ಪಕೃತಿ ಸಂಪನ್ಮೂಲಗಳ ಮೇಲೆ ಶೋಷಣೆ ಹೆಚ್ಚಳ
Team Udayavani, Sep 29, 2020, 12:54 PM IST
ಮಂಡ್ಯ: ಪ್ರಕೃತಿಯ ಸಂಪನ್ಮೂಲಗಳ ಮೇಲೆ ಮನುಷ್ಯನ ಶೋಷಣೆಹೆಚ್ಚಾಗುತ್ತಿದೆ.ಎಲ್ಲಸಂಪನ್ಮೂಲಗಳು ಹಣ ಗಳಿಸುವ ಸರಕಾಗಿ ಬಿಟ್ಟಿವೆ ಎಂದು ಪ್ರಾದೇಶಿಕ ಅರಣ್ಯವಿ ಭಾಗದ ಮಂಡ್ಯವಲಯ ಅರಣ್ಯಾಧಿಕಾರಿ ಶಿಲ್ಪಾ ಬೇಸರ ವ್ಯಕ್ತಪಡಿಸಿದರು.
ನಗರದ ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಮಮತೆಯ ಮಡಿಲುವಿನ ನಿತ್ಯ ದಾಸೋಹದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ವತಿಯಿಂದ ವಿಶ್ವ ಹಸಿರು ಬಳಕೆದಾರರ ದಿನದ ಅಂಗವಾಗಿ ಬಟ್ಟೆ ಕೈಚೀಲ ಮತ್ತು ಗಿಡ ವಿತರಣೆ, ಜಾಗೃತಿ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಸರ್ಗದ ಮೇಲೆ ಮನುಷ್ಯನ ದಾಳಿ ಅವಿರಥವಾಗಿ ನಡೆಯುತ್ತಿದ್ದು, ಇದೊಂದು ಕೊಳ್ಳು ಬಾಕ ಸಂಸ್ಕೃತಿಯ ವಿಧಾನದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಹೇಳಿದರು.
ಆರೋಗ್ಯದ ಕಡೆಗೆ ಜಾಗೃತರಾಗಿ: ಬಳಕೆದಾರ ತನ್ನ ಹಕ್ಕುಗಳ ಬಗ್ಗೆ ಅರಿತು ಶೋಷಣೆಯಾಗದಂತೆ ಜೋಪಾನವಾಗಿ ವ್ಯವಹರಿಸಬೇಕು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಲವಾರು ವಸ್ತುಗಳು ಪ್ರತಿನಿತ್ಯ ವ್ಯಾಪಾರವಾಗುತ್ತಿದೆ. ಆಹಾರಕ್ಕೆ
ಬಳಸುವ ಖಾದ್ಯ ತೈಲವನ್ನು ಪರಿಶೀಲಿಸಿ, ಬಳಸುವುದು ತೀರಾ ಅವಶ್ಯಕವಾಗಿದೆ. ದೈನಂದಿನ ಬದುಕಿನಲ್ಲಿ ನಾವು ಗ್ರಾಹಕರಾಗಿ ಹೋಗುವಾಗ ಪುನರ್ ಬಳಸಬಹುದಾದ ಬಟ್ಟೆ ಬ್ಯಾಗ್‌ಗಳು, ಸರಳವಾದ ಉಡುಪುಗಳನ್ನು ಧರಿಸಿ ಪ್ರತಿನಿತ್ಯದ ಆರೋಗ್ಯದಕಡೆಗೆ ಜಾಗೃತರಾಗಬೇಕು ಎಂದರು.
ತಂತ್ರಜ್ಞಾನಕ್ಕೆ ಬೆಂಬಲ ನೀಡಿ: ಭೂಮಿಯ ಮೇಲಿನ ಧಾರಣಾ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಂಪನ್ಮೂಲವನ್ನು ಸುಸ್ಥಿರ ವಿಧಾನದಲ್ಲೇ ಬಳಸುವ ತಂತ್ರಜ್ಞಾನಕ್ಕೆ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.
ಉದಾತ್ತ ಚಿಂತನೆ ಅಳವಡಿಸಿಕೊಳ್ಳಿ: ಮಿಮ್ಸ್‌ನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸುಭಾಷ್ ಮಾತನಾಡಿ, ಜೀವನ ಶೈಲಿಯನ್ನೇ ಸರಳವಾಗಿ ಅಳವಡಿಸಿಕೊಳ್ಳುವುದರ ಮೂಲಕ ಉದಾತ್ತ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಹಸಿರು ಭಾಗಿದಾರರು ತಾಳ್ಮೆಗೆಡದೆ ಸ್ಥಳೀಯ ಗಿಡಮೂಲಿಕೆಗಳು, ಆಹಾರ ಉತ್ಪನ್ನ ಚಟುವಟಿಕೆಗಳನ್ನು ಬಳಸಿಕೊಂಡು ಗ್ರಾಮೀಣ ಸಂಸ್ಕೃತಿಯ ನಿಲುವಿಗೆ ಬದ್ಧರಾಗಿ ಅದನ್ನು ಸಮರ್ಥವಾಗಿಬಳಸಿಕೊಳ್ಳಬೇಕು. ಜೊತೆಗೆ ಹಸಿರು ಬಳಕೆದಾರರಾಗಲು ಇತರರನ್ನು ಪ್ರೇರೇಪಿಸುವಕೆಲಸವಾಗಬೇಕು ಎಂದರು. ಕೋವಿಡ್-19 ಸಾಂಕ್ರಾಮಿಕವಾಗಿ ಉಲ್ಬಣಗೊಳ್ಳುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಹಲವು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು ಎಂದು ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಜಿ.ಎನ್.ಕೆಂಪರಾಜು, ಲಯನ್ಸ್ ಕ್ಲಬ್ ಆಫ್ ಮಂಡ್ಯದ ವಲಯಾಧ್ಯಕ್ಷ ಪುನೀತ್ ಕುಮಾರ್, ಮಂಡ್ಯ ಜಿಲ್ಲಾ ಬೀದಿ ನಾಟಕ ಒಕ್ಕೂಟದ ಅಧ್ಯಕ್ಷ ಬಸವರಾಜ್ ಸಂತೆಕಸಲಗೆರೆ, ಹರೀಶ್ ಬಾಣಸವಾಡಿ, ಪರಿಸರ ಸಂಸ್ಥೆಯ ಸಂಚಾಲಕ ರವಿ ಮಂಗಲ ಉಪಸ್ಥಿತರಿದ್ದರು. ಹಸಿರು ಜಾಗೃತಿ ಗೀತೆಗಳನ್ನು ಸಾದರಪಡಿಸಲಾಯಿತು.
ಉತ್ಪಾದನಾ ವಿಧಾನ ಬದಲಿಸಲು ಸಾಧ್ಯ : ಮನುಕುಲ ರಕ್ಷಣೆಯ ಮಹತ್ವದ ಪರಿಸರ ಹಬ್ಬಗಳನ್ನು ವಿಶ್ವದಾದ್ಯಂತ ಜಾಗೃತ ದಿನವನ್ನಾಗಿಆಚರಿಸುವುದರ ಜೊತೆಗೆ ಜನತೆಯನ್ನು ಸನ್ನದ್ಧಗೊಳಿಸಲುಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ಹಸಿರು ಧರ್ಮವನ್ನು ಬಳಕೆದಾರರು ಪಾಲಿಸಬೇಕು. ಬಳಕೆದಾರರು ಪ್ರಜ್ಞಾವಂತರಾದರೆ ಪ್ರಸ್ತುತ ದಿನಗಳಲ್ಲಿ ಉತ್ಪಾದನಾ ವಿಧಾನಗಳನ್ನೇ ಬದಲಿಸಲು ಸಾಧ್ಯವಿದೆ ಎಂದು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.