ಅಭಿಯಾನದ ಭಿತ್ತಿಪತ್ರ ಬಿಡುಗಡೆ
Team Udayavani, Oct 3, 2020, 4:49 PM IST
ದಾವಣಗೆರೆ: ಜಿಲ್ಲಾ ವರದಿಗಾರರ ಕೂಟ, ಕ್ಯಾನ್ಸರ್ ಫೌಂಡೇಷನ್, ಹೈದರಾಬಾದ್‌ನ ಗ್ರೇಸ್ ಕ್ಯಾನ್ಸರ್ ಫೌಂಡೇಷನ್ ನೇತೃತ್ವದಲ್ಲಿ ಅ.10ರ ಶನಿವಾರ ಹಮ್ಮಿಕೊಂಡಿರುವ ಕ್ಯಾನ್ಸರ್ ನಡೆ-ಕೋವಿಡ್ ತಡೆ ಅಭಿಯಾನದ ಭಿತ್ತಿಪತ್ರವನ್ನು ಗಾಂಧಿ-ಶಾಸ್ತ್ರೀ ಜಯಂತಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ಕಲಾವಿದ ಆರ್.ಟಿ.ಅರುಣ್ ಕುಮಾರ್, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಜಾಗೃತಿ ಅಭಿಯಾನವನ್ನು ಪರೋಕ್ಷವಾಗಿ ಮಾಡುತ್ತಿದ್ದು ಅ.10ರ ಬೆಳಗ್ಗೆ 8 ಗಂಟೆಗೆ ಭಾಗವಹಿಸುವವರು. ತಮ್ಮ ಅನುಕೂಲಕರ ಸ್ಥಳದಲ್ಲಿ 20 ನಿಮಿಷ ವಾಕ್ ಮಾಡಬೇಕು. ಆ ಭಾಗವಹಿಸಿಕೆಯನ್ನು ಸೆಲ್ಫಿ ವಿಡಿಯೋ ಮುದ್ರೀಕರಿಸಿ ಅದನ್ನು 40ರಿಂದ 90 ಸೆಕೆಂಡ್‌ಗಳಲ್ಲಿ ಸಾಂದ್ರೀಕರಿಸಿ ನಮ್ಮ ಫೇಸ್ ಬುಕ್ ಪೇಜ್ DavanagereCancer Foundation mailto:[email protected] ಗೆ ಇಲ್ಲವೇ ಇನ್ಸಾ$rಗ್ರಾಮ್ ಅಕೌಂಟ್ Davanagere Cancer Foundation mailto:[email protected] ಅಥವಾ ಈ ಮೇಲ್ [email protected] mailto:[email protected] ವಿಳಾಸಕ್ಕೆ ಅಪ್ ಲೋಡ್ ಮಾಡಬೇಕು. ಇಲ್ಲವಾದಲ್ಲಿ 7892403271 ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಬಹುದಾಗಿದೆ ಎಂದು ತಿಳಿಸಿದರು.
ಸಂಘ-ಸಂಸ್ಥೆಯವರು ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ತಮ್ಮ ನಿರ್ಧಿಷ್ಟ ಸ್ಥಳಗಳಲ್ಲಿ ಪಾಲ್ಗೊಂಡು ವಿಡಿಯೋ ಮುದ್ರೀಕರಿಸಿ ಅ.10ರ ರಾತ್ರಿ 8 ಗಂಟೆಯ ಒಳಗೆ ಅಪ್‌ಲೋಡ್ ಮಾಡಬೇಕು. ಅತ್ಯುತ್ತಮ ಐದು ವೈಯಕ್ತಿಕ ವಿಡಿಯೋಗಳಿಗೆ ತಲಾ 2 ಸಾವಿರ ರೂ. ಬಹುಮಾನ, ಸಂಘ-ಸಂಸ್ಥೆಗೆಳ ಮೊದಲೆರಡು ಅತ್ಯುತ್ತಮ ವಿಡಿಯೋಗಳಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಮಹಿಳೆಯರಿಗಾಗಿ ಮತ್ತೂಂದು ವಿಶೇಷ ಬಹುಮಾನವನ್ನು ಎರಡುಸಾವಿರ ರೂಪಾಯಿ ಇಂಡಿಯನ್ ರೆಡ್ ಕ್ರಾಸ್ ವತಿಯಿಂದ ನೀಡಲಾಗುವುದು. ಯುವಕರು, ವಿದ್ಯಾರ್ಥಿಗಳು ಆಸಕ್ತ ಸಂಘ-ಸಂಸ್ಥೆಗಳು ಅಭಿಯಾನದಲ್ಲಿ ಪಾಲ್ಗೊಂಡು ಕ್ಯಾನ್ಸರ್ ಹಿಮ್ಮೆಟ್ಟಿಸಬಹುದು, ಕೋವಿಡ್ ಎದುರಿಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಬೇಕಿದೆ ಎಂದು ತಿಳಿಸಿದರು.
ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ. ಆರ್. ಆರಾಧ್ಯ, ಬಿ.ಎನ್. ಮಲ್ಲೇಶ್, ಕ್ಯಾನ್ಸರ್ ಫೌಂಡೇಷನ್ ಕಾರ್ಯದರ್ಶಿ ಡಾ| ಸುನೀಲ್ ಬ್ಯಾಡಗಿ, ರೆಡ್‌ಕ್ರಾಸ್ ಡಾ|ಎ.ಎಂ. ಶಿವಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.