ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ
ಪ್ರತ್ಯೇಕ ಇಡುವುದೇ ಪರಿಹಾರ; ಔಷಧ ಇಲ್ಲದ, ಹರಡುವ ರೋಗ; ಕುಂದಾಪುರ, ಬ್ರಹ್ಮಾವರದಲ್ಲಿ ಅಧಿಕ
Team Udayavani, Sep 30, 2020, 5:39 AM IST
ರೋಗಗ್ರಸ್ತ ಜಾನುವಾರುಗಳು
ಕುಂದಾಪುರ: ತಾಲೂಕಿನ ವಿವಿಧೆಡೆ ಜಾನುವಾರುಗಳು ಲುಂಪಿಸ್ಕಿನ್ ಎನ್ನುವ ರೋಗದಿಂದ ಬಳಲುತ್ತಿವೆ. ಒಂದೆಡೆ ಚೀನಾದ ಕೊರೊನಾ ಜನರನ್ನು ಕಾಡುತ್ತಿದ್ದರೆ ಇನ್ನೊಂದೆಡೆ ಆಫ್ರಿಕಾದ ಲುಂಪಿ ಸ್ಕಿನ್ ಜಾನುವಾರುಗಳನ್ನು ಕಾಡುತ್ತಿದೆ.
ಹರಡುವ ರೋಗ
ಆದಾಯವಿಲ್ಲದೆ ರೈತರು ಸಂಕಷ್ಟ ಪಡುತ್ತಿರು ವಾಗಲೇ ಜಾನುವಾರು ಗಳಿಗೆ ಕಾಯಿಲೆ ಶರವೇಗದಲ್ಲಿ ಹಬ್ಬುತ್ತಿರುವುದು ಚಿಂತೆಗೀಡು ಮಾಡಿದೆ. ಈ ಸಾಂಕ್ರಾಮಿಕ ರೋಗ ತಾಲೂಕಿನಾದ್ಯಂತ ದನಕರುಗಳಿಗೆ ಬಾಧಿಸುತ್ತಿದೆ. ಇದಕ್ಕೆ ನಿರ್ದಿಷ್ಟ ಔಷಧ ಇಲ್ಲದ ಕಾರಣ ಕಾಯಿಲೆಗೆ ತುತ್ತಾಗುವ ದನ ಕರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ನೀಡಲಾಗುತ್ತಿದೆ. ರೋಗಗ್ರಸ್ತ ಜಾನುವಾರನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಇಡಬೇಕಾಗುತ್ತದೆ. ದುರ್ಬಲ ಜಾನುವಾರುಗಳಿಗೆ 3-4 ದಿನದಲ್ಲಿ ಜ್ವರ ಬರುವ ಸಾಧ್ಯತೆಯಿದ್ದು ಆಗ ಪಶುವೈದ್ಯರ ಮೂಲಕ ಚಿಕಿತ್ಸೆ ಅನಿವಾರ್ಯ. ಮೈಮೇಲೆ ಕಜ್ಜಿಗಳು ಬೀಳುವ ಕಾರಣ ಅದರ ಶಮನಕ್ಕೆ ಔಷಧ ಹಚ್ಚಬೇಕಾಗುತ್ತದೆ.
ಹೀಗಿದೆ ಲಕ್ಷಣ
ಕಾಯಿಲೆಗೊಳಗಾದ ಜಾನುವಾರುಗಳು ಮೇವು ತಿನ್ನುವುದಿಲ್ಲ, ಚರ್ಮದ ಒಳಭಾಗದಲ್ಲಿ ವರ್ತುಲಾಕಾರದ ಗುಳ್ಳೆ, ಹಾಲಿನ ಇಳುವರಿ ಕಡಿಮೆ, 3-4 ದಿನದಲ್ಲಿ ತೀವ್ರ ಜ್ವರದಿಂದ ಬಳಲುತ್ತವೆ. ಕೆಲವು ಜಾನುವಾರುಗಳಿಗೆ ಕಾಲು ಬಾವು ಬರುತ್ತದೆ. ಮೇಲೆ ಎದ್ದೇಳಲೂ ಆಗುವುದಿಲ್ಲ.
ಶುಚಿಯಾಗಿಡಬೇಕು
ಉಣ್ಣಿ, ಸೊಳ್ಳೆ, ನೊಣಗಳಿಂದಾಗಿ ಈ ಕಾಯಿಲೆ ಹರಡುತ್ತದೆ. ದನದ ಕೊಟ್ಟಿಗೆಯಲ್ಲಿ ಹೊಗೆ ಹಾಕಿ ನೊಣಗಳು ಬಾರದಂತೆ ನೋಡಿಕೊಳ್ಳಬೇಕು. ಹಟ್ಟಿಯನ್ನು ಫಿನಾಯಿಲ್ ಹಾಕಿ ಶುಚಿಯಾಗಿಡಬೇಕು. ರೋಗಪೀಡಿತ ಪ್ರಾಣಿಗಳ ಸಾಗಾಟ ನಿರ್ಬಂಧಿಸಬೇಕು. ಕೃತಕ ಗರ್ಭಧಾರಣೆಗೆ ರೋಗಪೀಡಿತ ಹೋರಿಗಳ ವೀರ್ಯ ಉಪಯೋಗಿಸಬಾರದು. ಅಕಸ್ಮಾತ್ ಮರಣ ಹೊಂದಿದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಹೊಂಡದಲ್ಲಿ ವೈಜ್ಞಾನಿಕವಾಗಿ ಹೂಳಬೇಕು.
15 ದಿನ ಅವಶ್ಯ
ಸದ್ಯಕ್ಕೆ ಇದಕ್ಕೆ ಲಸಿಕೆ ಇಲ್ಲ, ನಿರ್ದಿಷ್ಟ ಲಸಿಕೆ ಲಭ್ಯವಾದರೂ ಕಾಯಿಲೆ ಹತೋಟಿಗೆ ಬರಲು 40 ದಿನ ಬೇಕು. ಗುಳ್ಳೆಗಳಾಗಿ ಒಡೆದರೆ ಅದಕ್ಕೆ ಅರಶಿನ, ಬೇವಿನ ಸೊಪ್ಪನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ಹಚ್ಚಿ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಕ್ರಮ ಕೆಲವೆಡೆ ಮಾಡಲಾಗುತ್ತಿದೆ. ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುತ್ತದೆ. ಗುಳ್ಳೆ ವಾಸಿಯಾಗಲು 15 ದಿನಗಳ ಅವಧಿ ಬೇಕಾಗುತ್ತದೆ.
126 ಪ್ರಕರಣ
ಕೇವಲ 25 ದಿನಗಳಲ್ಲಿ ಕುಂದಾಪುರ ತಾಲೂಕಿನಲ್ಲಿ 126 ಪ್ರಕರಣಗಳು ಪತ್ತೆಯಾಗಿವೆ. ಕೆದೂರು, ಹುಣಸೆಮಕ್ಕಿ, ಹಳ್ಳಾಡಿ, ಕಂಡೂÉರು ಭಾಗದಲ್ಲಿ ಅಧಿಕವಿದ್ದು ವಂಡ್ಸೆ ಸೇರಿದಂತೆ ಇತರೆಡೆಯೂ ಸಣ್ಣ ಪ್ರಮಾಣದಲ್ಲಿ ಇದೆ. ಬಹುತೇಕ ಪ್ರಕರಣಗಳಲ್ಲಿ ಜಾನುವಾರುಗಳು ಗುಣಮುಖವಾಗಿವೆ.
ಸಿಬಂದಿ ಕೊರತೆ
ತಾಲೂಕಿನ ಪಶು ಸಂಗೋಪನಾ ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. ಕುಂದಾಪುರ ತಾಲೂಕಿನಲ್ಲಿ ಒಟ್ಟು 27 ಪಶುಪಾಲನಾ ಸಂಸ್ಥೆಗಳಿದ್ದು, ನಿಯೋಜಿಸಲಾದ 106 ಹುದ್ದೆಗಳಲ್ಲಿ ಕೇವಲ 29 ಹುದ್ದೆಯಷ್ಟೇ ಭರ್ತಿಯಾಗಿದೆ. ಈ ಪೈಕಿ 4 ಪಶು ವೈದ್ಯಾಧಿಕಾರಿ, 7 ಹಿರಿಯ ಪಶು ಪಾಲನಾ ಪರಿವೀಕ್ಷಕರ ಹುದ್ದೆಗಳು ಸೇರಿ 77 ಹುದ್ದೆಗಳು ಖಾಲಿಯಿವೆ. ಬಿ ದರ್ಜೆಯ ಹುದ್ದೆಯಲ್ಲಿ 11 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಕುಂದಾಪುರ ತಾಲೂಕು ಪಶು ಆಸ್ಪತ್ರೆಯಲ್ಲಿ 14 ಹುದ್ದೆಗಳಿದ್ದು, ಇದರಲ್ಲಿ 6 ಮಾತ್ರ ಭರ್ತಿಯಾಗಿದೆ. 8 ಹುದ್ದೆ ಖಾಲಿಯಿದೆ. ಬೈಂದೂರು ಹಾಗು ವಂಡ್ಸೆ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಹುದ್ದೆ ಮಾತ್ರ ಭರ್ತಿಯಾಗಿದ್ದು, 3 ಹುದ್ದೆಗಳು ಖಾಲಿಯಿವೆ. ಶಂಕರನಾರಾಯಣದಲ್ಲಿ ವೈದ್ಯಾಧಿಕಾರಿ, ಸಹಾಯಕ ಹುದ್ದೆ ಭರ್ತಿಯಾಗಿದ್ದು, 2 ಹುದ್ದೆ ಖಾಲಿಯಿವೆ.
ಸೂಚನೆ
ಇಲಾಖಾ ಪಶು ವೈದ್ಯಾಧಿಕಾರಿಗಳು ಅಗತ್ಯವಿದ್ದಲ್ಲಿ ರೋಗ ಲಕ್ಷಣವಿರುವ ಜಾನುವಾರು ಮಾಲಕರ ಮನೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸ ಲಾಗಿದೆ. ಅವಶ್ಯಕತೆ ಇದ್ದಲ್ಲಿ ರೋಗ ಪತ್ತೆಗಾಗಿ ಮಾದರಿಗಳನ್ನು ಇಲಾಖಾ ಪಶು ವೈದ್ಯಾಧಿ ಕಾರಿಗಳ ಮೂಲಕ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಬೇಕು. ರೈತರಿಗೆ ಈ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಎಲ್ಲ ಗ್ರಾ ಪಂ.ವ್ಯಾಪ್ತಿಗಳಲ್ಲಿ, ಗ್ರಾಮ ಸಭೆಗಳಲ್ಲಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಗಳಲ್ಲಿ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
25 ದಿನದಲ್ಲಿ 126 ಪ್ರಕರಣ
45 ಕಾಯಿಲೆ ಹತೋಟಿಗೆ ಬರಲು ಬೇಕಾದ ದಿನಗಳು
126 ಕುಂದಾಪುರ ತಾ|ನಲ್ಲಿ ಪತ್ತೆ ಆದ ಪ್ರಕರಣಗಳು
27 ಕುಂದಾಪುರ ತಾ|ನಲ್ಲಿ ಇರುವ ಪಶುಪಾಲನ ಸಂಸ್ಥೆಗಳು
ಗುಣಮುಖವಾಗುತ್ತಿವೆ
ಕುಂದಾಪುರ ತಾಲೂಕಿನಲ್ಲಿ ಕಂಡು ಬಂದ ಪ್ರಕರಣಗಳಿಗೆ ಇಲಾಖಾಧಿಕಾರಿಗಳ ಸೂಚನೆಯಂತೆ ಸೂಕ್ತ ಚಿಕಿತ್ಸೆ, ಸಲಹೆ ನೀಡಲಾಗುತ್ತಿದ್ದು ಬಹುತೇಕ ಪ್ರಕರಣಗಳು ಗುಣಮುಖವಾಗಿವೆ.
– ಡಾ| ಸೂರ್ಯನಾರಾಯಣ ಉಪಾಧ್ಯ, ಸಹಾಯಕ ನಿರ್ದೇಶಕರು, ಪಶುಸಂಗೋಪನ ಇಲಾಖೆ
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.