ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್ ಚಾಲೆಂಜ್!
Team Udayavani, Sep 29, 2020, 10:43 PM IST
ಮಹಾನಗರ: ಫೇಸ್ಬುಕ್‌ನಲ್ಲಿ ಕೆಲ ದಿನಗಳಿಂದ ಕಪಲ್ ಚಾಲೆಂಜ್, ಸ್ಮೈಲ್ ಚಾಲೆಂಜ್ ಸಹಿತ ನಾನಾ ಚಾಲೆಂಜ್‌ಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈ ಅವರು ಹೆದ್ದಾರಿ ಸಚಿವರಿಗೆ ರೋಡ್ ಚಾಲೆಂಜ್ ಹಾಕುವುದರ ಮೂಲಕ ವಿಶಿಷ್ಟ ಚಾಲೆಂಜ್ ಶುರು ಮಾಡಿದ್ದು, ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ.
ಬೆಂಗಳೂರು- ಗೋವಾ-ಕೊಚ್ಚಿ- ಸೊಲ್ಲಾ ಪುರ ಸಹಿತ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ ದ.ಕ. ಜಿಲ್ಲೆಯ ಹೆದ್ದಾರಿಗಳು ಹೊಂಡ-ಗುಂಡಿಗಳಿಂದ ಕೂಡಿದ್ದು, ಸಂಚಾರ ದುಸ್ತರವಾಗಿದೆ. ಬೆಂಗಳೂರಿಗೆ ತೆರಳುವ ಹೆದ್ದಾರಿಯ ಬಿ.ಸಿ. ರೋಡ್‌ನಿಂದ ಗುಂಡ್ಯ ತನಕ ಹಾಗೂ ಸಕಲೇಶಪುರ-ಹಾಸನ ರಸ್ತೆಯಲ್ಲಿ ಸಂಚರಿಸುವುದೇ ಸಂಕಟವಾಗಿದೆ. 6-7 ಗಂಟೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಇದ್ದ ಪ್ರಯಾಣಕ್ಕೆ ಅಲ್ಲಲ್ಲಿ ರಾಡಿ ಎದ್ದ ರಸ್ತೆಯಿಂದಾಗಿ 9-10 ಗಂಟೆ ತಗಲುತ್ತಿದೆ. ಸೊಲ್ಲಾಪುರ ಹೆದ್ದಾರಿಯಲ್ಲಿ ಮನಪಾ ವ್ಯಾಪ್ತಿಯ ಕುಲಶೇಖರದಿಂದ ವಾಮಂಜೂರು ತನಕ ಹೊಂಡ-ಗುಂಡಿಗಳು ಬಿದ್ದು ಅವಘಡಕ್ಕೆ ಕಾರಣವಾಗುತ್ತಿವೆ.
ರಸ್ತೆ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮಾಡಿದ ಮನವಿಗಳಿಗೆ ಲೆಕ್ಕವಿಲ್ಲ. ಇದಕ್ಕಾಗಿಯೇ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಿಥುನ್ ರೈ ರೋಡ್ ಚಾಲೆಂಜ್ ಆರಂಭಿಸಿದ್ದು, ಹಲವರು ಇದಕ್ಕೆ ಸಹಮತ ವ್ಯಕ್ತಪಡಿಸಿ ತಮ್ಮ ತಮ್ಮ ಪ್ರದೇಶಗಳ ರಸ್ತೆ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಫೇಸುºಕ್ ಮತ್ತು ಟ್ವೀಟರ್ ಮೂಲಕ “ರೋಡ್ ಚಾಲೆಂಜ್’ ಸವಾಲು ಹಾಕಿದ್ದಾರೆ.
ಗಮನಸೆಳೆಯಲು ಅಭಿಯಾನ
ಮಂಗಳೂರಿಗೆ ಸಂಪರ್ಕಿಸುವ ಹೆದ್ದಾರಿಗಳು ರಾಡಿ ಎದ್ದು ಹೋಗಿದ್ದು, ಸಂಚಾರಕ್ಕೆ ಸಂಕಷ್ಟವಾಗಿದೆ. ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆಗಳಿಂದಾಗಿ ಮಂಗಳೂರು-ಬೆಂಗಳೂರು ಸಂಚಾರಕ್ಕೆ ಕನಿಷ್ಠ 3 ಗಂಟೆ ಹೆಚ್ಚುವರಿಯಾಗಿ ತಗಲುತ್ತಿದೆ. ಮಂಗಳೂರಿಗೆ ಹೊರಭಾಗದವರು ಬಂದಾಗ ನನ್ನ ಜಿಲ್ಲೆಯ ರಸ್ತೆಯ ದುಃಸ್ಥಿತಿಯ ಬಗ್ಗೆ ಮಾತನಾಡುವಂತಾಗಬಾರದು; ರಸ್ತೆ ಉತ್ತಮವಾಗಿದೆ ಎಂದೇ ಹೇಳಬೇಕು. ಇದಕ್ಕಾಗಿ ಹೆದ್ದಾರಿ ಸಚಿವರನ್ನು ಗಮನ ಸೆಳೆಯುವ ಪ್ರಯತ್ನವಾಗಿ ರೋಡ್ ಚಾಲೆಂಜ್ ಅಭಿಯಾನ ಆರಂಭಿಸಿದೆ. ಇದಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಹಲವರು ಸಾಮಾಜಿಕ ತಾಣಗಳಲ್ಲಿ ರಸ್ತೆ ದುರವಸ್ಥೆಯನ್ನು ಪ್ರಕಟಿಸಿ ಸಚಿವರು, ಸಂಸದರಿಗೆ ಟ್ಯಾಗ್ ಮಾಡುತ್ತಿದ್ದಾರೆ.
-ಮಿಥುನ್ ರೈ, ಅಧ್ಯಕ್ಷರು, ದ.ಕ. ಜಿಲ್ಲಾ ಯುವ ಕಾಂಗ್ರೆಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.