ಒಂದು ಚೆಂಡಿನ ಕಥೆ: ಕ್ರಿಕೆಟ್ ಚೆಂಡಿನ ಬಣ್ಣ ಬದಲಾದಂತೆ ಅದರ ಗುಣವೂ ಬದಲಾಗುತ್ತದೆ!
Team Udayavani, Oct 2, 2020, 4:29 PM IST
ಕ್ರಿಕೆಟ್‌ನಲ್ಲಿ ಬಳಸುವ ಚೆಂಡು ವಿವಿಧ ಬಣ್ಣಗಳದ್ದಾಗಿದೆ. ಒಂದೊಂದು ಬಣ್ಣದ ಹಿಂದೆ ಒಂದೊಂದು ಕಥೆಯಿದೆ. ಎಲ್ಲ ಚೆಂಡನ್ನು ಎಲ್ಲ ಮಾದರಿಯ ಕ್ರಿಕೆಟ್‌ಗೆ ಬಳಸಲಾಗುವುದಿಲ್ಲ. ಎಲ್ಲದಕ್ಕೂ ಒಂದು ಲೆಕ್ಕಾಚಾರವಿದೆ. ಟೆಸ್ಟ್‌ಗೊಂದು, ಏಕದಿನ ಹಾಗೂ ಟಿ20ಗೆ ಮತ್ತೂಂದು ಎಂದು ಇಲ್ಲಿ ಪ್ರತ್ಯೇಕವಾಗಿ ಚೆಂಡುಗಳನ್ನು ವಿಭಾಗಿಸಲಾಗಿದೆ. ಇದೀಗ ಟೆಸ್ಟ್ ಜನಪ್ರಿಯಗೊಳಿಸಲು ಹಗಲುರಾತ್ರಿ ಟೆಸ್ಟ್ ಆರಂಭಿಸಲಾಗಿದೆ. ಇದಕ್ಕೆಂದೆ ಗುಲಾಲಿ ಬಣ್ಣದಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಚೆಂಡನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ಎಲ್ಲ ಚೆಂಡಿನ ಹಿಂದಿರುವ ವಿಶೇಷತೆಯನ್ನು ಇಲ್ಲಿ ವಿವರಿಸಲಾಗಿದೆ.
ಕೆಂಪು ಚೆಂಡು
ಕೆಂಪು ಚೆಂಡಿನ ಬಳಕೆ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾತ್ರ. ಇಲ್ಲಿ ಒಂದು ಚೆಂಡಿನಲ್ಲಿ 80 ಓವರ್ ತನಕ ಆಡಬಹುದು. ಅಂದರೆ ಒಂದು ದಿನದ ಸಂಪೂರ್ಣ ಆಟ ಎಂದು ಪರಿಗಣಿಸಬಹುದು. ಕೆಂಪು ಚೆಂಡು ಏಕದಿನ, ಟಿ20ಯಲ್ಲಿ ಬಳಸುವ ಬಿಳಿ ಚೆಂಡಿಗಿಂತ ಹೆಚ್ಚು ಗಟ್ಟಿಯಾಗಿದೆ. ಕೆಂಪು ಚೆಂಡಿನಲ್ಲಿ ಸ್ವಿಂಗ್ ಮಾಡುವುದು ಕಷ್ಟ ಎನ್ನುವುದು ಹಿಂದೆ ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಗಾಳಿಯ ಒತ್ತಡವು ಚೆಂಡಿನ ಪ್ರತಿ ಬದಿಯ ಮೇಲಿರುವ ಗಾಳಿಯ ಹರಿವನ್ನು ಆಧರಿಸುತ್ತದೆ. ಚೆಂಡಿನ ಒಂದು ಬದಿಯ ಮೇಲೆ ಗಾಳಿಯ ಹರಿವು ತಡೆದಾಗ ಚೆಂಡು ಸ್ವಿಂಗ್ ಆಗುತ್ತದೆ.
ಬಿಳಿ ಚೆಂಡು
ಬಿಳಿ ಚೆಂಡು ಏಕದಿನ ಹಾಗೂ ಟಿ20ನಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ. ಕೆಂಪು ಚೆಂಡಿಗೆ ಹೋಲಿಸಿದರೆ ಈ ಚೆಂಡು ಸ್ವಲ್ಪ ಮೆದು, ಹೊನಲುಬೆ ಳಕಿನಲ್ಲಿ ಹೆಚ್ಚು ಕಣ್ಣಿಗೆ ಕಾಣುತ್ತದೆ. ಬಿಳಿ ಚೆಂಡಿನಲ್ಲಿ ವೇಗದ ಬೌಲರ್‌ಗಳು ಸ್ವಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಕ್ಕಾಬಿಕ್ಕಿಯಾಗಿಸುತ್ತಾರೆ. ಅದರಂತೆ ಈ ಚೆಂಡಿನಲ್ಲಿ ಸುಲಭವಾಗಿ ಸ್ವಿಂಗ್ ಮಾಡಬಹುದು.
ಗುಲಾಲಿ ಚೆಂಡು
ಇತ್ತೀಚೆಗೆ ಕ್ರಿಕೆಟ್‌ಗೆ ಬಂದ ಗುಲಾಲಿ ಚೆಂಡಿನ ಬಳಕೆ ಹಗಲುರಾತ್ರಿ ಟೆಸ್ಟ್‌ಗೆ ಮಾತ್ರ. ಕತ್ತಲೆಯಲ್ಲಿ ಈ ಚೆಂಡು ಹೆಚ್ಚು ಹೊಳಪಿನಿಂದ ಕಾಣುತ್ತದೆ. ಬ್ಯಾಟ್ಸ್‌ಮನ್, ಬೌಲರ್ ಅಥವಾ ಫೀಲ್ಡರ್ ಯಾರೇ ಆದರೂ ಅವರಿಗೆ ಚೆಂಡನ್ನು ಗುರುತಿಸುವುದು ಕಷ್ಟವಾಗಲಾರದು. ಕೆಂಪು ಬಣ್ಣದ ಚೆಂಡು, ಬಿಳಿ ಚೆಂಡಿಗಿಂತಲೂ ಇದು ಹೆಚ್ಚು ಗಟ್ಟಿ. ಫೀಲ್ಡರ್‌ಗಳಿಗೆ ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿಯೇ ಕೆಲವು ಕ್ರಿಕೆಟಿಗರು ಈ ಚೆಂಡನ್ನು ಬಳಸಲು ವಿರೋಧ ವ್ಯಕ್ತಪಡಿಸಿದ್ದಾರೆ.
ಚೆಂಡಿನ ತಯಾರಿಕೆ ಹೇಗೆ?
ವಿಶೇಷ ಮರವೊಂದರ ತಿರುಳಿನಿಂದ ಚೆಂಡನ್ನು ರಚಿಸಲಾಗುತ್ತದೆ. ಇದಕ್ಕೆ ಹೊಲಿದ ಚರ್ಮದ ಹೊದಿಕೆಯ ತಿರುಳನ್ನು ಸುತ್ತಲಾಗುತ್ತದೆ. ನಂತರ ಬಿಗಿಯಾದ ದಾರದಿಂದ ಕಟ್ಟಲಾಗುತ್ತದೆ. ಹೊದಿಕೆಯ ಕಾಲು ಭಾಗ ಕಿತ್ತಳೆ ಹಣ್ಣಿನ ಸಿಪ್ಪೆಯ ಆಕಾರದಲ್ಲಿರುವ ಚರ್ಮದ ನಾಲ್ಕು ತುಂಡುಗಳಿಂದ 90 ಡಿಗ್ರಿಯಿಂದ ಸುತ್ತುವ ಒಂದು ಅರೆಗೋಲದಂತೆ ನಿರ್ಮಿಸಲಾಗುತ್ತದೆ. ಪ್ರಧಾನ ಮಧ್ಯಗೆರೆ ರಚನೆಗೆ ಆರು ಸಾಲುಗಳನ್ನು ದಾರದಿಂದ ಹೊಲಿಯಲಾಗುತ್ತದೆ. ಪುರುಷರ ಕ್ರಿಕೆಟ್‌ಗೆ 5.5ರಿಂದ 5.75 ಔನ್ಸ್ (155.9 ರಿಂದ 163.0 ಗ್ರಾಮ್) ತೂಕವಿರಬೇಕು. ಸುತ್ತಳತೆ 8 13/16ರಿಂದ 9 (224 ಮತ್ತು 229 ಎಂಎಂ) ಒಳಗಿರಬೇಕು.
ಪ್ರಮುಖ ಚೆಂಡು ಉತ್ಪಾದಕ ಸಂಸ್ಥೆಗಳು
ಗನ್ ಅಂಡ್ ಮೋರ್ ಕ್ರಿಕೆಟ್ ಬಾಲ್ಸ್, ಕೊಕಬುರ್ರಾ ಕ್ರಿಕೆಟ್ ಬಾಲ್ಸ್, ಸ್ಲಂಜರ್ ಕ್ರಿಕೆಟ್ ಬಾಲ್ಸ್, ಸಿಎ ಕ್ರಿಕೆಟ್ ಬಾಲ್ಸ್ , ಎಸ್‌ಜಿ ಕ್ರಿಕೆಟ್ ಬಾಲ್ಸ್ ಇವುಗಳು ಚೆಂಡು ತಯಾರಿಕೆಯಲ್ಲಿ ಪ್ರಸಿದ್ಧಿ ಹೊಂದಿದ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಅಪಾಯಕಾರಿ ಚೆಂಡುಗಳಿವು?
ಟೆನಿಸ್ ಬಾಲ್‌ಗಳು ಮೆದುವಾಗಿರುತ್ತದೆ. ಲೆದರ್ ಚೆಂಡುಗಳು ಗಡುಸಾಗಿರುತ್ತದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ತಲೆಗೆ ಹೆಲ್ಮೆಟ್, ಕೈಗೆ ಗ್ಲೌಸ್, ಪ್ಯಾಡ್ ಸೇರಿದಂತೆ ಮತ್ತಿತರ ರಕ್ಷಣಾ ಕವಚಗಳನ್ನು ಧರಿಸಿಯೇ ಆಡಬೇಕು. ಚೆಂಡಿನೇಟಿಗೆ ಆಸೀಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್, ಭಾರತದ ಕ್ರಿಕೆಟಿಗ ರಮಣ್ ಲಾಂಬಾ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾವಿಗೀಡಾಗಿದ್ದಾರೆ. ಮತ್ತೆ ಕೆಲವರು ಗಂಭೀರ ಗಾಯಗೊಂಡಿರುವ ಘಟನೆ ಕಣ್ಣೆದುರಿದೆ. ತಲೆ, ಮುಖದ ಭಾಗಕ್ಕೆ ಈ ಚೆಂಡು ಜೋರಾಗಿ ಬಡಿದರೆ ಪ್ರಾಣಾಪಾಯ ಸಂಭವಿಸಬಹುದು. ಹೀಗಾಗಿ ಐಸಿಸಿ ಮಾನ್ಯತೆ ಪಡೆದ ಕಂಪೆನಿಗಳು ಮಾತ್ರ ವೃತ್ತಿಪರ ಕ್ರಿಕೆಟಿಗರ ಕ್ರಿಕೆಟ್ ಕಿಟ್ ತಯಾರಿಸುತ್ತಾರೆ.
ಹೊಸ ಚೆಂಡು ಬಳಕೆಗೆ ಒಂದೇ ಸಲ ಅವಕಾಶ
ಅಂತಾರಾಷ್ಟ್ರೀಯ ಪಂದ್ಯವೊಂದು ಆರಂಭವಾದ ಶುರುವಾತಿನಲ್ಲಿ ತಂಡವೊಂದಕ್ಕೆ ಎಸೆಯಲು ಹೊಸ ಚೆಂಡು ನೀಡಲಾಗುತ್ತದೆ. ಮತ್ತೊಂದು ಇನಿಂಗ್ಸ್ ಆರಂಭವಾದಾಗಲೂ ಇದೇ ನಿಯಮ ಅನ್ವಯವಾಗುತ್ತದೆ. ಇದಾದ ಬಳಿಕ ಪಂದ್ಯದ ನಡುವಿನಲ್ಲಿ ಎಲ್ಲಿಯೂ ಹೊಸ ಚೆಂಡು ಬಳಕೆಗೆ ಅವಕಾಶವಿಲ್ಲ. ಒಂದು ವೇಳೆ ಚೆಂಡು ಕಾಣೆಯಾದರೆ ಅಥವಾ ಚೆಂಡು ವಿರೂಪಗೊಂಡರೆ ಮಾತ್ರ ಹೊಸ ಚೆಂಡು ಕೊಡಲಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 80 ಓವರ್ ಮುಗಿದ ಬಳಿಕ ಹೊಸ ಚೆಂಡನ್ನು ಪಡೆಯಲು ಅವಕಾಶವಿರುತ್ತದೆ. ಕ್ರೀಡಾಂಗಣಕ್ಕೆ ಚೆಂಡನ್ನು ಉಜ್ಜುವುದು, ಚೆಂಡನ್ನು ಸ್ಯಾಂಡ್‌ಪೇಪರ್ ಬಳಸಿ ತಿಕ್ಕುವುದು, ಚೆಂಡಿನ ಮೂಲ ಸ್ವರೂಪಕ್ಕೆ ಹಾನಿ ಮಾಡುವುದು ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗಿದೆ. 2018ರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಆಸೀಸ್ ನಾಯಕ ಸೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಒಂದು ವರ್ಷಗಳ ಕಾಲ ನೀಷೇದಕ್ಕೊಳಗಾಗಿದ್ದರು.
-ಅಭಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.