ವಿಶೇಷ ವರದಿ: ಭತ್ತ ಬೆಳೆ ಸಂರಕ್ಷಿಸಲು ಕೃಷಿಕರು ಹೈರಾಣು
ಕಾಡು ಪ್ರಾಣಿ ಉಪಟಳ, ಕಾವಲು ಇಲ್ಲದಿದ್ದರೆ ಪೈರು ನಾಶ
Team Udayavani, Oct 2, 2020, 6:09 AM IST
ಭತ್ತ ಬೆಳೆಗೆ ನವಿಲು, ಮಂಗ ಬಾರದಂತೆ ಶಬ್ದ ಮಾಡುತ್ತಾ ಬೆಳೆ ರಕ್ಷಿಸುತ್ತಿರುವ ಕೃಷಿಕರು.
ಬೆಳ್ತಂಗಡಿ: ಇನ್ನೇನು ವಾರಗಳ ಅಂತರದಲ್ಲಿ ಏಣೆಲು ಬೆಳೆ ಕಟಾವಿಗೆ ಸಿದ್ಧವಾಗಲಿದೆ. ಅಸಹಜ ಮಳೆ, ನೆರೆ ಮಧ್ಯೆಯೂ ಭತ್ತ ಬೆಳೆ ಬೆಳೆದು ಕೃಷಿಕರ ಕೈಸೇರುವ ಹೊತ್ತಿಗೆ ಕಾಡು ಪ್ರಾಣಿಗಳ ಉಪಟಳ ತೀವ್ರವಾಗಿ ಪರಿಣಮಿಸಿದೆ. ಬೆಳ್ತಂಗಡಿ ತಾಲೂಕಿನ ಕುದುರೆಮುಖ ವನ್ಯಜೀವಿ ಅರಣ್ಯ ಪ್ರದೇಶ ಅಂಚಿ ನಲ್ಲಿರುವ ಮಿತ್ತಬಾಗಿಲು, ದಿಡುಪೆ, ಕುಕ್ಕಾವು ಸೇರಿದಂತೆ ತಾಲೂಕಿನಾದ್ಯಂತ ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿ ಕಾಡು ಪ್ರಾಣಿಗಳ ಹಾವಳಿ ಕೃಷಿಕರ ನಿದ್ದೆ ಕೆಡಿಸಿದೆ.
ತೋಟ, ಗದ್ದೆ ಕಾಯಲು ಕಾವಲು
ಕೊರೊನಾದಿಂದ ಕೃಷಿಯಲ್ಲಿ ಜೀವನ ಕಾಣಲು ಹೊರಟಿದ್ದವರೇ ಹೆಚ್ಚು. ಈ ಮಧ್ಯೆ ಭತ್ತ, ತೆಂಗು, ತರಕಾರಿ ಕೃಷಿಗೆ ನವಿಲು, ಹಂದಿ, ಮಂಗ, ಕಡವೆ, ಜಿಂಕೆ, ಹೆಗ್ಗಣ, ಕಾಡಾನೆ ಕಾಟವೂ ಹೆಚ್ಚಾಗಿದೆ. ಪ್ರಾಣಿಗಳನ್ನು ಕಾಯಲೆಂದೆ ಮನೆಮಂದಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅತ್ತ ಮಂಗಳನ್ನು ಓಡಿಸದಲ್ಲಿ ಇತ್ತ ನವಿಲು, ರಾತ್ರಿಯಾದಂತೆ ಹಂದಿಗಳ ಕಾಟದಿಂದ ಬೆಳೆದ ಬೆಳೆ ಅರ್ಧಕ್ಕರ್ಧ ಕಾಡುಪ್ರಾಣಿಗಳ ಹೊಟ್ಟೆಪಾಲಾಗುತ್ತಿದೆ.
ಭತ್ತ ತಳಿ ಸಂರಕ್ಷಣೆಗೂ ಸವಾಲು
ಭತ್ತ ತಳಿ ಸಂರಕ್ಷಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ತಬಾಗಿಲು ಗ್ರಾಮದ ಅಮೈ ನಿವಾಸಿ ಬಿ.ಕೆ.ದೇವರಾವ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ತನ್ನ 5 ಎಕ್ರೆ ಗದ್ದೆಯಲ್ಲಿ 140 ಭತ್ತದ ತಳಿ ಬಿತ್ತಿದ್ದಾರೆ. ಇನ್ನೇನು ಕಟಾವಿಗೂ ಸಿದ್ಧವಾಗಿದೆ. ತನ್ನ 76 ರ ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹದಿಂದ ತಳಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಆದರೆ ನವಿಲು, ಮಂಗ, ಹಂದಿ ಕಾಟದಿಂದ ಬೇಸತ್ತು ಹೋಗಿದ್ದಾರೆ.
ಮಸ್ತೂರಿ, ರಾಜಕಯಮೆ, ಕಾಯಮೆ, ಕಾಸರಗೋಡು, ಎಳಿcàರು, ಎಂಎ 4, ಶಕ್ತಿ, ಗಂಧಸಾಲ, ಜೀರ್‌ಸಾಲ, ಅದೇನ್ ಕೇಳೆ¤ ಸೇರಿದಂತೆ 140 ತಳಿ ಬೆಳೆದಿದ್ದಾರೆ. ಸುಗ್ಗಿಗೆ ಸುಗ್ಗಿಕಯಮೆ, ಕರಿಯಜೇಬಿ, ಕುಟ್ಟಿಕಯಮೆ, ಅತಿಕರಾಯ, ಅತಿಕಾಯ ಹೀಗೆ 40 ತಳಿ ಬೆಳೆಯಲು ತಯಾರಿ ನಡೆಸಿದ್ದಾರೆ. ಆದರೆ ಪ್ರಾಣಿಗಳ ಉಪಟಳದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಬೇಸರವಾಗಿದೆ.
50 ಎಕ್ರೆ ಪ್ರದೇಶಕ್ಕೆ ಮದಕ ನೀರು
ನೀರಿನ ಮೂಲವಿದ್ದರೂ ಸುಗ್ಗಿ ಬೆಳೆಗೆ ನೀರಿನ ಅಭಾವ ಎದುರಾಗುತ್ತದೆ. ಕುಡಿಯಲೂ ನೀರಿಲ್ಲದ ಪರಿಸ್ಥಿತಿ. ಎರ್ಮಾಯಿ ಫಾಲ್ಸ… ಕೆಳಗೆ ಕಡ್ತಿಕುರ್ಮೇ ನಿಂದ 8 ಇಂಚು ಪೈಪು ಬಳಸಿ ಅಲ್ಲಿಂದ ಸುಗ್ಗಿಗೆ ಅದೇ ನೀರು ಬಳಸಲಾಗುತ್ತಿದೆ. 25 ಮನೆಗಳಿಗೆ 50 ಎಕ್ರೆ ಗದ್ದೆಗೆ ಅದೇ ನೀರು. ಅಕ್ಟೋಬರ್ ನಲ್ಲಿ ಮಳೆಗೆ ಪೈಪ್ ಕೊಚ್ಚಿಹೋಗುವ ಸವಾಲುಗಳ ನಡುವೆಯೂ ಗದ್ದೆ ಬೆಳೆ ಬೆಳೆಯುತ್ತಿರುವ ಆಸಕ್ತಿ ಇಲ್ಲಿನ ಮಂದಿಯದು. ಈ ನೀರು ಸುತ್ತಮುತ್ತಲ ಕಕ್ಕನೇಜಿ, ಪಾದೆ, ನಾಗುಂಡಿ, ಕಲ್ಕಾರುಬೈಲು ಇತರ ಸ್ಥಳಗಳಿಗೆ ಅನುಕೂಲವಾಗುತ್ತಿದೆ.
ಆನೆಗಳ ಹಾವಳಿ
ಮಿತ್ತಬಾಗಿಲು ಗ್ರಾಮವೊಂದರಲ್ಲೇ 140ಕ್ಕೂ ಅಧಿಕ ಭತ್ತ ಬೆಳೆಯುವ ಗದ್ದೆಗಳಿವೆ. ಕಜಕೆ, ಮಕ್ಕಿ, ಪರ್ಲ, ದೈಪಿತ್ತಿಲು, ಇಲ್ಯಾರಕಂಡ, ಬೈಲು ಬದನಾಜೆ, ಕಡ್ತಿಕುಮೇರು, ಮಲ್ಲ, ಕಡಮಗುಂಡಿಯಲ್ಲಿ ಆ®ಗಳೆ ಕಾಟ ಹೆಚ್ಚಿದೆ. ಪ್ರಾಣಿಗಳಿಗೆ ಊರಿನಲ್ಲಿ ಸಿದ್ಧ ಆಹಾರ ಲಭ್ಯವಾಗುತ್ತಿದೆ. ಇದಕ್ಕೆ ಒಗ್ಗಿಕೊಂಡಿದ್ದರಿಂದ ಕೃಷಿ ಉಪಟಳಕ್ಕೆ ಕಾರಣವಾಗಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.
ಇತ್ತೀಚಿನ ದಿನಗಳಲ್ಲಿ ಹೆಚ್ಚು
ಭತ್ತ ಬೆಳೆಗೆ ಪೂರಕ ವಾತಾವರಣ ಸವಾಲಾಗಿರುವ ನಡುವೆ ಕಾಡು ಪ್ರಾಣಿಗಳು ಬೆಳೆ ನಾಶಮಾಡುತ್ತಿದೆ. ನಮ್ಮಲ್ಲಿ 200 ತೆಂಗಿನ ಮರಗಳಿವೆ. 5 ವರ್ಷದ ಹಿಂದೆ 10 ಸಾವಿರ ತೆಂಗಿನಕಾಯಿ ಮಾರಿದ್ದೇನೆ. ಕಳೆದ ವರ್ಷ 4,000 ತೆಂಗಿನಕಾಯಿ ಫಸಲು ಸಿಕ್ಕಿದೆ. ಈ ವರ್ಷ 400 ತೆಂಗಿನ ಕಾಯಿ ಸಿಕ್ಕಿದೆ. ಒಮ್ಮೆಗೆ 50 ಮಂಗಗಳು ಲಗ್ಗೆ ಇಡುತ್ತವೆ. ಕಾಡಿನಲ್ಲಿ ಅರಸಿಕೊಂಡು ಹೋಗಬೇಕಾದ ಪ್ರಾಣಿಗಳು ಕೃಷಿ ರುಚಿ ಹಿಡಿದು ಕೃಷಿಗೆ ಲಗ್ಗೆ ಇಡುತ್ತಿದೆ. ಇವೆಲ್ಲ ಸವಾಲುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ.
-ಬಿ.ಕೆ.ದೇವರಾವ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭತ್ತ ತಳಿ ತಜ್ಞ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.