ಲಂಕಾದಲ್ಲಿ ಗೋಹತ್ಯೆ ನಿಷೇಧ
Team Udayavani, Sep 30, 2020, 7:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೊಲೊಂಬೋ: ಶ್ರೀಲಂಕಾದಲ್ಲಿ ಇನ್ನು ಜಾನುವಾರುಗಳ ಹತ್ಯೆ ಮಾಡುವುದು ಅಪರಾಧ. ಗೋಹತ್ಯೆ ನಿಷೇಧಿಸುವ ಪ್ರಸ್ತಾವಕ್ಕೆ ಮಂಗಳವಾರ ಶ್ರೀಲಂಕಾ ಸರಕಾರ ಒಪ್ಪಿಗೆ ನೀಡಿದೆ.
ಆದರೆ ಗೋಮಾಂಸ ಸೇವನೆ ಮಾಡುವವರ ಅನುಕೂಲಕ್ಕಾಗಿ ಗೋಮಾಂಸವನ್ನು ಆಮದು ಮಾಡಿಕೊಂಡು ರಿಯಾಯಿತಿ ದರದಲ್ಲಿ ಮಾರಾಟ ಮಾಡಲೂ ಸಂಪುಟ ನಿರ್ಧರಿಸಿದೆ.
ಈ ಮಾಹಿತಿಯನ್ನು ಲಂಕಾ ಸಂಪುಟದ ವಕ್ತಾರ ಕೆಹೆಲಿಯಾ ರಾಮ್‌ಬುಕ್‌ವೆಲ್ಲಾ ತಿಳಿಸಿದ್ದಾರೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ತತ್‌ಕ್ಷಣವೇ ಪ್ರಾಣಿಗಳ ಕಾಯ್ದೆ, ಜಾನುವಾರು ಹತ್ಯೆ ಅಧ್ಯಾದೇಶ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕಾನೂನುಗಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.
ಆದರೆ, ಲಂಕಾ ಸರಕಾರದ ಈ ನಿರ್ದಾರ ದೇಶದಲ್ಲಿರುವ ಬೌದ್ಧ ಸಮುದಾಯವನ್ನು ತುಷ್ಟೀಕರಿಸುವ ಪ್ರಯತ್ನವಾಗಿದ್ದು ಇದರಿಂದ ಇಲ್ಲಿನ ಹೈನೋದ್ಯಮದಾರರಿಗೆ ಹೊಡೆತ ಬೀಳಲಿದೆ ಎಂಬ ಆಕ್ಷೇಪವೂ ಇದೀಗ ದ್ವೀಪ ರಾಷ್ಟ್ರದಲ್ಲಿ ಜೋರಾಗಿಯೇ ಕೇಳಿಬರಲಾರಂಭಿಸಿದೆ.
ಇಲ್ಲಿನ ಸರಕಾರದ ವರದಿಗಳ ಪ್ರಕಾರ ದೇಶದ ಒಟ್ಟು ಹಾಲಿನ ಬೇಡಿಕೆಯ 45% ಮಾತ್ರ ಸ್ಥಳಿಯವಾಗಿ ಪೂರೈಕೆಯಾಗುತ್ತಲಿದ್ದು 270 ಮಿಲಿಯನ್ ಡಾಲರ್ ಮೌಲ್ಯದ ಹಾಲಿನ ಪುಡಿಯ ಆಮದು 2018ರಲ್ಲಿ ನಡೆದಿತ್ತು.
ಹಾಗೆಯೇ ಶ್ರೀಲಂಕಾದಲ್ಲಿ 2018ರಲ್ಲಿ ಒಂದು ಸಾವಿರ ಟನ್ ಹಾಗೂ 2019ರಲ್ಲಿ 29 ಸಾವಿರ ಟನ್ ದನದ ಮಾಂಸ ಉತ್ಪಾದನೆಯಾಗಿತ್ತು ಎಂದು ವರದಿಗಳು ಹೇಳುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.