ತ್ಯಾಜ್ಯಮಯವಾಗಿರುವ ಹೆಜಮಾಡಿ ಬಂದರು ಪ್ರದೇಶ
ಇನ್ನೂ ಮುಕ್ತಿ ಕಾಣದ ಕಸದ ಸಮಸ್ಯೆ
Team Udayavani, Sep 29, 2020, 4:14 AM IST
ಪಡುಬಿದ್ರಿ: ಹೆಜಮಾಡಿ ಬಂದರು ಪ್ರದೇಶ ವ್ಯಾಪ್ತಿಯ ಕಡಲ ತಡಿ ಸಂಪೂರ್ಣ ತ್ಯಾಜ್ಯಮಯವಾಗಿದೆ. ಪ್ಲಾಸ್ಟಿಕ್, ಬಾಟಲಿ, ರಬ್ಬರ್, ಕಸ ಕಡ್ಡಿಗಳು ಈ ಭಾಗದ ಕಡಲ ತೀರವನ್ನು ಸೇರಿವೆ. ಸರ್ಫಿಂಗ್ ತಾಣವೂ ಇಲ್ಲೇ ಸಮೀಪದ ದ. ಕ. ಜಿಲ್ಲೆಯ ಸಸಿಹಿತ್ಲವಿನಲ್ಲಿದ್ದು ಇಲ್ಲಿಗೆ ಬರುತ್ತಿರುವ ಪ್ರವಾಸಿಗರಿಗೆ, ದೇಶ-ವಿದೇಶಗಳಿಂದ ಇಲ್ಲಿಗೆ ಬರುವ ಸರ್ಫಿಂಗ್‌ಪಟುಗಳಿಗೆ ಅಸಹ್ಯವುಂಟು ಮಾಡುತ್ತಿವೆ.
ಉಭಯ ಜಿಲ್ಲೆಗಳ ಗಡಿ ಭಾಗವಾಗಿರುವ ಇಲ್ಲಿಗೆ ಪ್ರತಿ ವರ್ಷ ಮಳೆಗಾಲ ಮುಗಿಯುತ್ತಿದ್ದಂತೆ ಶಾಂಭವಿ ಮತ್ತು ನಂದಿನಿ ಹೊಳೆಗಳ ತ್ಯಾಜ್ಯಗಳು ಭೌಗೋಳಿಕವಾಗಿ ಅಳಿವೆಯ ಮೂಲಕ ಸಮುದ್ರವನ್ನು ಸೇರಿಬಿಡುತ್ತದೆ. ಇದೇ ಮರಳಿ ಹೆಜಮಾಡಿಯ ಭಾಗದಲ್ಲಿ ಶೇಖರಣೆಯಾಗುತ್ತಿದ್ದು, ವಿಲೇವಾರಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಮಳೆಗಾಲ ಅತೀ ದೀರ್ಘವಾಗಿದ್ದು, ಎರಡೆರಡು ಬಾರಿ ಇಲ್ಲಿ ತ್ಯಾಜ್ಯ ಸಂಗ್ರಹಗೊಂಡು ಮರಳಿನಡಿ ಹೂತು ಹೋಗಿದೆ. ಕಳೆದ ವಾರದವರೆಗಿನ ತ್ಯಾಜ್ಯಗಳು ನೆರೆಯ ಸಂದರ್ಭ ಕಡಲತಡಿಯ ಮರಳಿನಡಿ ಹೂತುಹೋಗಿದ್ದು, ಇನ್ನೊಂದು ಮಳೆಗಾಲದಲ್ಲಷ್ಟೇ ಹೊರಸೂಸಬೇಕಿದೆ. ಬಂದರು ಪ್ರದೇಶ ವ್ಯಾಪ್ತಿಯ ಸುಮಾರು 3ಕಿ.ಮೀ.ನಷ್ಟು ಕಡಲತಡಿಯಲ್ಲಿ ಲೋಡುಗಟ್ಟಲೆಯಾಗಿ ಈ ತ್ಯಾಜ್ಯಗಳು ಹರಡಿಕೊಂಡಿವೆ.
ಸ್ವಚ್ಛ ಭಾರತ್ ಪರಿಕಲ್ಪನೆಯ ವಿಕಲ್ಪ
ಸ್ವತ್ಛಭಾರತ್ ಯೋಜನೆಯನ್ನು ಜನತೆ ಬೆಂಬಲಿಸಿದೆ. ಆದರೂ ಇದರ ವಿಕಲ್ಪವೆನ್ನುವಂತೆ ನಮ್ಮಲ್ಲಿಯೇ ಸಮುದ್ರ ಮತ್ತು ನದಿಗಳಿಗೆ ತ್ಯಾಜ್ಯ ಎಸೆಯುವವರ ಸಂಖ್ಯೆ ಅ ಧಿಕವಾಗಿದ್ದು ವರ್ಷದಿಂದ ವರ್ಷಕ್ಕೆ ತ್ಯಾಜ್ಯ ರಾಶಿ ಹೆಚ್ಚಾಗುತ್ತಲೇ ಇದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಳ್ಳಬೇಕಿದೆ.
ಮಂತ್ರ ಸರ್ಫ್ ಕ್ಲಬ್ ನಿರಂತರ ಸ್ವಚ್ಛತಾ ಅಭಿಯಾನ
ಈ ತ್ಯಾಜ್ಯಮಯ ಪ್ರದೇಶವು ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದರೂ ಇಲ್ಲಿ ನಿರಂತರ ಸರ್ಫಿಂಗ್ ನಡೆಸುವ ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್ ಈ ಭಾಗದಲ್ಲಿ ವರ್ಷವಿಡೀ ನಿರಂತರ ಸ್ವಚ್ಛತಾ ಅಭಿಯಾನ ನಡೆಸುತ್ತಾ ಬಂದಿದೆ. ಆದರೆ ವರ್ಷ ಪೂರ್ತಿ ತ್ಯಾಜ್ಯ ತೆಗೆದರೂ ಮತ್ತಷ್ಟು ತ್ಯಾಜ್ಯಗಳು ಅಲ್ಲೇ ಉಳಿಯುವಂತಾಗಿದೆ. ಮುಂದಿನ 6 ತಿಂಗಳ ಕಾಲ ಇಲ್ಲಿ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಸ್ವತ್ಛತಾ ಅಭಿಯಾನ ನಡೆಸಲು ಅವರು ನಿರ್ಧರಿಸಿದ್ದಾರೆ. ಇಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳ ಮಂದಿಯೂ ಆಗಾಗ್ಗೆ ಬಂದು ಗುಜುರಿ ಎತ್ತಿ ಮಾರುತ್ತಿದ್ದು ಈ ಎರಡು ತಿಂಗಳಲ್ಲಿ ಹೊನ್ನಾವರದ ರಮೇಶ್ ಸುಮಾರು 15,000ರೂ. ಸಂಪಾದಿಸಿದ್ದಾರೆ.
ಅಭಿಯಾನಕ್ಕೆ ಕೈಜೋಡಿಸಿ
ಮುಂದಿನ 6 ತಿಂಗಳಲ್ಲಿ ವಾರಕ್ಕೊಂದು ಬಾರಿ ಆಸಕ್ತ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಲಾಗುವುದು. ಇಲ್ಲಿ ವಿದೇಶೀಯರು ಅ ಧಿಕವಾಗಿ ಆಗಮಿಸುತ್ತಾರೆ. ಹಾಗಾಗಿ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ.
-ಗೌರವ್ ಹೆಗ್ಡೆ, ನಿರ್ದೇಶಕರು, ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮೂಲ್ಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.