ದಸರೆಗೆ ಮುನ್ನವೇ ಸ್ಮಾರ್ಟ್ ಫೋನ್ ಕೊಳ್ಳಿ
ಶೇ. 10 ಸುಂಕ ಹೆಚ್ಚಳ, ಮೊಬೈಲ್ ಬೆಲೆ ಏರಿಕೆ
Team Udayavani, Oct 3, 2020, 5:55 AM IST
ಹೊಸದಿಲ್ಲಿ: ಸ್ಮಾರ್ಟ್ ಫೋನ್ ಖರೀದಿಸುವ ಇಚ್ಛೆ ಇದ್ದರೆ ಈಗಲೇ ನಿರ್ಧರಿಸಿಬಿಡಿ… ದಸರೆಯ ಬಳಿಕ ಈ ಫೋನ್‌ಗಳ ಬೆಲೆ ಹೆಚ್ಚಳ
ವಾಗುವ ಎಲ್ಲ ಸಾಧ್ಯತೆಗಳಿವೆ. ಏಕೆಂದರೆ ಕೇಂದ್ರ ಸರಕಾರವು ಫೋನ್‌ಗಳ ಡಿಸ್‌ಪ್ಲೇ, ಟಚ್ ಪ್ಯಾನೆಲ್‌ಗಳ ಆಮದು ಮೇಲೆ ಶೇ. 10ರಷ್ಟು ಸುಂಕ ವಿಧಿಸಲು ತೀರ್ಮಾನಿಸಿದೆ. ಫೋನ್ ಉತ್ಪಾದಕರು ಆ ವೆಚ್ಚವನ್ನು ನೇರವಾಗಿ ಗ್ರಾಹಕರ ಮೇಲೆ ವರ್ಗಾಯಿಸಲಿರುವುದರಿಂದ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಏರಿಕೆ ಉಂಟಾಗಲಿದೆ.
ಸುಂಕ ಶೇ.10ರಷ್ಟು ಹೆಚ್ಚಳವಾದರೂ ಫೋನ್‌ಗಳ ಬೆಲೆಯಲ್ಲಿ ಶೇ. 1.5ರಿಂದ ಶೇ. 5ರಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. “ಆತ್ಮನಿರ್ಭರ ಭಾರತ’ ಅನ್ವಯ ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಂತಹಂತವಾಗಿ ಉತ್ಪಾದನೆ (ಪಿಎಂಪಿ) ಯೋಜನೆಯಡಿ ದೇಶದಲ್ಲಿಯೇ ಹೆಚ್ಚು ಮೊಬೈಲ್ ಫೋನ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫೋನ್ ಆಮದುದಾರರ ಮೇಲೆ ಶೇ.11 ರಷ್ಟು ಹೆಚ್ಚುವರಿಯಾಗಿ ಸುಂಕದ ಹೊರೆ ಅನುಭವಿಸುವಂತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.