ಗುಡ್ ನ್ಯೂಸ್: 2018-19ನೇ ಸಾಲಿನ ವಾರ್ಷಿಕ ಜಿಎಸ್ ಟಿ ಪಾವತಿ ಅವಧಿ ಅ.31ರವರೆಗೆ ವಿಸ್ತರಣೆ
ಜಿಎಸ್ ಟಿಆರ್ 9 ಮತ್ತು ಜಿಎಸ್ ಟಿಆರ್ 9ಸಿ ವಾರ್ಷಿಕ ಪಾವತಿಯ ದಿನಾಂಕವನ್ನು ವಿಸ್ತರಿಸಿರುವುದಾಗಿ ಸಿಬಿಐಸಿ ಟ್ವೀಟ್ ಮಾಡಿದೆ.
Team Udayavani, Sep 30, 2020, 3:54 PM IST
ನವದೆಹಲಿ: ಕೋವಿಡ್ ಸಂಕಷ್ಟದಿಂದಾಗಿ ಜಿಎಸ್ ಟಿ ಪಾವತಿದಾರರಿಗೆ 2018-19ನೇ ಸಾಲಿನ ವಾರ್ಷಿಕ ಜಿಎಸ್ ಟಿ ಪಾವತಿಗೆ ಸೆಪ್ಟೆಂಬರ್ 30ರವರೆಗೆ ಈ ಹಿಂದೆ ಕಾಲಾವಕಾಶ ನೀಡಿತ್ತು. ಆದರೆ ಇದೀಗ 2018-2019ರ ಸಾಲಿನ ಜಿಎಸ್ ಟಿ ವಾರ್ಷಿಕ ರಿಟರ್ನ್ ಮತ್ತು ಆಡಿಟ್ ರಿಪೋರ್ಟ್ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.
ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣಾ ನೀತಿ ಸಂಹಿತೆ ಕುರಿತಂತೆ ಸ್ಪಷ್ಟ ಮಾಹಿತಿ ಪಡೆದ ನಂತರ ಕೇಂದ್ರ ಸರ್ಕಾರ 2018-19ರ ಸಾಲಿನಿಂದ 30.09.2020 ರಿಂದ 31.10.2020ರವರೆಗಿನ ಜಿಎಸ್ ಟಿಆರ್ 9 ಮತ್ತು ಜಿಎಸ್ ಟಿಆರ್ 9ಸಿ ವಾರ್ಷಿಕ ಪಾವತಿಯ ದಿನಾಂಕವನ್ನು ವಿಸ್ತರಿಸಿರುವುದಾಗಿ ಸಿಬಿಐಸಿ ಟ್ವೀಟ್ ಮಾಡಿದೆ.
ಮೇ ತಿಂಗಳಿನಲ್ಲಿ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 2018-19ನೇ ಸಾಲಿನ ವಾರ್ಷಿಕ ಜಿಎಸ್ಟಿ ಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಸೆಪ್ಟೆಂಬರ್ 30ರವರೆಗೆ ಸರಕು ಮತ್ತು ಸೇವಾ ತೆರಿಗೆ ಪಾವತಿದಾರರಿಗೆ ಅವಕಾಶ ನೀಡಲಾಗಿತ್ತು.
ಜಿಎಸ್ ಟಿಆರ್ 9 ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ನೋಂದಾಯಿಸಲ್ಪಟ್ಟ ತೆರಿಗೆದಾರರು ಸಲ್ಲಿಸಬೇಕಾದ ವಾರ್ಷಿಕ ಪಾವತಿ ಇದಾಗಿದೆ. ಇದು ವಿವಿಧ ತೆರಿಗೆ ಮುಖ್ಯಸ್ಥರಡಿಯಲ್ಲಿ ಸ್ವೀಕರಿಸಿದ ಬಾಹ್ಯ ಮತ್ತು ಆಂತರಿಕ ಸರಬರಾಜುಗಳ ವಿವರಗಳನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.