90 ಹೊಡಿ ಮನೀಗ್ ನಡಿ ಚಿತ್ರಕ್ಕೆ ಬಿರಾದಾರ್ ಹೀರೋ
Team Udayavani, Oct 2, 2020, 3:49 PM IST
ಸಿಕ್ಕ ಪಾತ್ರಗಳಲ್ಲಿ ಖುಷಿ ಕಾಣುತ್ತಾ ಕನ್ನಡ ಚಿತ್ರರಂಗದಲ್ಲಿ ಸಾಗಿ ಬರುತ್ತಿರುವ ವೈಜನಾಥ್ ಬಿರಾದಾರ್ ಅವರು ಈಗ 500ನೇ ಚಿತ್ರದ ಹೊಸ್ತಿಲಿನಲ್ಲಿದ್ದಾರೆ. ಈಗಾಗಲೇ ಅವರ500ನೇ ಸಿನಿಮಾದ ಚಿತ್ರೀಕರಣ ಕೂಡಾ ಆರಂಭವಾಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಸ್ವತಃ ಬಿರಾದಾರ್ ಅವರೇ ಹೀರೋ. ಅಂದಹಾಗೆ, ಆ ಚಿತ್ರದ ಹೆಸರು “90 ಹೊಡಿ ಮನೀಗ್ ನಡಿ’.
ಮದ್ಯಪಾನದಿಂದಾಗುವ ದುಷ್ಪರಿಣಾಮ ಗಳನ್ನು ಮನರಂಜನೆಯ ಮೂಲಕ ಉತ್ತಮ ಸಂದೇಶ ಹೇಳುವ ಕಥಾಹಂದರ ಈ ಚಿತ್ರದಲ್ಲಿದೆ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಕಥೆ ಹಾಗೂ ಸಂಭಾಷಣೆ ಉಮೇಶ್ ಬಾದರದಿನ್ನಿ ಅವರು ಬರೆದರೆ, ಚಿತ್ರಕಥೆಯನ್ನು ಇಬ್ಬರು ನಿರ್ದೇಶಕರು ಸೇರಿ ರಚಿಸಿದ್ದಾರೆ. ಈ ಹಿಂದೆ “ಬಿಡಲಾರೆ ಎಂದೂ ನಿನ್ನ’ ಚಿತ್ರ ನಿರ್ದೇಶಿಸಿದ್ದ ಉಮೇಶ ಬಾದರದಿನ್ನಿ ಅವರಿಗೆ ಇದು ಎರಡನೇ ಚಿತ್ರ.
“ಹಾರೋ ಹಕ್ಕಿ’ ಹಾಗೂ “ಕೀಟ್ಲೆಕೃಷ್ಣ’ ಎಂಬ ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿದ್ದ ಅನುಭವ ನಾಗರಾಜ್ ಅರೆಹೊಳೆ ಅವರಿಗಿದೆ. ಈವರೆಗೂ ಅರ್ಧಭಾಗದಷ್ಟು ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ. ಮುಂದಿನ ಭಾಗದ ಚಿತ್ರೀಕರಣ ಬೆಂಗಳೂರು, ಬಿಡದಿ ಮುಂತಾದಕಡೆ ನಡೆಯಲಿದೆ. ಮೂರು ಹಾಡುಗಳಿದ್ದು, ಕಿರಣ್ ಶಂಕರ್, ಶಿವು ಬೀರಗಿ ಸಂಗೀತ ನಿರ್ದೇಶನವಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಎರಡು ಹಾಡುಗಳನ್ನು ಹಾಗೂ ಶಿವು ಒಂದು ಹಾಡನ್ನು ಬರೆದಿದ್ದಾರೆ. ಚಿತ್ರಕ್ಕೆಕೃಷ್ಣ ಅವರ ಛಾಯಾಗ್ರಹಣ, ರಾಜಾ ರಮೇಶ್ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವೈಜನಾಥ್ ಬಿರಾದಾರ್,ಕರಿಸುಬ್ಬು, ಧರ್ಮ, ನೀತು, ಪೂಜಾ, ಅಭಯ್ ಪ್ರಶಾಂತ್ ಸಿದ್ಧಿ, ವಿವೇಕ್ ಜಂಬಗಿ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.