ಹೊಣೆಗಾರಿಕೆ ಸ್ಥಾನ ಎಂದು ಪರಿಗಣಿಸಲಾಗುವ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಚಿವ ಸಿ.ಟಿ. ರವಿ ಅವರನ್ನು ಆರಿಸಲಾಗಿದೆ.

ರಾಷ್ಟ್ರೀಯ ಮೋರ್ಚಾಗಳ ಪೈಕಿ ಮೊದಲ ಸ್ಥಾನದಲ್ಲಿರುವ ಯುವ ಮೋರ್ಚಾ ಅಧ್ಯಕ್ಷ ಸ್ಥಾನವನ್ನು ಯುವ ಸಂಸದ ಬೆಂಗಳೂರಿನ ತೇಜಸ್ವಿ ಸೂರ್ಯ ಅವರಿಗೆ ನೀಡಲಾಗಿದೆ. ಜತೆಗೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡ ಲಾಗಿದೆ. ಆ ಮೂಲಕ ನಾಲ್ಕು ಪ್ರಮುಖ ಜವಾಬ್ದಾರಿಗಳು ರಾಜ್ಯ ಬಿಜೆಪಿ ನಾಯಕರ ಪಾಲಾಗಿದೆ.

ಹಿಂದೆಲ್ಲ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ ಕರ್ನಾಟಕಕ್ಕೆ ಕಾರ್ಯದರ್ಶಿ ಹುದ್ದೆ ನೀಡಿದರೆ ಹೆಚ್ಚು ಎಂಬಂತಿತ್ತು. ದಿವಂಗತ ಅನಂತ್‌ ಕುಮಾರ್‌ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಂಡು ದಿಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟ ದಲ್ಲೂ ಪ್ರಭಾವಿ ನಾಯಕರಾಗಿ ಬೆಳೆದಿದ್ದರು. ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಹಿಂದೆ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಹಿಂದೆ ಅನಂತ ಕುಮಾರ್‌ ಹೆಗಡೆ ಅವರನ್ನು ಅಚ್ಚರಿ ಎಂಬಂತೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಿ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಅವಕಾಶ ನೀಡಲಾಗಿತ್ತು.

ಆಯ್ಕೆ ಹಿಂದಿರುವ ಅಂಶ: ಸಂಘಟನೆ ಹಿನ್ನೆಲೆ, ಹೋರಾಟ, ಸಂಘಟನ ಚಾತುರ್ಯದ ಜತೆಗೆ ಒಕ್ಕಲಿಗ ಸಮುದಾಯದ ಸಿ.ಟಿ. ರವಿ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಕೇಳಿಬಂದಿತ್ತು. ಅಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ನಾನಾ ಜವಾಬ್ದಾರಿ ನಿರ್ವಹಣೆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಈಗಾಗಲೇ ಗುರುತಿಸಿಕೊಂಡವರು. ಕಾಂಗ್ರೆಸ್‌ ಒಕ್ಕಲಿಗ ಸಮು ದಾಯದ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಹೊತ್ತಿನಲ್ಲೇ ಮೊದಲ ಬಾರಿಗೆ ಒಕ್ಕಲಿಗ ಸಮುದಾಯ ನಾಯಕರೊಬ್ಬರಿಗೆ ಬಿಜೆಪಿ ಪ್ರಮುಖ ಜವಾಬ್ದಾರಿ ವಹಿಸಿದೆ. ಈಗಾಗಲೇ ಡಿ.ವಿ. ಸದಾನಂದ ಗೌಡ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯುವಜನ ಸೆಳೆತದತ್ತ ಚಿತ್ತ: ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಷ್ಟ್ರಾದ್ಯಂತ ಯುವಜನರ ಸಂಘ ಟನೆಯ ಹೊಣೆ ವಹಿಸಲಾಗಿದೆ. ಸಮರ್ಥವಾಗಿ ವಿಚಾರ, ಅಭಿಪ್ರಾಯಗಳನ್ನು ಮಂಡಿಸುತ್ತ ಹೊಸ ತಲೆ ಮಾರಿನ ಸಮೂಹ ಮಾಧ್ಯಮಗಳ ಪರಿಣಾಮಕಾರಿ ಬಳಕೆ ಮೂಲಕ ರಾಷ್ಟ್ರಾದ್ಯಂತ ಗಮನ ಸೆಳೆಯುವ ಭರ ವಸೆ ಮೂಡಿಸಿರುವ ಯುವ ಸಂಸದರಿಗೆ ಪಕ್ಷದ ವರಿ ಷ್ಠರು ಮಹತ್ವದ ಜವಾಬ್ದಾರಿಯನ್ನೇ ನೀಡಿದ್ದಾರೆ. ತೇಜಸ್ವಿ ಸೂರ್ಯ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಅನಂತ ಕುಮಾರ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ ಯಾಗಿ ಆಯ್ಕೆಯಾಗಿದ್ದ ತೇಜಸ್ವಿ ಸೂರ್ಯಗೆ ಈಗಲೂ ಅಚ್ಚರಿ ಹುಟ್ಟಿಸುವ ಹೊಣೆಗಾರಿಕೆ ನೀಡಲಾಗಿದೆ.

ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಹಂಚಿಕೆ ಆ ಪಕ್ಷದ ಆಂತರಿಕ ವಿಚಾರವಾದರೂ ದೀರ್ಘಾವಧಿಯಲ್ಲಿ ಅದು ರಾಜ್ಯಕ್ಕೆ ಲಾಭ ತಂದುಕೊಡುವ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಾಯಕತ್ವ ರೂಪುಗೊಳ್ಳಲು ಸಿಗುವ ಅವಕಾಶ ಎಂಬುದನ್ನು ಮರೆಯುವಂತಿಲ್ಲ. ಅನಂತಕುಮಾರ್‌ ರಾಷ್ಟ ಮಟ್ಟದಲ್ಲಿ ಬೆಳೆಸಿಕೊಂಡ ಪ್ರಭಾವದಿಂದ ರಾಜ್ಯಕ್ಕೆ ಸಾಕಷ್ಟು ನೆರವಾಗಿರುವುದನ್ನು ಬಿಜೆಪಿ ಮಾತ್ರವಲ್ಲದೇ ಅನ್ಯ ಪಕ್ಷಗಳು ನಾಯಕರು ಒಪ್ಪುತ್ತಾರೆ. ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದರಿಂದ ರಾಷ್ಟ್ರೀಯ ನಾಯಕರೊಂದಿಗೆ ನಿರಂತರವಾಗಿ ಒಡನಾಟ ಬೆಳೆಯುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅನುಕೂಲವಾಗಲಿದೆ. ಅದಕ್ಕೆ ಅನಂತ ಕುಮಾರ್‌ ಅವರ ಕಾರ್ಯವೈಖರಿಯೇ ಮಾದರಿ. ಹಾಗೆಯೇ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯ ದರ್ಶಿ ಬಿ.ಎಲ್‌.ಸಂತೋಷ್‌ ಅವರ ಕಾರಣಕ್ಕೂ ರಾಜ್ಯ ಬಿಜೆಪಿಗೆ ನಾನಾ ರೀತಿಯ ಪ್ರಯೋಜನ, ಆದ್ಯತೆ ಸಿಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.

ಹೋರಾಟಕ್ಕಿಂತ ಸಂಘಟನೆಗೆ ಒತ್ತು: ಕೇಂದ್ರ ಹಾಗೂ ರಾಜ್ಯದಲ್ಲಿ ಸುಸ್ಥಿರ ಬಿಜೆಪಿ ಸರಕಾರಗಳಿವೆ. ಇದು ಸಂಘಟನ ಕಾರ್ಯಕ್ಕೆ ವರದಂತೆ ಶಾಪವೂ ಹೌದು. ಹಾಗಾಗಿ ರಾಷ್ಟ್ರೀಯ ಪದಾಧಿಕಾರಿಗಳಿಗೆ ಹೋರಾಟ, ಸಂಘರ್ಷದ ಚಟುವಟಿಕೆಗಳಿಗಿಂತ ಸಂಘಟನೆಗೆ ಒತ್ತು ನೀಡುವ ಹೊಣೆಗಾರಿಕೆ ಹೆಚ್ಚಾಗಿರುತ್ತದೆ. ಎರಡೂ ಕಡೆ ಪಕ್ಷದ ಸರಕಾರವೇ ಅಧಿಕಾರದಲ್ಲಿದೆ ಎಂದು ಮೈಮರೆತರೆ ಪಕ್ಷದ ಬೇರುಗಳು ಸಡಿಲ ವಾಗುವ ಅಪಾಯವಿರುತ್ತದೆ. ಬದಲಿಗೆ ಪಕ್ಷ ಸಂಘಟನೆ ದುರ್ಬಲವಾಗಿರುವ ಕಡೆ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಿರುವ ಕಡೆ ಪಕ್ಷದ ಸಿದ್ಧಾಂತ ಪ್ರತಿ ಪಾದಿಸಿ ಯುವಜನತೆ ಸೇರಿದಂತೆ ಎಲ್ಲ ಸಮು ದಾಯವರಿಗೆ ಮನವರಿಕೆ ಮಾಡಿಕೊಡ ಬೇಕಾಗುತ್ತದೆ. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಕೇಡರ್‌ ವ್ಯವಸ್ಥೆ ಗಟ್ಟಿಗೊಳಿಸಿ ಸಂಘಟನೆ ಬಲಪಡಿಸಬೇಕಾಗುತ್ತದೆ.

ಹೊಸ ರಕ್ತಕ್ಕೆ ಅವಕಾಶ: ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮುರಳೀಧರ ರಾವ್‌, ರಾಮ ಮಾಧವ್‌ ಅವರನ್ನು ಜವಾಬ್ದಾರಿಯಿಂದ ಮುಕ್ತ ಗೊಳಿಸಲಾಗಿದ್ದು, ಮುಂದೆ ಅವರ ಸೇವೆಯನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ. ಒಟ್ಟಾರೆ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ವನ್ನು ಗಮನಿಸಿದರೆ ಉಪಾಧ್ಯಕ್ಷರ ಪೈಕಿ ಕೆಲವರನ್ನು ಮುಂದುವರಿಸಿರುವುದು ಹೊರತುಪಡಿಸಿದರೆ ಹೊಸ ರಕ್ತ, ಹೊಸ ಮುಖಕ್ಕೆ ಅವಕಾಶ ನೀಡಿರುವುದು ಸ್ಪಷ್ಟ. ದೇಶದಲ್ಲಿ ಯುವಜನತೆಯನ್ನು ಸೆಳೆದು ಪಕ್ಷದ ಖಾಯಂ ಬೆಂಬಲಿಗರ ಪಡೆಯನ್ನು ಕಟ್ಟುವ ಜವಾಬ್ದಾರಿಯನ್ನು ಯುವ, ಹೊಸ ಸೇನಾನಿಗಳಿಗೆ ವಹಿಸಲಾಗಿದೆ. ಒಬ್ಬ ವ್ಯಕ್ತಿ ಕೇಂದ್ರಿತವಾಗಿ ಪಕ್ಷವನ್ನು ಬೆಳೆಸುವುದರಿಂದ ಕೆಲವು ರಾಜ್ಯಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಅರಿ ತಿರುವ ಬಿಜೆಪಿ ವರಿಷ್ಠರು ಎರಡನೇ ಹಂತದ ನಾಯ ಕರನ್ನು ರೂಪಿಸುವ ಕಾರ್ಯಕ್ಕೆ ಈಗಲೇ ಒತ್ತು ನೀಡಿ ದ್ದಾರೆ. ತಮ್ಮದೇ ಸರಕಾರ ಕೇಂದ್ರದಲ್ಲಿರುವುದರಿಂದ ಹೋರಾಟವಿಲ್ಲದ ಹೊತ್ತಿನಲ್ಲಿ ಸಂಘಟನೆಗೆ ಒತ್ತು ನೀಡಲು ಹೊಸ ಪಡೆಯನ್ನು “ಸಮರಾಭ್ಯಾಸ’ಕ್ಕೆ ಅಣಿ ಗೊಳಿಸಿದ್ದಾರೆ.

– ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.