ಬಗೆ ಹರಿಯದ ಮೆಸ್ಕಾಂ ಮೀಟರ್‌ ರೀಡಿಂಗ್‌ ಗುತ್ತಿಗೆ ಬಿಕ್ಕಟ್ಟು

ನೂತನ ಒಪ್ಪಂದ ತಕರಾರು; 2 ತಿಂಗಳ ರೀಡಿಂಗ್‌ ಅಸ್ಪಷ್ಟ ; ಗ್ರಾಹಕರಿಗೆ ಹೊರೆ

Team Udayavani, Sep 30, 2020, 3:03 AM IST

ಬಗೆಹರಿಯದ ಮೆಸ್ಕಾಂ ಮೀಟರ್‌ ರೀಡಿಂಗ್‌ ಗುತ್ತಿಗೆ ಬಿಕ್ಕಟ್ಟು

ಬೆಳ್ತಂಗಡಿ: ಮೆಸ್ಕಾಂ ಮೀಟರ್‌ ರೀಡಿಂಗ್‌ ಗುತ್ತಿಗೆದಾರರು ಹಾಗೂ ನೌಕರರ ನಡುವಿನ ಬಿಕ್ಕಟ್ಟಿನಿಂದ ಪ್ರಸಕ್ತ ಗ್ರಾಹಕರು ಕಳೆದ ಎರಡು ತಿಂಗಳುಗಳಿಂದ ಸಂಕಷ್ಟ ಎದುರಿಸುವಂತಾಗಿದೆ. ಬಂಟ್ವಾಳ ಉಪವಿಭಾಗಕ್ಕೆ ಒಳಪಟ್ಟಂತೆ ಬಂಟ್ವಾಳ ಪಟ್ಟಣ, ಗ್ರಾಮೀಣ ಹಾಗೂ ವಿಟ್ಲ, ಬೆಳ್ತಂಗಡಿ, ಉಜಿರೆ ಉಪವಿಭಾಗಗಳಲ್ಲಿ ಮೀಟರ್‌ ರೀಡಿಂಗ್‌ ನಡೆಸಲು ಹೊರಗುತ್ತಿಗೆ ನೀಡಲಾಗಿತ್ತು. ಕೆಲವು ಉಪವಿಭಾಗಗಳಲ್ಲಿ ಈ ಹಿಂದಿನ ಮೀಟರ್‌ ರೀಡರ್‌ಗಳು ವಿಧಿಸಿದ್ದ ಹೊಸ ಬೇಡಿಕೆ ಪೂರೈಸಲಾಗದೆ ನೂತನ ಕೆಲಸಗಾರರನ್ನು ನೇಮಿಸಲು ಗುತ್ತಿಗೆದಾರರು ಮುಂದಾಗಿದ್ದರು ಎಂಬ ವದಂತಿ ಹಬ್ಬಿತ್ತು. ಪ್ರಸಕ್ತ ಕಂಪೆನಿ ಪಾಲಿಸಿ ವಿಚಾರವಾಗಿ ಈ ಹಿಂದಿನ ನೌಕರರು ಹಾಗೂ ನೂತನ ಸಿಬಂದಿಗೆ ಅಸಮಾಧಾನವಿದೆ. ಹೊಸ ನಿಯಮದಂತೆ ವೇತನ ಸಾಲುತ್ತಿಲ್ಲ. ಹೀಗಾಗಿ ಹೊಸಬರನ್ನು ನೇಮಿಸಿದರೂ ಪೂರ್ಣಾವಧಿ ಕೆಲಸ ನಿರ್ವಹಿಸದೆ ಕೈಚೆಲ್ಲಿದ್ದಾರೆ. ಈ ಕುರಿತು ಮೆಸ್ಕಾಂ ಇಲಾಖೆಯೂ ಹಲವು ಪ್ರಯತ್ನ ನಡೆಸಿದರೂ ಫಲಪ್ರದವಾಗಿಲ್ಲ.

ಗ್ರಾಮೀಣ ಭಾಗದಲ್ಲಿ ಸಾಲುತ್ತಿಲ್ಲ ವೇತನ
ಬಂಟ್ವಾಳ ಉಪವಿಭಾಗಕ್ಕೆ ಒಳಪಟ್ಟಂತೆ ಒಟ್ಟು 101 ಮಂದಿ ಮೀಟರ್‌ ರೀಡರ್‌ಗಳು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ 41 ಮಂದಿ ನೌಕರರಿದ್ದಾರೆ. ಈಗಾಗಲೇ ಜೂನ್‌ ತಿಂಗಳ ರೀಡಿಂಗ್‌ ಪೂರ್ಣಗೊಂಡಿದ್ದು, ಜುಲೈ, ಆಗಸ್ಟ್‌ ತಿಂಗಳ ರೀಡಿಂಗ್‌ ಬಾಕಿ ಉಳಿದಿದೆ. ಬಂಟ್ವಾಳ ಉಪವಿಭಾಗಕ್ಕೆ ಒಳಪಟ್ಟಂತೆ 1,80,000ಕ್ಕೂ ಹೆಚ್ಚು ಮೀಟರ್‌ಗಳಿವೆ. ಪ್ರತಿ ರೀಡರ್‌ಗೆ ಮಾಸಿಕ ಸರಾಸರಿ 1,700ರಿಂದ 1,800 ರೀಡಿಂಗ್‌ ನಡೆಸಬೇಕಾಗುತ್ತದೆ. ಈ ಹಿಂದೆ ಪ್ರತಿ ಮೀಟರ್‌ ರೀಡಿಂಗ್‌ಗೆ 14 ರೂ. ಕಮಿಷನ್‌ ನೀಡಲಾಗುತ್ತಿತ್ತು. ನೂತನ ನಿಯಮದಂತೆ ಗುತ್ತಿಗೆ ಕಂಪೆನಿ 9.6 ರೂ. ನೀಡಲು ಮುಂದಾಗಿದೆ. ಇದಲ್ಲದೆ ಈ ಹಿಂದೆ 1ರಿಂದ 27ನೇ ತಾರೀಕಿನ ಒಳಗಾಗಿ ರೀಡಿಂಗ್‌ ಪೂರ್ಣಗೊಳಿಸಲು ಅವಕಾಶ ಇದ್ದು, ಪ್ರಸಕ್ತ 20 ದಿನಗಳೊಳಗೆ ಪೂರ್ಣಗೊಳಿಸುವ ಒತ್ತಡ ಹೇರ ಲಾಗಿದೆ. ಇಷ್ಟೇ ಅಲ್ಲದೆ 41 ಮಂದಿ ಸಿಬಂದಿ ಬದಲಾಗಿ 30 ಮಂದಿಯನ್ನಷ್ಟೇ ಇರಿಸಿಕೊಂಡು ಇಷ್ಟು ಹೊರೆಯನ್ನು ಸೀಮಿತ ಅವಧಿಯಲ್ಲಿ ಮುಗಿಸುವ ಒತ್ತಡ ಹೇರಿದೆ.

ಇದಕ್ಕೆ ಒಪ್ಪದ ನೌಕರರು 41 ಮಂದಿಯನ್ನೂ ಉಳಿಸಬೇಕು. ಮಾತ್ರ ವಲ್ಲದೆ ಪಟ್ಟಣದಲ್ಲಿ ಅವಧಿಯೊಳಗೆ ರೀಡಿಂಗ್‌ ಸಾಧ್ಯವಾದರೂ ಗ್ರಾಮೀಣ ಭಾಗ ದಲ್ಲಿ ಪ್ರತಿನಿತ್ಯ 70 ಮೀಟರ್‌ ರೀಡಿಂಗ್‌ ನಡೆಸಬೇಕು. ಡಿಜಿಟಲ್‌ ಮೀಟರ್‌ ಆದ್ದ ರಿಂದ ಒಂದು ಮೀಟರ್‌ನಿಂದ ಇನ್ನೊಂದು ಮೀಟರ್‌ ರೀಡಿಂಗ್‌ ನಡೆಸಲು ಕನಿಷ್ಠ 7 ನಿಮಿಷ ಸಮಯ ತಗಲುತ್ತದೆ. ಇದರಿಂದ ಸೀಮಿತ ಸಮಯದಲ್ಲಿ ರೀಡಿಂಗ್‌ ಪೂರ್ಣಗೊಳಿಸುವುದು ಅಸಾಧ್ಯವಾಗಿದ್ದರಿಂದ ಮಾಸಿಕ ವೇತನ (9,500 ರೂ.) ನಿಗದಿಗೊಳಿಸಿ ಪಿಎಫ್‌, ಇಎಸ್‌ಐ ನೀಡುವಂತೆ ಈ ಹಿಂದಿನ ನೌಕರರು ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೆ ಒಪ್ಪದ ಗುತ್ತಿಗೆದಾರರು ಹೊಸಬರನ್ನು ನೇಮಕಗೊಳಿಸಲು ಮುಂದಾಗಿದೆ ಎಂಬುದು ಈ ಹಿಂದಿನ ರೀಡರ್‌ಗಳ ಆರೋಪವಾಗಿದೆ.

ಶಾಸಕ ಹರೀಶ್‌ ಪೂಂಜ ಮಧ್ಯಸ್ತಿಕೆ
ಈ ಬಿಕ್ಕಟ್ಟು ಬಗೆಹರಿಸುವ ಸಲುವಾಗಿ ಬೆಳ್ತಂಗಡಿ-ಉಜಿರೆ ವ್ಯಾಪ್ತಿಗೊಳಪಟ್ಟಂತೆ ಶಾಸಕ ಹರೀಶ್‌ ಪೂಂಜ ಅವರು ಗುತ್ತಿಗೆ ದಾರರು, ನೌಕರರನ್ನು ಕರೆದು ಬಿಕ್ಕಟ್ಟು ಬಗೆಹರಿಸಿದ್ದರು. ಅದರಂತೆ ಬೆಳ್ತಂಗಡಿ -ಉಜಿರೆ ಸಮಸ್ಯೆ ಬಗೆಹರಿ ಯುವ ಹಂತದಲ್ಲಿದೆ. ಉಳಿದಂತೆ ಬಂಟ್ವಾಳ, ವಿಟ್ಲ ಇತರೆಡೆ ರೀಡಿಂಗ್‌ ನಡೆಯದೆ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ಮೂಲ ದಾಖಲೆ ನೀಡಲು ಸೂಚನೆ
ಬೆಳ್ತಂಗಡಿ-ಉಜಿರೆ ವ್ಯಾಪ್ತಿಗೆ ಒಳಪಟ್ಟಂತೆ ಗುತ್ತಿಗೆದಾರರು ಈ ಹಿಂದಿನ ರೀಡರ್‌ಗಳನ್ನೇ ಉಳಿಸಿಕೊಳ್ಳುವ ಭರವಸೆ ನೀಡಿದೆ. ನಿಯಮನುಸಾರ ಆ. 29ಕ್ಕೆ ಒಪ್ಪಂದ ಸಿದ್ಧಪಡಿಸಿ ಸೆ. 1ಕ್ಕೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಈ ನಡುವೆ ಖಾಲಿ ಚೆಕ್‌, ಪಿಯುಸಿ, ಐಟಿಐ ಮೂಲ ಪ್ರತಿ, ಸಹಿತ ಬಾಂಡ್‌ಗೆ ಸಹಿ ಹಾಕಿದಲ್ಲಿ ಮಾತ್ರ ಎರಡು ವರ್ಷ ಒಪ್ಪಂದ ಪತ್ರ ನೀಡುವುದಾಗಿ ತಿಳಿಸಿತ್ತು. ಮೂಲ ಪ್ರತಿ ಒದಗಿಸಲು ಸಿಬಂದಿ ಒಪ್ಪದೆ ಇತರ ಎಲ್ಲ ಬೇಡಿಕೆಗೆ ಸಮಂಜಸ ನೀಡಿದರೂ ಕಂಪೆನಿ ಒಪ್ಪದೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ. ಹೆಚ್ಚಿನ ನೌಕರರು 10-17 ವರ್ಷಗಳಿಂದಲೂ ಇದೇ ವೃತ್ತಿಯನ್ನು ಅವಲಂಬಿಸಿದ್ದರು. ಈ ವರೆಗೆ ಗುತ್ತಿಗೆ ಕಂಪೆನಿಗಳಷ್ಟೆ ಬದಲಾಗುತ್ತಿತ್ತು. ಕಳೆದ ಐದು ತಿಂಗಳ ಕೋವಿಡ್‌ ಸಮಸ್ಯೆ ನಡುವೆಯೂ ಪ್ರಸಕ್ತ ನೌಕರರನ್ನು ಬದಲಾಯಿಸುವ ಪ್ರಕ್ರಿಯೆ ಯಿಂದ ಹೊಸಬರು ಪೂರ್ಣಾ ವಧಿ ಕೆಲಸ ನಿರ್ವಹಿಸುತ್ತಿಲ್ಲ. ಹಳಬರಿಗೆ ಹೊಸ ಉದ್ಯೋಗದ ಆಯ್ಕೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಮಧ್ಯಪ್ರವೇಶಿಸಿ ಜತೆಗೆ ಜನಪ್ರತಿನಿಧಿಗಳು ಗಮನ ಹರಿಸಿ ಶೀಘ್ರ ಸಮಸ್ಯೆ ಇತ್ಯರ್ಥ ಗೊಳಿಸಿ ಗ್ರಾಹಕರಿಗೆ ಹೊರೆ ತಗ್ಗಿಸಬೇಕಿದೆ.

ಸರಿಯಾಗಲಿದೆ
ಮೀಟರ್‌ ರೀಡಿಂಗ್‌ ಗುತ್ತಿಗೆದಾರರ ಹಾಗೂ ನೌಕರರ ನಡುವಿನ ಕೆಲವು ತಾಂತ್ರಿಕ ದೋಷಗಳಿಂದ ಸಮಸ್ಯೆ ಎದುರಾಗಿತ್ತು. ಈಗಾಗಲೇ ಸಂಬಂಧಪಟ್ಟ ಕಂಪೆನಿಗೆ ನೋಟಿಸ್‌ ಜಾರಿ ಗೊಳಿಸಲಾಗಿತ್ತು. ಅಕ್ಟೋಬರ್‌ನಿಂದ ಎಲ್ಲವೂ ಸರಿಯಾಗಲಿದೆ. ಗ್ರಾಹಕರು ಸಹಕರಿಸಬೇಕು.
-ರಾಮಚಂದ್ರ ಎಂ.  ಕಾರ್ಯನಿರ್ವಾಹಕ ಎಂಜಿನಿಯರ್‌ ಮೆಸ್ಕಾಂ, ಬಂಟ್ವಾಳ ಉಪವಿಭಾಗ

ಟಾಪ್ ನ್ಯೂಸ್

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.