![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 29, 2020, 6:55 PM IST
ಮಣಿಪಾಲ: ದೈತ್ಯ ಟೆಕ್ ಕಂಪನಿ ಗೂಗಲ್ ಶೀಘ್ರದಲ್ಲೇ ಪ್ಲೇ-ಸ್ಟೋರ್ ಇನ್-ಅಪ್ಲಿಕೇಶನ್ ಖರೀದಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬದಲಾಯಿಸಲಿದೆ. ಇದು ಆ್ಯಪ್ ಡೆವಲಪರ್‌ಗಳ ಮೇಲೆ ನೇರ ಪರಿಣಾಮ ಬೀರಲಿದೆ.
ಇನ್ನು ಡೆವಲಪರ್ ಆ್ಯಪ್‌ಗಳ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ಪ್ಲೇ ಸ್ಟೋರ್ ಮೂಲಕ ಡಿಜಿಟಲ್ ಕಂಟೆಂಟ್ ಅನ್ನು ಮಾರಾಟ ಮಾಡುವ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯನ್ನು ಬಳಸಬೇಕಾಗುತ್ತದೆ.
ಆಯ್ದ ಅಪ್ಲಿಕೇಶನ್‌ಗಳಿಗಾಗಿ ಬಿಲ್ಲಿಂಗ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವುದಾಗಿ ಸರ್ಚ್ ಎಂಜಿನ್ ಗೂಗಲ್ ಮಂಗಳವಾರ ತಿಳಿಸಿದೆ. ಅಪ್ಲಿಕೇಶನ್ ಖರೀದಿಯ ಶೇ. 1ರಷ್ಟು ಹಣವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಅಂದರೆ ಇನ್ನು ಅಭಿವರ್ಧಕರು ಅಥವ ಡೆವಲಪರ್‌ಗಳು ಆ್ಯಪ್ ಖರೀದಿಯ ಮೇಲೆ ಕಂಪನಿಗೆ ಶೇ .30ರಷ್ಟು ಕಮಿಷನ್ ಪಾವತಿಸಬೇಕಾಗುತ್ತದೆ.
ಹೊಸ ಬಿಲ್ಲಿಂಗ್ ವ್ಯವಸ್ಥೆಯನ್ನು ಅಳವಡಿಸಿ
ಬಿಲ್ಲಿಂಗ್ ಸಿಸ್ಟಮ್ ಅಪ್ಲಿಕೇಶನ್ ಮೂಲಕ ಮಾಡುವ ಪಾವತಿಗಳಿಗೆ ಗೂಗಲ್ ಶೇ. 30ರಷ್ಟು ಶುಲ್ಕ ವಿಧಿಸುತ್ತದೆ. ಡೆವಲಪರ್‌ಗಳು ತನ್ನ ವೆಬ್‌ಸೈಟ್ ಮೂಲಕ ಪಾವತಿಮಾಡುವ ಆಯ್ಕೆಯನ್ನು ತೆಗೆದುಕೊಂಡರೆ ಅದಕ್ಕೆ ಪ್ಲೇ ಬಿಲ್ಲಿಂಗ್ ಅಗತ್ಯವಿರುವುದಿಲ್ಲ. ಹೀಗಾಗಿ ಶೇ. 97ರಷ್ಟು ಡೆವಲಪರ್‌ಗಳು ಈ ನೀತಿಯನ್ನು ಅನುಸರಿಸುತ್ತಾರೆ. ಹೊಸ ಮಾರ್ಗಸೂಚಿಗಳನ್ನು ಅನುಸರಿಸದ ಕೆಲವು ಡೆವಲಪರ್‌ಗಳಿಗೆ ಸ್ವಲ್ಪ ಸಮಯ ನೀಡಲಾಗುವುದು ಎಂದು ವರದಿ ಹೇಳಿದೆ.
ಕೋಟಿ ರೂ.ಗಳ ವಹಿವಾಟು
ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಮೂಲಕ ಯಪಲ್ ಮತ್ತು ಗೂಗಲ್ ಎರಡೂ ಕಂಪನಿಗಳು ಶತಕೋಟಿ ಡಾಲರ್‌ಗಳನ್ನು ಗಳಿಸುತ್ತವೆ. ಆದರೆ ಆಪಲ್‌ನ ನೀತಿ ಗೂಗಲ್ ನೀತಿಗಿಂತ ಹೆಚ್ಚು ಕಟ್ಟುನಿಟ್ಟಾಗಿದೆ. ಬಾಹ್ಯ ವೆಬ್‌ಸೈಟ್‌ಗಳ ಮೂಲಕ ಮೊಬೈಲ್ ಅಪ್ಲಿಕೇಶನ್ ಚಂದಾದಾರಿಕೆಗಳನ್ನು ಮಾರಾಟ ಮಾಡಲು ಡೆವಲಪರ್‌ಗಳಿಗೆ ಆ್ಯಪಲ್ ಅನುಮತಿಸುವುದಿಲ್ಲ.
ಪ್ಲೇ ಬಿಲ್ಲಿಂಗ್ ನೀತಿಯನ್ನು ಹಲವು ಸಮಯಗಳ ಬಳಿಕ ನಾವು ನವೀಕರಿಸುತ್ತಿದ್ದೇವೆ. ಇತ್ತೀಚಿನ ಘಟನೆಗಳು ನಮಗೆ ಕೆಲವು ಪಾಠಗಳನ್ನು ಕಲಿಸಿದೆ ಎಂದು ಗೂಗಲ್ ಅಪ್ಲೀಕೇಶನ್ ವಿಭಾಗದ ಡೈರೆಕ್ಟರ್ ಪೂರ್ಣಿಮಾ ಕೋಚಿಕರ್ ಹೇಳಿದ್ದಾರೆ. ಗೂಗಲ್ ಪ್ಲೇ ಮೂಲಕ ತಮ್ಮ ಡಿಜಿಟಲ್ ವಿಷಯವನ್ನು ಮಾರಾಟ ಮಾಡುವ ಪ್ರತಿಯೊಬ್ಬ ಡೆವಲಪರ್ ಪ್ಲೇ ಬಿಲ್ಲಿಂಗ್ ಅನ್ನು ಬಳಸಬೇಕಾಗುತ್ತದೆ. “ಗೂಗಲ್ ಇತ್ತೀಚೆಗೆ Paytm ಅನ್ನು ಕೆಲವು ಗಂಟೆಗಳ ಕಾಲ ನಿರ್ಬಂಧಿಸುವ ಮೂಲಕ ವಿವಾದಕ್ಕೆ ಸಿಲುಕಿದನ್ನು ಇಲ್ಲಿ ಸ್ಮರಿಸಬಹುದು.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.