ಸದ್ಯದಲ್ಲೇ ಪೇಯ್ಡ ಆಗಲಿದೆ ಗೂಗಲ್ ಮೀಟ್!
ಲೈವ್ ಸ್ಟ್ರೀಮಿಂಗ್ ಮೂಲಕ 1ಲಕ್ಷ ಜನರನ್ನು ತಲುಪುವ ಅವಕಾಶ ಸಿಗಲಿದೆ.
Team Udayavani, Sep 29, 2020, 11:06 AM IST
![ಸದ್ಯದಲ್ಲೇ ಪೇಯ್ಡ ಆಗಲಿದೆ ಗೂಗಲ್ ಮೀಟ್!](https://www.udayavani.com/wp-content/uploads/2020/09/Google-N-620x388.jpg)
![ಸದ್ಯದಲ್ಲೇ ಪೇಯ್ಡ ಆಗಲಿದೆ ಗೂಗಲ್ ಮೀಟ್!](https://www.udayavani.com/wp-content/uploads/2020/09/Google-N-620x388.jpg)
ನವದೆಹಲಿ: “ಗೂಗಲ್ ಮೀಟ್’ನಲ್ಲಿ ಗಂಟೆಗಟ್ಟಲೆ ಸಭೆಗಳನ್ನು, ವೆಬಿನಾರ್‌ಗಳನ್ನು ನಡೆಸುವ ಉಚಿತ ಸೌಲಭ್ಯಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ಅ.1ರಿಂದ “ಗೂಗಲ್ ಮೀಟ್ ಫ್ರೀ ವರ್ಷನ್ ‘ನಡಿ ನಡೆಸಲಾಗುವ ಸಭೆಗಳು, ವೆಬಿನಾ ರ್‌ಗಳು ಅಥವಾ ಆನ್‌ಲೈನ್ ತರಗತಿಗಳ ಕಾಲಾವಧಿ ಕೇವಲ 60 ನಿಮಿಷಕ್ಕೆ ಸೀಮಿತವಾಗಲಿವೆ.
ಈ ಹೊಸ ನಿಯಮ “ಜಿ ಸೂಟ್’ ಹಾಗೂ “ಜಿ ಸೂಟ್ ಫಾರ್ ಎಜುಕೇಷನ್’ ಗ್ರಾಹಕರಿಗೂ ಅನ್ವಯವಾಗಲಿದೆ. “ಜಿ ಸೂಟ್’ ಹಾಗೂ “ಜಿ ಸೂಟ್ ಫಾರ್ ಎಜುಕೇಷನ್’ ಸೌಲಭ್ಯಗಳನ್ನು ಪಡೆ ಯ ಬಯಸುವ ಯಾವುದೇ ಸಂಸ್ಥೆ ಮಾಸಿಕ ಅಂದಾಜು 1,800 ರೂ.ಗ ಳನ್ನು ನೀಡಿಚಂದಾದಾರರಾಗ ಬೇಕಿದೆ. ಆಸೌಲಭ್ಯಗ ಳಡಿ, ಏಕ ಕಾಲದಲ್ಲಿ 250 ಸಭಿಕರನ್ನು ಸೇರಿಸಿ ಸಭೆ ನಡೆಸಲು, ಲೈವ್ ಸ್ಟ್ರೀಮಿಂಗ್ ಮೂಲಕ 1ಲಕ್ಷ ಜನರನ್ನು ತಲುಪುವ ಅವಕಾಶ ಸಿಗಲಿದೆ.
ಜೊತೆಗೆ, ಆನ್‌ಲೈನ್ ಸಭೆ, ವೆಬಿನಾರ್ ಅಥವಾ ತರಗ ತಿಗಳನ್ನು ಗೂಗಲ್ ಡ್ರೈವ್‌ನಲ್ಲಿ ಸಂರಕ್ಷಿಸಿಡುವ ಸೌಲಭ್ಯವೂ ದೊರಕಲಿದೆ. ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ಪ್ರವ ರ್ಧಮಾನಕ್ಕೇರಿದ ಗೂಗಲ್ ಮೀಟ್‌ನಡಿ ಅನೇಕ ತರಗತಿಗಳು, ಸಭೆಗಳು ಜರುಗಿವೆ. ದಿನವೊಂದಕ್ಕೆ 1 ಕೋಟಿ ಜನ ಗೂಗಲ್ ಮೀಟ್ ಬಳಸುತ್ತಿದ್ದರೆಂದು ಏಪ್ರಿಲ್‌ನ ಅಂಕಿ-ಅಂಶಗಳು ತಿಳಿಸಿವೆ.
ಕೃಷ್ಣ ಜನ್ಮಸ್ಥಾನ ಕೇಸು:ಅ.15ಕ್ಕೆ ತೀರ್ಮಾನ
ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣಜನ್ಮಸ್ಥಾನವನ್ನು ಮುಕ್ತಿಗೊಳಿಸುವುದರ ಬಗ್ಗೆ ನ್ಯಾಯಾಲಯದಲ್ಲಿ ಹೂಡಲಾಗಿರುವ ಖಟ್ಲೆಯಲ್ಲಿ ಪಾಲುದಾರಿಕೆ ವಹಿಸಬೇಕೇ ಬೇಡವೇ ಎಂಬ ಬಗ್ಗೆ ಅ.15ರಂದು ನಿರ್ಧರಿಸಲಾಗುತ್ತದೆ. ಸ್ವಾಮೀಜಿಗಳ ಸಂಘಟನೆ ಆ ದಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ. ಅಖಿಲ ಭಾರತ ಅಖಾರಾ ಪರಿಷತ್‌ನ ಅಧ್ಯಕ್ಷ ನರೇಂದ್ರ ಗಿರಿ ಮಾತನಾಡಿ, ಸಂಘಟನೆಯ ಪದಾಧಿಕಾರಿಗಳು ಮಥುರಾಕ್ಕೆ ಭೇಟಿ ಅಲ್ಲಿನ
ಸ್ಥಿತಿ ಪರಿಶೀಲಿಸಲಿದ್ದಾರೆ ಎಂದರು.
ಸೆ. 26ರಂದು ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬುವರು ಮಥುರಾದ ಸ್ಥಳೀಯ ಕೋರ್ಟ್‌ನಲ್ಲಿ ದಾವೆ ಹೂಡಿ ಕಟ್ರಾ ಕೇಶವ ದೇವ ದೇಗುಲದ ಆವರಣದಲ್ಲಿರುವ ಮಸೀದಿ ತೆರವುಗೊಳಿಸಬೇಕು ಎಂದು ಕೇಳಿದ್ದರು.
ಅಖಿಲ ಭಾರ ತೀಯ ತೀರ್ಥ ಪುರೋಹಿತ ಮಹಾ ಸಭಾದ ಅಧ್ಯಕ್ಷ ಮಹೇಶ್ ಪಾಠಕ್ ಅವರು ” ಮಥುರಾ ದಲ್ಲಿ ಮಸೀದಿ -ದೇಗುಲ ಎಂಬ ವಿವಾದವೇ ಇಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ](https://www.udayavani.com/wp-content/uploads/2025/02/Sensex-150x84.jpg)
![Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ](https://www.udayavani.com/wp-content/uploads/2025/02/Sensex-150x84.jpg)
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
![Nirmala-Seetaraman](https://www.udayavani.com/wp-content/uploads/2025/02/Nirmala-Seetaraman-150x90.jpg)
![Nirmala-Seetaraman](https://www.udayavani.com/wp-content/uploads/2025/02/Nirmala-Seetaraman-150x90.jpg)
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
![RBI-Logo](https://www.udayavani.com/wp-content/uploads/2025/02/RBI-Logo-150x90.jpg)
![RBI-Logo](https://www.udayavani.com/wp-content/uploads/2025/02/RBI-Logo-150x90.jpg)
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
![Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!](https://www.udayavani.com/wp-content/uploads/2025/02/BSE-5-150x89.jpg)
![Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!](https://www.udayavani.com/wp-content/uploads/2025/02/BSE-5-150x89.jpg)
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
![gold](https://www.udayavani.com/wp-content/uploads/2025/02/gold-2-150x84.jpg)
![gold](https://www.udayavani.com/wp-content/uploads/2025/02/gold-2-150x84.jpg)
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ