ಭೂಮಿಯ ಮೇಲಿನ ಅತ್ಯಂತ ಎತ್ತರದ ಪ್ರಾಣಿಗೆ ಮುಳುವಾಗಿದ್ದು ಏನು?
Team Udayavani, Sep 28, 2020, 7:36 PM IST
ಜಿರಾಫೆ-ಉದ್ದ ಕತ್ತಿನ ಈ ಮುದ್ದಾದ ಪ್ರಾಣಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಭೂಮಿಯ ಮೇಲಿನ ಅತ್ಯಂತ ಎತ್ತರದ ಪ್ರಾಣಿ ಎನ್ನುವ ಹೆಗ್ಗಳಿಕೆ ಇದರದ್ದು.
ಉದ್ದದ ಜತೆಗೆ ಜಿರಾಫೆಯ ತಲೆಯ ಮೇಲಿನ ಕೊಂಬಿನಂತಹ ರಚನೆ ಈ ಪ್ರಾಣಿಯನ್ನು ಇನ್ನೂ ಆಕರ್ಷಕವಾಗಿಸುತ್ತದೆ. ಆದರೆ ಈ ಎರಡು ಅಂಶಗಳೇ ಅವುಗಳ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ ಎನ್ನುವುದು ಗೊತ್ತೆ? ಈ ಬಗ್ಗೆ ನಡೆದ ಸಂಶೋಧನೆಯೊಂದು ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ. ಅದು ಹೇಗೆ ಎನ್ನುವುದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಕಳೆದ ಫೆಬ್ರವರಿ 29ರಂದು ದಕ್ಷಿಣ ಆಫ್ರಿಕಾದ ನೈಸರ್ಗಿಕ ಉದ್ಯಾನ ರಾಕ್‌ವುಡ್ ಕನ್ಸರ್ವೇಶನ್‌ನಲ್ಲಿ ಮಿಂಚು ಬಡಿದು ಎರಡು ಜಿರಾಫೆಗಳು ಮರಣ ಹೊಂದಿದ್ದವು. ಈ ಸಾವಿನ ಬಗ್ಗೆ ಸಂಶಯ ಹೊಂದಿದ ಸಂಶೋಧಕರು ಅಧ್ಯಯನ ನಡೆಸಲು ಮುಂದಾದರು. ಹೊರಾಂಗಣದಲ್ಲಿ ಓಡಾಡುವ ಜೀವಿಗಳು ಮತ್ತು ಮಿಂಚಿನ ಆಘಾತಗಳ ನಡುವಿನ ಸಂಬಂಧ ಈ ಸಂಶೋಧನೆಯ ವಿಷಯವಾಗಿತ್ತು. ಈ ಅಧ್ಯಯನ ವರದಿಯಲ್ಲಿ ಕುತೂಹಲ ಸಂಗತಿಗಳು ಬಹಿರಂಗಗೊಂಡಿವೆ.
ಜಿರಾಫೆಗಳ ಸಾವಿನ ಸುತ್ತ…
ಸಿಸ್ಕ ಪಿ.ಜೆ. ಶೀಜನ್ ಎನ್ನುವ ರಾಕ್‌ವುಡ್ ಕನ್ಸರ್ವೇಶನ್‌ನ ವಿಜ್ಞಾನಿ ಜಿರಾಫೆ ಸಾವಿನ ಅಧ್ಯಯನಕ್ಕೆ ನೇತೃತ್ವ ನೀಡಿದ್ದರು. ಎತ್ತರವಾಗಿರುವುದು ಜಿರಾಫೆಗಳಿಗೆ ಮಿಂಚು ಹೊಡೆಯಲಿರುವ ಮುಖ್ಯ ಕಾರಣ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿರುವುವಂತಹದ್ದೇ. ಆದರೆ ಇದುವರೆಗೆ ಈ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆದಿರಲಿಲ್ಲ. ಎತ್ತರ ಮಾತ್ರವಲ್ಲ ಜಿರಾಫೆಗೆ ಮಿಂಚು ಹೊಡೆಯಲಿರುವ ಇನ್ನೊಂದು ಮುಖ್ಯ ಕಾರಣದ ಬಗ್ಗೆಯೂ ಸಂಶೋಧನೆ ಬೆಟ್ಟು ಮಾಡಿ ತೋರಿಸುತ್ತದೆ.
ಯಾವುದು ಆ ಅಂಶ?
ಜಿರಾಫೆಯ ತಲೆಯ ಮೇಲಿರುವ ಸಣ್ಣ ಕೊಂಬಿನಂತಹ ರಚನೆ ಮಿಂಚನ್ನು ಸೆಳೆದುಕೊಳ್ಳುತ್ತದೆ. ಶೀಜನ್‌ನ ಅಧ್ಯಯನದ ಪ್ರಕಾರ, ರಾಕ್‌ವುಡ್‌ನ 5 ವರ್ಷದ ಜಿರಾಫೆ ತಲೆ ಮೇಲೆ ನೇರವಾಗಿ ಮಿಂಚು ಹರಿದು ಅದು ಸಾವನ್ನಪ್ಪಿತ್ತು. ಆ ಮೃತದೇಹದ ಸುಮಾರು ಐದು ಅಡಿ ಅಂತರದಲ್ಲಿ ನಾಲ್ಕರ ಹರೆಯದ ಇನ್ನೊಂದು ಜಿರಾಫೆಯ ನಿಶ್ಚಲ ದೇಹ ಕಂಡು ಬಂದಿತ್ತು. ನೇರವಾಗಿ ತಲೆಗೆ ಮಿಂಚು ಹೊಡೆದು ಹಿರಿಯ ಜಿರಾಫೆ ಸಾವಿಗೀಡಾಗಿತ್ತು ಎನ್ನುವುದಕ್ಕೆ ಅದರ ತಲೆ ಮೇಲಿದ್ದ ಗಾಯವೇ ಸಾಕ್ಷಿಯಾಗಿತ್ತು. ಪೋಸ್ಟ್ ಮೋರ್ಟ್‌ಂನಲ್ಲೂ ಇದು ಸಾಬೀತಾಗಿತ್ತು. ಪಕ್ಕದಲ್ಲಿದ್ದ ಜಿರಾಫೆಗೆ ಬದಿಯಿಂದ ಶಾಕ್(ಸೈಡ್ ಫ್ಲಾಷ್)ಹೊಡೆದಿದ್ದು ಅದರ ಸಾವಿಗೆ ಕಾರಣವಾಗಿತ್ತು.(ಮಿಂಚು ಹೊಡೆದ ಸಂದರ್ಭದಲ್ಲಿ ಅದರ ಶಕ್ತಿ ಪಕ್ಕಕ್ಕೂ ಪ್ರವಹಿಸುತ್ತದೆ). ತೆರೆದ ಸ್ಥಳದಲ್ಲಿ ಓಡಾಡುವ ಜಿರಾಫೆಗಳ ತಲೆ ಮೇಲಿರುವ ಕೊಂಬುಗಳು ಆ್ಯಂಟೆನಾ ರೀತಿ ಕೆಲಸ ಮಾಡಿ ಮಿಂಚನ್ನು ಆಕರ್ಷಿಸುತ್ತವೆ. ಇದು ಅವುಗಳಿಗೆ ಮಿಂಚು ಹೆಚ್ಚಾಗಿ ಹೊಡೆಯಲು ಕಾರಣ ಎಂದು ವರದಿಯಲ್ಲಿ ಶೀಜನ್ ವಿವರಿಸಿದ್ದಾರೆ.
ಮಿಂಚು ಹೇಗೆಲ್ಲ ಪ್ರಾಣಿಗಳನ್ನು ಕೊಲ್ಲುತ್ತದೆ ಗೊತ್ತೆ?
ಮಿಂಚಿನ ಆಘಾತ ಪ್ರಾಣಿಗಳನ್ನು ನಾಲ್ಕು ರೀತಿಯಲ್ಲಿ ಕೊಲ್ಲುತ್ತವೆ. ಮೊದಲನೆಯದಾಗಿ ಮಿಂಚು ನೇರವಾಗಿ ಹೊಡೆದು ಪ್ರಾಣಿಗಳು ಸಾಯುತ್ತವೆ. ಎರಡನೇ ರೀತಿಯಲ್ಲಿ ಪಕ್ಕದ ಪ್ರಾಣಿಗೆ ಮಿಂಚು ಹೊಡೆದು ಸೈಡ್ ಫ್ಲಾಷ್ ಆಗಬಹುದು. ಮೂರನೆಯದಾಗಿ ನೆಲದ ಮೂಲಕ ಪ್ರವಹಿಸಿ ಶಾಕ್ ಹೊಡೆಯಬಹುದು. ಕೊನೆಯದಾಗಿ ಮಿಂಚು ಪ್ರವಹಿಸಿದ ಯಾವುದಾದರೂ ವಸ್ತುವನ್ನು ಸ್ಪರ್ಶಿಸುವುದು ಕೂಡಾ ಮಾರಣಾಂತಿಕವಾಗುತ್ತದೆ.
ರಮೇಶ್ ಬಿ., ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.