ಪ್ರಧಾನಿ, ರಾಷ್ಟ್ರಪತಿ ಪ್ರವಾಸಕ್ಕೆ ವಿಶೇಷ ವಿಮಾನ: ಇದರಲ್ಲಿದೆ ಕ್ಷಿಪಣಿ ನಿರೋಧಕ ವ್ಯವಸ್ಥೆ !
ಇದರಲ್ಲಿದೆ ಏರ್ ಫೋರ್ಸ್ ಒನ್ ಮಾದರಿಯ ಭದ್ರತಾ ಸೌಕರ್ಯ
Team Udayavani, Oct 2, 2020, 5:43 PM IST
ಮಣಿಪಾಲ: ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಪ್ರವಾಸಕ್ಕಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್ ಇಂಡಿಯಾ ಒನ್ ವಿಮಾನ ಭಾರತ ತಲುಪಿದೆ. ಅಮೆರಿಕದಿಂದ ದೆಹಲಿಯ ಏರ್ ಪೋರ್ಟ್ ಗೆ ಏರ್ ಇಂಡಿಯಾ ಒನ್ ಬಂದಿಳಿದಿದ್ದು, ಗಣ್ಯರ ಸಂಚಾರಕ್ಕೆ ಹಾಗೂ ಭದ್ರತೆ ಅನೂಕೂಲವಾಗುವಂತೆ ಈ ವಿಮಾನವನ್ನು ರೂಪಿಸಲಾಗಿದೆ.
2018ರಲ್ಲಿ ಯೋಜನೆಗೆ ಅಂಕಿತ:
ಗಣ್ಯರ ಸಂಚಾರಕ್ಕೆ ಹಲವು ಭದ್ರತಾ ಅಂಶಗಳನ್ನು ಹೊಂದಿದ ಎರಡು ವಿಮಾನಗಳನ್ನು ಮೀಸಲಿಡಲು ಸರಕಾರ ನಿರ್ಧರಿಸಿತ್ತು. ಅದರ ಭಾಗವಾಗಿ ಸರಕಾರಿ ಸ್ವಾಮ್ಯದ ಏರ್ ಇಂಡಿಯಾದಲ್ಲಿ ಪ್ರಯಾಣಿಕ ಸೇವೆಯಲ್ಲಿ ನಿರತವಾಗಿದ್ದ ಎರಡು ವಿಮಾನಗಳನ್ನು ಅಮೆರಿಕದ ಬೋಯಿಂಗ್ ಕಂಪನಿಗೆ 2018ರಲ್ಲಿ ಕಳುಹಿಸಿ, ಮಾರ್ಪಾಡು ಮಾಡಲು ಸೂಚಿಸಲಾಗಿತ್ತು. ಈ ವಿಮಾನಗಳು ಜುಲೈನಲ್ಲೇ ಭಾರತಕ್ಕೆ ಸಿಗಬೇಕಾಗಿದ್ದವು. ಆದರೆ ಕೋವಿಡ್ ಕಾರಣ ಜುಲೈನಲ್ಲಿ, ತಾಂತ್ರಿಕ ಕಾರಣದಿಂದ ಆಗಸ್ಟ್‌ನಲ್ಲಿ ಹಸ್ತಾಂತರ ಮುಂದಕ್ಕೆ ಹೋಗಿತ್ತು.
ಇದನ್ನೂ ಓದಿ: ಹತ್ರಾಸ್ ಪ್ರಕರಣ:ರಾಜ್ಯದಲ್ಲಿ ಎಲ್ಲಾ ಮಹಿಳೆಯರ ರಕ್ಷಣೆ, ಭದ್ರತೆಗೆ ಸರ್ಕಾರ ಬದ್ಧ: ಸಿಎಂ ಯೋಗಿ
ಏರ್ ಫೋರ್ಸ್ ಒನ್ ಮಾದರಿಯ ಭದ್ರತಾ ಸೌಕರ್ಯ
ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್ ಒನ್ ರೀತಿಯ ಮಾದರಿಯಲ್ಲಿಯೇ ಏರ್ ಇಂಡಿಯಾ ಒನ್ ಕೂಡ ಭದ್ರತಾ ಸೌಕರ್ಯ ಹೊಂದಿದ್ದು, ಕ್ಷಿಪಣಿ ದಾಳಿ ನಡೆದರೂ ಜಗ್ಗದ ಈ ವಿಮಾನದ ಮರು ವಿನ್ಯಾಸ, ವಿಮಾನ ಖರೀದಿ, ವಿವಿಐಪಿಗಳ ಓಡಾಟಕ್ಕೆ ತಕ್ಕಂತೆ ಬದಲಾವಣೆ ಮಾಡಲು 8400 ಕೋಟಿ ರು. ಖರ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ
ಬೋಯಿಂಗ್ 777 ಎಂಬ ಹೆಸರಿನ ಈ ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿದ್ದು, ಲಾರ್ಜ್ ಏರ್‌ಕ್ರಾಫ್ಟ್, ಇನ್ ಫ್ರೆರಾರ್ಡ್ ಕೌಂಟರ್ ಮೆಸರ್ಸ್ (ಎಲ್ಎಐಆರ್‌ಸಿಎಂ) ಹಾಗೂ ಸೆಲ್ಫ್ ಪೊಟೆಕ್ಷನ್ ಸೂಟ್ಸ್’ (ಎಸ್‌ಪಿಎಸ್) ಸಿಸ್ಟಂಗಳು ಈ ವಿಮಾನದಲ್ಲಿದೆ. ಸಮಾಜ ವಿದ್ರೋಹಿ ಶಕ್ತಿಗಳು ಹೆಗಲ ಮೇಲಿಟ್ಟು ನಡೆಸುವ ಕ್ಷಿಪಣಿ ದಾಳಿಯಿಂದ ರಕ್ಷಣೆ ಒದಗಿಸುವಲ್ಲಿಯೂ ಇದು ಸಹಕಾರಿಯಾಗಲಿದ್ದು, ಈ ಸಾಧನಗಳನ್ನು 1400 ಕೋಟಿ ರು. ವೆಚ್ಚದಲ್ಲಿ ಭಾರತಕ್ಕೆ ಒದಗಿಸಲು ಫೆಬ್ರವರಿಯಲ್ಲಿ ಅಮೆರಿಕ ನಿರ್ಧಾರ ಕೈಗೊಂಡಿತ್ತು.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲೇನಿದೆ?
ನಿರಂತರವಾಗಿ 17 ಗಂಟೆ ಕಾಲ ಹಾರುತ್ತದೆ
ಈ ವಿಮಾನ ಅಲ್ಟ್ರಾ ಸೂಪರ್ ಆಗಿದ್ದು, ವಿವಿಐಪಿಗಳಿಗೆ ದೊಡ್ಡ ಕ್ಯಾಬಿನ್, ಕಿರಿದಾದ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ನಿರಂತರವಾಗಿ 17 ಗಂಟೆ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಬಹುತೇಕ ಬ್ಯುಸಿನೆಸ್ ಕ್ಲಾಸ್ ಸೀಟ್ ಅಳವಡಿಕೆ ಮಾಡಲಾಗಿರುವ ಈ ವಿಮಾನವನ್ನು ವಾಯುಸೇನೆ ಪೈಲಟ್‌ಗಳಿಂದ ಮಾತ್ರ ಚಾಲನೆ ಮಾಡಲಾಗುತ್ತದೆ. ಈ ವಿಮಾನ ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು, ಹ್ಯಾಕ್ ಮಾಡಲಾಗದ ಆಡಿಯೋ ಮತ್ತು ವಿಡಿಯೋ ಸಂವಹನವನ್ನೂ ಕೂಡ ನಡೆಸಬಹುದು.
ಸದ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಪ್ರಧಾನಿ ಪ್ರವಾಸಕ್ಕೆ ಈ ಬೋಯಿಂಗ್-747 ವಿಮಾನವನ್ನು ಬಳಸಲಾಗುತ್ತಿದ್ದು, ಮತ್ತೊಂದು ಬೋಯಿಂಗ್-777 ಏರ್ ಇಂಡಿಯಾ ಒನ್ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರ ಆಗಲಿದೆ.
ಇದನ್ನೂ ಓದಿ:“ಆತ ಯೋಗಿನೋ-ರೋಗಿನೋ” ಉ.ಪ್ರದೇಶ ಸಿಎಂ ಆದಿತ್ಯನಾಥ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.