ಸುಸಜ್ಜಿತ ಎಫ್‌ಎಂಸಿಜಿ ವಲಯಕ್ಕೆ ವಿಷನ್ ವರದಿ! ದೇಶದ ಮೊದಲ ಕ್ಲಸ್ಟರ್ ಎಂಬ ಹೆಗ್ಗಳಿಕ
Team Udayavani, Oct 3, 2020, 12:45 PM IST
ಹುಬ್ಬಳ್ಳಿ: ದೇಶದ ಮೊದಲ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ಉತ್ಪಾದನಾ ಕ್ಲಸ್ಟರ್) ವಲಯವನ್ನು ಮಹಾನಗರದಲ್ಲಿ ಸುಸಜ್ಜಿತವಾಗಿ ಸ್ಥಾಪನೆಗೆ ಸಂಬಂಧಿಸಿದಂತೆ ವಿಷನ್ ಗ್ರೂಪ್ ಸಿದ್ಧಪಡಿಸಿರುವ ವರದಿಯನ್ನು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ ಅವರಿಗೆ ಶುಕ್ರವಾರ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ವಿಷನ್ ಗ್ರೂಪ್‌ನ ಮುಖ್ಯಸ್ಥ ಉಲ್ಲಾಸ್ ಕಾಮತ ಅವರು ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಕುರಿತ “ಟ್ರಾನ್ಸ್‌ಫಾರ್ಮ್ ಹುಬ್ಬಳ್ಳಿ-ಧಾರವಾಡ ವಿಷನ್ ಗ್ರೂಪ್ 2020-2025′ ವರದಿಯನ್ನು ಹಸ್ತಾಂತರಿಸಿದರು.
ವರದಿ ಸ್ವೀಕರಿಸಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಬದ್ಧವಾಗಿ ಉತ್ತರ-ಕರ್ನಾಟಕದ ಅಭಿವೃದ್ಧಿಗಾಗಿ “ಟ್ರಾನ್ಸ್‌ಫಾರ್ಮ್ ಹುಬ್ಬಳ್ಳಿ-ಧಾರವಾಡ’ ರೂಪುರೇಷೆಯ ದಾಖಲೆ ಸಿದ್ಧವಾಗಿದೆ. 2025ರ ವೇಳೆಗೆ ಶೇ.35 ಆರ್ಥಿಕ ಬೆಳವಣಿಗೆಯೊಂದಿಗೆ 5 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಇದೆ. ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಮೂಲಕ ಈ ಕ್ಷೇತ್ರದ ಹೂಡಿಕೆದಾರನ್ನು ಸೆಳೆಯಲಾಗುವುದು ಎಂದು ಹೇಳಿದರು.
ಕಳೆದ ಬಜೆಟ್‌ನಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಸಂಬಂಧ ಘೋಷಣೆ ಆಗಿತ್ತು. ಅದರಂತೆ ಟ್ರಾನ್‌ಸಾ#ರ್ಮ್ ಹುಬ್ಬಳ್ಳಿ ಧಾರವಾಡ ವಿಷನ್ ಗ್ರೂಪ್ 2020-2025 ವರದಿ ಸಿದ್ಧಪಡಿಸಲಾಗಿದೆ. ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಕುರಿತು ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಪಡೆದ ಬಳಿಕ ಸಿಎಂ ಜತೆ ಸಮಾಲೋಚನೆ ನಡೆಸಿ ಯೋಜನೆ ಸಾಕಾರಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಹುಬ್ಬಳ್ಳಿ-ಧಾರವಾಡದ ಎಫ್‌ಎಂಸಿಜಿ ಕ್ಲಸ್ಟರ್‌ನಿಂದ ಹೆಚ್ಚುವರಿ 25,000 ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ. ಈ
ಪ್ರದೇಶದಲ್ಲಿ 12-15 ಸಾವಿರ ಕೋಟಿ ರೂ. ಸಾಮಾಜಿಕ ಆರ್ಥಿಕ ವಹಿವಾಟು ನಡೆಯುವ ಅಂದಾಜಿದೆ. ಪ್ರಸ್ತಾವಿತ ಎಫ್‌ಎಂಸಿಜಿ ಕ್ಲಸ್ಟರ್ ಮೂರು ಹಂತದಲ್ಲಿ ಅಭಿವೃದ್ಧಿಯಾಗಲಿದ್ದು, ಪ್ರತಿ ಹಂತದಲ್ಲೂ 50 ಎಫ್‌ಎಂಸಿಜಿ ಕಂಪನಿಗಳು ಅಂದಾಜು 2500 ಕೋಟಿ ರೂ. ಹೂಡಿಕೆ ಮಾಡುವ ನಿರೀಕ್ಷೆ ಇದೆ. ಅದೇ ರೀತಿ ಪ್ರತಿ ಹಂತದಲ್ಲೂ 50,000 ಉದ್ಯೋಗ ಸೃಷ್ಟಿ ಸಾಧ್ಯತೆ ಇದ್ದು, ಪ್ರತಿ ಹಂತದಲ್ಲೂ 500 ಎಕರೆ ಪ್ರದೇಶ ಬಳಕೆಯಾಗಲಿದೆ. ರಾಜ್ಯದ ಮುಂದಿನ ಕೈಗಾರಿಕಾ ಕ್ರಾಂತಿಗೆ ಈ ಯೋಜನೆ ನಾಂದಿ ಹಾಡಲಿದೆ.
ಮುಂದಿನ 4-5 ವರ್ಷಗಳಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೂಡ ಇದು ನೆರವಾಗಲಿದೆ ಎಂದರು.
ವಿಷನ್ ಗ್ರೂಪ್‌ನ ಅಧ್ಯಕ್ಷ ಉಲ್ಲಾಸ ಕಾಮತ ಮಾತನಾಡಿ, ಹೂಡಿಕೆ ಆಕರ್ಷಣೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂಬಯಿ, ಹೈದರಾಬಾದ್, ಗುವಾಹಟಿ ಹಾಗೂ ಹುಬ್ಬಳ್ಳಿಯಲ್ಲಿ ರೋಡ್ ಶೋ ಆಯೋಜಿಸಿತ್ತು.
ಅದರ ಫಲವಾಗಿ ಹಲವಾರು ಯೋಜನೆಗಳು ಸಾಕಾರ ರೂಪ ತಾಳುತ್ತಿವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಅಧ್ಯಯನಕ್ಕೆ ವಿಷನ್ ಗ್ರೂಪ್ ರಚಿಸಲಾಗಿತ್ತು. ರಾಜ್ಯ ಸರ್ಕಾರ ಹಾಗೂ ಕೈಗಾರಿಕೆ ಇಲಾಖೆಯ ಪ್ರಯತ್ನದಿಂದಾಗಿ ಈ
ವರದಿ ಸಿದ್ಧಗೊಂಡಿದೆ ಎಂದರು. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಕೆಐಡಿಬಿ ಸಿಇಒ ಡಾ| ಶಿವಶಂಕರ, ಎಫ್‌ಎಂಸಿಜಿ ಕ್ಲಸ್ಟರ್ ನೋಡಲ್ ಬಿ.ಕೆ ಶಿವಕುಮಾರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.