ವಿಮೆ ಇದ್ದವನೇ ಶೂರ!


Team Udayavani, Sep 28, 2020, 8:59 PM IST

Isiri-tdy-3

ವಾಹನವೆಂದರೆ ಅದಕ್ಕೊಂದು ವಿಮೆ ಇರಲೇಬೇಕು. ಇಲ್ಲ, ನಾವು ಮಾಡಿಸಲ್ಲ, ಅದನ್ನು ಮಾಡಿಸಬೇಕೋ ಬೇಡವೋ ಅನ್ನುವುದು ನಮ್ಮ ಆಯ್ಕೆ ಅನ್ನೋ ಹಾಗೆ ಇಲ್ಲವೇ ಇಲ್ಲ. ದೇಶದಕಾನೂನಿನ ಪ್ರಕಾರ, ವಾಹನಗಳಿಗೆ ವಿಮೆ ಕಡ್ಡಾಯ.

ವಿಮೆ ಎಂದಾಕ್ಷಣ ನಮ್ಮ ಜನ ಮೂಗು ಮುರಿಯೋದೇ ಹೆಚ್ಚು. ಅದರಲ್ಲೂ ಆರೋಗ್ಯ ವಿಮೆ ವಿಚಾರದಲ್ಲಿ ಭಾರತೀಯರಿಗೆ ಇನ್ನೂ ಅರಿವು ಬಂದಿಲ್ಲ ಎಂದರೆ ತಪ್ಪಾಗಲಾರದೇನೋ. ಅಂಥದ್ದರಲ್ಲಿ ವಾಹನಗಳಿಗೆ ಮಾಡಿಸುವ ವಿಮೆ ವಿಚಾರದಲ್ಲಿ ನಮ್ಮ ಜನರಿಗೆ ಇನ್ನೂಕೆಲವೊಂದು ಸಂದೇಹಗಳು, ನಿರ್ಲಕ್ಷ್ಯಗಳು ಇದ್ದೇ ಇವೆ. ಕೆಲವರಂತೂ ತಮ್ಮ ವಾಹನಗಳಿಗೆ ವಿಮೆ ಮಾಡಿಸದೇ ತಪ್ಪಿಸಿಕೊಂಡು ಓಡಾಡುವುದನ್ನು ನೋಡಬಹುದು. ಆದರೆ, ಇದು ತಪ್ಪು. ವಾಹನವೆಂದರೆ ಅದಕ್ಕೊಂದು ವಿಮೆ ಇರಲೇಬೇಕು. ಇಲ್ಲ, ನಾವು ಮಾಡಿಸಲ್ಲ, ಅದನ್ನು ಮಾಡಿಸಬೇಕೋ ಬೇಡವೋ ಅನ್ನುವುದು ನಮ್ಮ ಆಯ್ಕೆ ಅನ್ನೋ ಹಾಗೆ ಇಲ್ಲವೇ ಇಲ್ಲ. ದೇಶದಕಾನೂನಿನ ಪ್ರಕಾರ, ವಾಹನಗಳಿಗೆ ವಿಮೆಕಡ್ಡಾಯ.ಸದ್ಯ ವಾಹನಗಳಿಗೆ ಎರಡು ರೀತಿಯ ವಿಮೆ ಮಾಡಿಸಲಾಗುತ್ತದೆ. ಅವುಗಳಲ್ಲಿ ಮೊದಲನೆಯದು ಥರ್ಡ್‌ ಪಾರ್ಟಿ ವಿಮೆ, ಮತ್ತೂಂದು ಕಾಂಪ್ರಹೆನ್ಸೀವ್‌ ವಿಮೆ.

ಏನಿದು ಥರ್ಡ್‌ ಪಾರ್ಟಿ ವಿಮೆ? :  ಸದ್ಯ ಅತ್ಯಂತ ಸಾಮಾನ್ಯವಾಗಿ ಬಳಕೆಯಲ್ಲಿ ಇರುವಂಥ ವಿಮಾ ವಿಧಾನ ಇದು. ನಿಮ್ಮ ವಾಹನದಿಂದ ಮೂರನೇ ವ್ಯಕ್ತಿಗೆ ಅಥವಾ ಬೇರೊಂದು ವಾಹನಕ್ಕೆ ಅಥವಾ ಯಾವುದಾದರೂ ಆಸ್ತಿಗೆ ಹಾನಿಯಾದಲ್ಲಿ ಈ ವಿಮೆ ಮೂಲಕ ಪರಿಹಾರ ಸಿಗುತ್ತದೆ.ಕಾಂಪ್ರಹೆನ್ಸೀವ್‌ ವಿಮೆ ಅಂದರೆ ಏನು? :  ವಾಹನಗಳ ವಿಮೆ ವಿಚಾರದಲ್ಲಿ ಅತ್ಯಂತ ಸೂಕ್ತವಾದ ವಿಮಾ ವಿಧಾನವಿದು. ಇದರಲ್ಲಿ ಥರ್ಡ್‌ ಪಾರ್ಟಿ ಮತ್ತು ನಮ್ಮ ಸ್ವಂತ ವಾಹನಕ್ಕೂ ವಿಮಾ ಪರಿಹಾರ ಅನ್ವಯವಾಗುತ್ತದೆ.

 

ಯಾವ ವಾಹನಗಳಿಗೆ, ಹೇಗೆ ವಿಮೆ? :

 

  1. ಖಾಸಗಿ ಕಾರು ವಿಮೆ: ವ್ಯಕ್ತಿಯೊಬ್ಬರು ತಮ್ಮ ಸ್ವಂತ ಬಳಕೆಗಾಗಿ ಖರೀದಿಸುವಕಾರುಗಳಿಗೆ ಮಾಡಿಸುವ ವಿಮೆ ಇದು. ಈ ವಿಮೆಯಲ್ಲಿ ಅಪಘಾತ, ಬೆಂಕಿ, ನೈಸರ್ಗಿಕ ವಿಕೋಪಗಳು,ಕಳ್ಳತನ ಸೇರಿದಂತೆ ಯಾವುದೇ ರೀತಿಯಲ್ಲಿ ವಾಹನಗಳಿಗೆ ತೊಂದರೆ ಅಥವಾ ಮಾಲೀಕರಿಗೆ ಹಾನಿಯಾದರೆ ಪರಿಹಾರ ಸಿಗುತ್ತದೆ. ಜತೆಗೆ ಥರ್ಡ್‌ ಪಾರ್ಟಿ ವ್ಯಕ್ತಿಗೆ ಹಾನಿಯಾದರೂ ಕವರ್‌ ಆಗುತ್ತದೆ.

      2.ದ್ವಿಚಕ್ರ ವಾಹನ ವಿಮೆ: ಸ್ಕೂಟರ್‌ ಅಥವಾ ಬೈಕುಗಳಿಗೆ ಮಾಡಿಸುವ ವಿಮೆ ಇದು. ಇದರಲ್ಲೂ ಅಪಘಾತ, ವಿಕೋಪಗಳು, ಬೆಂಕಿ,ಕಳ್ಳತನ ಸೇರಿದಂತೆ ಯಾವುದೇ ರೀತಿಯ ಹಾನಿ ಅಥವಾ ಮಾಲೀಕರಿಗೆ, ಥರ್ಡ್‌ ಪಾರ್ಟಿಯವರಿಗೆ ಹಾನಿಯಾದರೆ ನಷ್ಟ ತುಂಬಿಕೊಡಲಾಗುತ್ತದೆ. ಇದರಲ್ಲಿ ಬೈಕು ಓಡಿಸುವಾತ ಮತ್ತು ಹಿಂದೆಕುಳಿತಿರುವವರಿಗೂ ವಿಮಾ ಪರಿಹಾರ ಅನ್ವಯವಾಗುತ್ತದೆ.

 

  1. ವಾಣಿಜ್ಯ ವಾಹನ ವಿಮೆ: ಲಾರಿಗಳು, ಬಸ್‌ ಗಳು, ಭಾರೀ ಗಾತ್ರದ ವಾಣಿಜ್ಯ ವಾಹನಗಳು, ಲಘು ವಾಣಿಜ್ಯ ವಾಹನಗಳು, ಬಹುಪಯೋಗಿ ವಾಹನಗಳು,ಕೃಷಿ ವಾಹನಗಳು, ಟ್ಯಾಕ್ಸಿ,ಕ್ಯಾಬ್, ಆ್ಯಂಬುಲೆನ್ಸ್ ಗಳು, ಆಟೋ ರಿಕ್ಷಾಗಳು ಸೇರಿ ಎಲ್ಲಾ ರೀತಿಯ ವಾಣಿಜ್ಯ ವಾಹನಗಳಿಗೆ ಈ ವಿಮೆ ಅನ್ವಯವಾಗುತ್ತದೆ.

ಆ್ಯಡ್‌ ಆನ್‌ಗಳು :  ಝೀರೋ ಡಿಪ್ರಿಸಿಯೇಶನ್‌ ದಿನಕಳೆದಂತೆ ನಿಮ್ಮ ವಾಹನಗಳಿಗೆ ವಯಸ್ಸಂತೂ ಆಗೇ ಆಗುತ್ತದೆ. ಮೊದಲ ವರ್ಷ ನಿಮ್ಮ ವಾಹನಕ್ಕೆಕಟ್ಟಿದ ಬೆಲೆಯನ್ನು ಎರಡನೇ ವರ್ಷ ಕಟ್ಟಲಾಗುವುದಿಲ್ಲ. ಅಂದರೆ, ಎರಡನೇ ವರ್ಷ ನಿಮ್ಮ ವಾಹನಕ್ಕೆ ವಿಮೆ ಮಾಡಿಸಲು ಹೋದಾಗ, ವಾಹನದ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ. ಇದನ್ನು ಕಡಿಮೆ ಮಾಡಬಾರದು ಎಂಬ ಉದ್ದೇಶದಿಂದ ಝೀರೋ ಡಿಪ್ರಿಸಿಯೇಶನ್‌ ಆ್ಯಡ್‌ ಆನ್‌ ಖರೀದಿಸ ಬಹುದು. ಆಗ, ಮೊದಲನೇ ವರ್ಷ, ಅಂದರೆ ಹೊಸಕಾರು ಖರೀದಿ ಮಾಡುವಾಗ ವಾಹನಕ್ಕೆ ಇದ್ದ ಮೌಲ್ಯವನ್ನು ಹಾಗೆಯೇ ಮುಂದುವರಿಸಲಾಗುತ್ತದೆ.

ಎಂಜಿನ್‌ ರಕ್ಷಣೆ :  ಇತ್ತೀಚಿನ ದಿನಗಳಲ್ಲಿ ಎಂಜಿನ್‌ ಮತ್ತು ಗೇರ್‌ಬಾಕ್ಸ್ ಗಳು ಹಾಳಾದರೆ ಅವುಗಳನ್ನು ಹಣ ವೆಚ್ಚ ಮಾಡದೇ ಸರಿ ಮಾಡಿಸಿಕೊಳ್ಳುವ ವ್ಯವಸ್ಥೆ ಬಂದಿದೆ. ಅಂದರೆ, ನಿಮ್ಮ ವಿಮೆ ಜತೆಗೆ, ಎಂಜಿನ್‌ ರಕ್ಷಣೆಕವರ್‌ ಮಾಡುವ ಆ್ಯಡ್‌ ಆನ್‌ ಹಾಕಿಸಿಕೊಂಡರೆ, ಎಂಜಿನ್‌ ಮತ್ತು ಗೇರ್‌ಬಾಕ್ಸ್  ಅನ್ನು ವಿಮೆಯೊಳಗೇ ಸರಿ ಮಾಡಿಕೊಡಲಾಗುತ್ತದೆ. ಆಗ ರಿಪೇರಿ ಮಾಡುವಾಗ ಹೆಚ್ಚು ವೆಚ್ಚ ಮಾಡುವುದು ತಪ್ಪುತ್ತದೆ.

ಸರ್ವೀಸ್‌ಕಾಸ್ಟ್… : ಕಾರು ಖರೀದಿ ಕಷ್ಟದ ಮಾತಲ್ಲ, ಆದರೆ ಅದನ್ನು ಸರಿಯಾಗಿ ಸರ್ವೀಸ್‌ ಮಾಡಿಸಿಕೊಂಡು ನಿರ್ವಹಣೆ ಮಾಡುವುದುಕಷ್ಟದ ಮಾತು. ಹೌದು, ಇದಕ್ಕಾಗಿಯೇಕೆಲವುಕಾರು ಕಂಪನಿಗಳು ಎರಡು ವರ್ಷ ಅಥವಾ ಮೂರು ವರ್ಷಗಳವರೆಗೆ ಸರ್ವೀಸ್‌ ವೆಚ್ಚ ಬರದಂತೆ ವಿಮೆಯಲ್ಲೇ ಆ್ಯಡ್‌ ಆನ್‌ ಮಾಡಿಸಿರುತ್ತವೆ. ಇದರ ಪ್ರಕಾರ, ಆರಂಭದ ವರ್ಷಗಳಲ್ಲಿಕಾರು ಸರ್ವೀಸ್‌ ಉಚಿತವಾಗಿಯೇ ಆಗುತ್ತದೆ.ಕಾರಿನ ಯಾವುದಾದರೂ ಭಾಗ ಹಾಳಾಗಿದ್ದರೂ ಫ್ರೀಯಾಗಿಯೇ ಹಾಕಿಕೊಡಲಾಗುತ್ತದೆ. ಜತೆಗೆ ಎಂಜಿನ್‌ ಆಯಿಲ್‌ ಬದಲಾವಣೆಗೂ ಹಣ ಕೊಡಬೇಕಾಗಿಲ್ಲ.

ಬಂಪರ್‌ ಟು ಬಂಪರ್‌ :  ಇತ್ತೀಚಿನ ದಿನಗಳಲ್ಲಿ ಇದು ಮಾಮೂಲಿನ ಇನ್ಶುರೆನ್ಸ್ ಆಗಿದೆ. ನಿಮ್ಮಕಾರಿಗೆ ಅಪಘಾತವಾಗಿ ಏನಾದರೂ ಹಾನಿಯಾದರೆ, ಆ ಭಾಗವನ್ನು ವಿಮೆ ಅಡಿಯಲ್ಲೇ ತಂದು ಹಾಕಿಕೊಡಲಾಗುತ್ತದೆ. ಅಂದರೆ, ನಿಮ್ಮ ವಾಹನಕ್ಕೆ ಶೇ.100ರಷ್ಟು ರಕ್ಷಣೆಯನ್ನು ಒದಗಿಸುತ್ತದೆ.

ರೋಡ್‌ ಸೈಡ್‌ ಅಸಿಸ್ಟೆನ್ಸ್:  ನೀವು ಎಲ್ಲೋ ಹೋಗಿರುತ್ತೀರಾ, ದಿಢೀರನೆ ನಿಮ್ಮ ಕಾರು ಕೆಟ್ಟುಹೋಯಿತು ಎಂದಿಟ್ಟುಕೊಳ್ಳಿ. ಆಗ ನೀವೇನು ಮಾಡಬಹುದು? ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬಹುದು ಅಷ್ಟೇ. ಇದನ್ನು ತಪ್ಪಿಸುವ ಸಲುವಾಗಿ ರೋಡ್‌ ಸೈಡ್‌ ಅಸಿಸ್ಟೆನ್ಸ್ ಎಂಬವ್ಯವಸ್ಥೆ ತರಲಾಗಿದೆ. ಇದನ್ನು ಮಾಡಿಸಿಕೊಂಡರೆ, ನಿಮ್ಮ ಕಾರು ಎಲ್ಲೇ ಕೆಟ್ಟು, ಹಾಳಾಗಿ ನಿಂತುಕೊಳ್ಳಲಿ, ಒಂದು ಕರೆ ಮಾಡಿದರೆ ಸಾಕು, ಅವರೇಬಂದು ರಿಪೇರಿ ಮಾಡುತ್ತಾರೆ ಅಥವಾ ತಮ್ಮ ಸರ್ವೀಸ್‌ ಸ್ಟೇಷನ್‌ಗೆಟೋ ಮಾಡಿಕೊಂಡು ಹೋಗುತ್ತಾರೆ, ಅದೂ ಯಾವುದೇ ವೆಚ್ಚವಿಲ್ಲದೇ!

 

­ಸಿ.ಜೆ. ಸೋಮಶೇಖರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.