ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆ; 4 ವೆಂಟಿಲೇಟರ್ ಸೌಕರ್ಯ; ಪೂರಕ ಸೌಲಭ್ಯಕ್ಕೆ ಬೇಡಿಕೆ
Team Udayavani, Oct 1, 2020, 5:38 AM IST
ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆ.
ಬಂಟ್ವಾಳ: ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರಕಾರ ಸಾರ್ವಜನಿಕ ಆಸ್ಪತ್ರೆಗಳ ಸೌಲಭ್ಯಗಳನ್ನು ವೃದ್ಧಿಸುವ ಕೆಲಸ ಮಾಡುತ್ತಿದ್ದು, ಪ್ರಸ್ತುತ ಕೋವಿಡ್-19 ರೋಗಿಗಳಿಗೆ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿಯಾಗಿ 4 ವೆಂಟಿಲೇಟರ್‌ಗಳನ್ನು ಒದಗಿಸಲಾಗಿದೆ.
ಉಸಿರಾಟದ ತೊಂದರೆ ಇರುವವರಿಗೆ ಕೊರೊನಾ ಹೆಚ್ಚಿನ ತೊಂದರೆ ನೀಡುತ್ತಿದ್ದು, ಅವರಿಗೆ ವೆಂಟಿಲೇಟರ್ ಅನಿವಾರ್ಯವಾಗುತ್ತದೆ. ಈ ಹಿಂದೆ ವೆಂಟಿಲೇಟರ್ ಅಗತ್ಯವಿರುವ ರೋಗಿಗಳನ್ನು ಮಂಗಳೂರು ವೆನಾÉಕ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದ್ದು, ಪ್ರಸ್ತುತ ತಾಲೂಕು ಆಸ್ಪತ್ರೆಯಲ್ಲೂ ವೆಂಟಿಲೇಟರ್ ಸೌಲಭ್ಯ ಸಿಕ್ಕಂತಾಗುತ್ತದೆ. ಆದರೆ ವೆಂಟಿಲೇಟರ್‌ಗೆ ಪೂರಕವಾಗಿ ಸೌಲಭ್ಯಗಳು ಸಿಗದೇ ಇರುವುದರಿಂದ ರೋಗಿಗಳನ್ನು ದಾಖಲಿಸಲು ಹಿಂದೇಟು ಹಾಕಬೇಕಾದ ಸ್ಥಿತಿ ಇದೆ.
ಕೋವಿಡ್ ರೋಗಿಗಳಿಗೆ ಸೌಕರ್ಯ
ಕೋವಿಡ್ ರೋಗಿಗಳಿಗೆ ಹೆಚ್ಚಿನ ಸೇವೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಹೆಚ್ಚುವರಿ ವೆಂಟಿಲೇಟರ್ ಸೌಲಭ್ಯ ನೀಡಲಾಗಿದ್ದು, ಪ್ರಸ್ತುತ ಇತರ ರೋಗಿಗಳಿಗೆ ಅದನ್ನು ನೀಡಲಾಗುತ್ತಿಲ್ಲ. ಅಂದರೆ ಒಂದೇ ಐಸಿಯು ಇದ್ದು, ಅದನ್ನು ಕೋವಿಡ್‌ಗಾಗಿ ಮೀಸಲಿಟ್ಟಿರುವುದರಿಂದ ಅಲ್ಲಿ ಇತರ ರೋಗಿಗಳಿಗೆ ಸೇವೆ ಸಿಗದೇ ಇರುವುದರಿಂದ ಅವರಿಗೆ ವೆಂಟಿಲೇಟರ್ ಸೌಲಭ್ಯ ಇಲ್ಲ. ಜತೆಗೆ ಕೋವಿಡ್ ರೋಗಿಗಳಿಗೆ ಹೆಚ್ಚಿನ ಸೇವೆಗಾಗಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಇಲ್ಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತರ ಸೌಕರ್ಯವೂ ಅತ್ಯಗತ್ಯ
ಸಾಮಾನ್ಯವಾಗಿ ವೆಂಟಿಲೇಟರ್ ನೀಡಿದ ತತ್‌ಕ್ಷಣ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಸಿಗುವುದು ಕಷ್ಟ. ಅಂದರೆ ಅದಕ್ಕೆ ಬೇಕಾದ ಸಿಬಂದಿ, ಸಲಕರಣೆಗಳು, ಜತೆಗೆ ಆಕ್ಸಿಜನ್ ವ್ಯವಸ್ಥೆ ಬೇಕಾಗುತ್ತದೆ. ಹೀಗಾಗಿ ಪ್ರಸ್ತುತ ತಾಲೂಕು ಆಸ್ಪತ್ರೆಯಲ್ಲಿ ಅಂತಹ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ 5 ವೆಂಟಿಲೇಟರ್‌ಗಳಿದ್ದರೂ, ಐಸಿಯು ಬೆಡ್‌ಗಳು ಮೂರು ಮಾತ್ರ ಇದೆ.
ಆಕ್ಸಿಜನ್ ಸೌಲಭ್ಯದ ಕೆಲಸ ಅರ್ಧಕ್ಕೆ ನಿಂತಿದ್ದು, ಅದು ಪೂರ್ಣಗೊಳ್ಳಬೇಕಿದೆ. ಅತಿ ಮುಖ್ಯವಾಗಿ ರೋಗಿಗಳ ಸೇವೆಗಾಗಿ ಸಿಬಂದಿ ಬೇಕಿದ್ದು, ಪ್ರಸ್ತುತ ಐಸಿಯುನಲ್ಲಿ ದಿನವೊಂದಕ್ಕೆ 3 ಮಂದಿ ದಾದಿಯರು ಹಾಗೂ 3 ಮಂದಿ ಗ್ರೂಪ್ ಡಿ ಸಿಬಂದಿ ಬೇಕಾಗುತ್ತದೆ. ಮಾನಿಟರ್ ಸಿಸ್ಟಂ ಸೇರಿದಂತೆ ಇತರ ಸಲಕರಣೆಗಳು ಅತಿ ಅಗತ್ಯ. ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಇಲ್ಲದೇ ಇರುವುದರಿಂದ ಈಗಲೂ ಶೇ. 80-85ರಷ್ಟು ಆಕ್ಸಿಜನ್ ಅಗತ್ಯವಿರುವ ರೋಗಿಗಳನ್ನು ಈಗಲೂ ಮಂಗಳೂರಿಗೆ ಕಳಹಿಸಲಾಗುತ್ತಿದೆ. ಜತೆಗೆ ಇಲ್ಲಿ 24 ಗಂಟೆಯೂ ಲ್ಯಾಬ್ ಬೇಕಿದ್ದು, ಸದ್ಯಕ್ಕೆ ಬೇರೆ ಕಡೆ ಒಪ್ಪಂದ ಮಾಡಿಕೊಂಡು ಆಸ್ಪತ್ರೆಯ ಫಂಡ್‌ನಿಂದ ರೋಗಿಗಳಿಗೆ ಲ್ಯಾಬ್ ಸೇವೆ ಸಿಗುತ್ತಿದೆ. ಹೀಗಾಗಿ ವೆಂಟಿಲೇಟರ್ ಜತೆಗೆ ಎಲ್ಲ ಸೌಲಭ್ಯಗಳು ಸಿಕ್ಕಾಗ ಗುಣಮಟ್ಟದ ಸೇವೆ ಸಾಧ್ಯ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪೂರ್ಣ ಪ್ರಮಾಣದ ಸೌಲಭ್ಯ ಅಗತ್ಯ
ಪ್ರಸ್ತುತ ಹೆಚ್ಚುವರಿಯಾಗಿ 4 ವೆಂಟಿಲೇಟರ್ ಸಿಕ್ಕಿದ್ದು, ಅದನ್ನು ಬಳಕೆ ಮಾಡುತ್ತಿದ್ದೇವೆ. ಆದರೆ ಪೂರ್ಣ ಪ್ರಮಾಣದ ಸೌಲಭ್ಯಗಳು ಸಿಗದೇ ಇರುವುದರಿಂದ ಶೇ. 80-85ರಷ್ಟು ಆಕ್ಸಿಜನ್ ಅಗತ್ಯವಿರುವ ರೋಗಿಗಳನ್ನು ದಾಖಲಿಸಿಕೊಳ್ಳಲು ಕಷ್ಟವಾಗುತ್ತಿದೆ. 24 ಗಂಟೆಯೂ ಲ್ಯಾಬ್ ಸೌಲಭ್ಯವೂ ಅಗತ್ಯವಾಗಿದ್ದು, ಅದಕ್ಕೆ ಖಾಸಗಿಯವರಿಗೆ ಒಪ್ಪಂದ ಮಾಡಿ ಜನತೆಗೆ ಸೇವೆ ನೀಡುತ್ತೇವೆ.
-ಡಾ| ಪುಷ್ಪಲತಾ, ಆಡಳಿತ ವೈದ್ಯಾಧಿಕಾರಿ, ತಾ|ಆಸ್ಪತ್ರೆ ಬಂಟ್ವಾಳ
4 ಹೆಚ್ಚುವರಿ ವೆಂಟಿಲೇಟರ್
ಈ ಹಿಂದೆ ತಾಲೂಕು ಆಸ್ಪತ್ರೆಯಲ್ಲಿ ಒಂದು ವೆಂಟಿಲೇಟರ್ ಇದ್ದು, ಪ್ರಸ್ತುತ 4 ಹೆಚ್ಚುವರಿ ವೆಂಟಿಲೇಟರ್ ಒದಗಿಸಲಾಗಿದೆ. ಒಟ್ಟು 23 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸೂಕ್ತ ವ್ಯವಸ್ಥೆ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿದೆ.
-ಡಾ| ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.