ಹೆದ್ದಾರಿ ಅಗಲೀಕರಣಕ್ಕೆ ಸಹಕಾರ ನೀಡಿ
Team Udayavani, Oct 3, 2020, 2:40 PM IST
ರಾಜ್ಯ ಹೆದ್ದಾರಿ 95ರಕಾಮಗಾರಿಗಾಗಿ ಮನೆಗಳು ಮತ್ತು ಅಂಗಡಿ ಮುಂಗಟ್ಟುಗಳ ತೆರವುಕಾರ್ಯಾಚರಣೆ ಅಳತೆ ಮಾಡುತ್ತಿರುವ ಅಧಿಕಾರಿ ವರ್ಗದೊಂದಿಗೆ ಶಾಸಕ ನಂಜೇಗೌಡರು ಪರಿಶೀಲನೆ ನಡೆಸಿದರು.
ಮಾಲೂರು: ತಾಲೂಕಿನ ಟೇಕಲ್ ಹೋಬಳಿ ಕೇಂದ್ರದ ಮೂಲಕ ವೆಂಕಟಗಿರಿ ಕೋಟೆಗೆ ಹಾದುಹೋಗುವಂತೆ ನಿರ್ಮಾಣವಾಗುತ್ತಿರುವ ರಾಜ್ಯ ಹೆದ್ದಾರಿ 95ರ ಕಾಮಗಾರಿಗೆ ಅಡಚರಣೆಯಾಗುತ್ತಿರುವ ಮನೆಗಳನ್ನು ತೆರವು ಮಾಡಲು ಅಗತ್ಯ ಸಹಕಾರ ನೀಡುವಂತೆ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ರಸ್ತೆಗಳುಅಭಿವೃದ್ಧಿಯಾಗುವುದರಿಂದ ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟುಗಳ ಜೊತೆಗೆ ಹೊಸ ಹೊಸ ಕೈಗಾರಿಕೆಗಳು ಮತ್ತು ವ್ಯಾಪಾರ ಅಭಿವೃದ್ಧಿಯಾಗಲಿದ್ದು, ಇಲ್ಲಿನ ಪ್ರತಿಯೊಂದು ವಸ್ತುವಿಗೂ ಬೆಲೆ ಹೆಚ್ಚಾಗಲಿದೆ ಎಂದರು. ಆಂಧ್ರಪ್ರದೇಶದ ವಿ.ಕೋಟೆಗೆ ಬೆಂಗಳೂರು ವಿಮಾನ ನಿಲ್ದಾಣ ಮತ್ತು ಹೊಸೂರು ಮಾರ್ಗದಿಂದಸಂಪರ್ಕಕಲ್ಪಿಸಲುಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಿಸಿದ್ದು, ಕಾಮಗಾರಿಯು ಹಂತ ಹಂತವಾಗಿನಡೆಯುತ್ತಿದೆ. ಪ್ರಥಮ ಹಂತವಾಗಿ ಮಾಸ್ತಿ ಗ್ರಾಮದ ಮಧ್ಯ ಭಾಗದಲ್ಲಿ ರಸ್ತೆ ಹಾದು ಹೋಗುತ್ತಿರುವ ಕಾರಣ ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ಮಾಸ್ತಿಯಲ್ಲಿ ಕೆಲವು ಮನೆಗಳ ಅಂಗಡಿಗಳನ್ನುತೆರವುಗೊಳಿಸಿ ರಸ್ತೆ ಅಭಿವೃದ್ಧಿಗೆ ಅಲ್ಲಿನ ಜನರು ಸಹಕಾರ ನೀಡಿದ್ದರು.
ಅದೇ ರೀತಿಯಲ್ಲಿ ಪ್ರಸ್ತುತ ಟೇಕಲ್ ಗ್ರಾಮದ ರಸ್ತೆ ಬದಿಯಲ್ಲಿನ ಕೆಲವು ಮನೆಗಳನ್ನು ತೆರವುಮಾಡಬೇಕಾಗಿರುವುದಿಂದ ಸಾರ್ವಜನಿಕರುಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು. ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲು ಸೇತುವೆ ಕಾಮಗಾರಿಯು ಶೀಘ್ರವಾಗಿ ಆರಂಭವಾಗಲಿದ್ದು, ಟೇಕಲ್ ಹೋಬಳಿ ಕೇಂದ್ರವು ಸೇರಿದಂತೆಈಬಾಗದಅನೇಕ ಹಳ್ಳಿಗಳ ಸಾರಿಗೆ ಸಂಪರ್ಕ ಉತ್ತಮವಾಗಲಿದೆ ಎಂದರು. ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸ್ಥಳೀಯ ಮುಖಂಡರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.