ಗಾಲ್ವಾನ್ ಹುತಾತ್ಮರಿಗೆ ಸ್ಮಾರಕ ಗೌರವ
Team Udayavani, Oct 4, 2020, 6:00 AM IST
ನವದೆಹಲಿ: ಗಾಲ್ವಾನ್ ಘರ್ಷಣೆಯಲ್ಲಿ ವೀರಮರಣವನ್ನಪ್ಪಿದ 20 ಧೀರ ಯೋಧರ ನೆನಪಿಗಾಗಿ ಭಾರತೀಯ ಸೇನೆ ಲಡಾಖ್‌ನಲ್ಲಿ ಸ್ಮಾರಕ ನಿರ್ಮಿಸಿದೆ. ಸೈನಿಕರ ಸಾವನ್ನು ಮುಚ್ಚಿಟ್ಟು, ಸಮಾಧಿ ಚಿತ್ರಗಳ ವೈರಲ್‌ನಿಂದ ಮುಖಭಂಗ ಅನುಭವಿಸಿದ ಹೇಡಿ ಚೀನಕ್ಕೆ ಭಾರತದ ಈ ದಿಟ್ಟತನ ಇರುಸು ಮುರುಸು ಸೃಷ್ಟಿಸಿದೆ.
ಪೂರ್ವ ಲಡಾಖ್‌ನ ಪೋಸ್ಟ್ 120 ಪ್ರದೇಶದಲ್ಲಿ ನಿರ್ಮಿಸಲಾದ ಹುತಾತ್ಮ ಯೋಧರ ಸ್ಮಾರಕ ಕಳೆದ ವಾರ ಉದ್ಘಾಟನೆಗೊಂಡಿದೆ ಎಂದು ಸೇನೆಯ ಮೂಲ ಗಳು ತಿಳಿಸಿವೆ. ಶೊಕ್- ದೌಲತ್ ಬೇಗ್ ಓಲ್ಡಿ (ಡಿಬಿಒ) ರಸ್ತೆ ಬದಿಯಲ್ಲಿರುವ “ಪೋಸ್ಟ್ 120′, ಗಾಲ್ವಾನ್ ನದಿಗೆ ಸಮೀಪದಲ್ಲಿದೆ.
ಗಾಲ್ವಾನ್ ತೀರದಲ್ಲಿ ಜೂ.18ರಂದು ನಡೆದ ಭಾರತ- ಚೀನ ಸೈನಿಕರ ನಡುವಿನ ಘರ್ಷಣೆಯಲ್ಲಿ 20 ಭಾರತೀಯ ಯೋಧರು ವೀರಮರಣವನ್ನಪ್ಪಿದ್ದರು. 35ಕ್ಕೂ ಅಧಿಕ ಚೀನೀ ಸೈನಿಕರು ಸಾವಿಗೀಡಾಗಿದ್ದರು. ಪ್ರಸ್ತುತ ಸ್ಮಾರಕದ ಮೇಲೆ ಗಾಲ್ವಾನ್ ದಡದಲ್ಲಿ ಹೋರಾಡಿ ಮಡಿದ, ಕರ್ನಲ್ ಬಿ. ಸಂತೋಷ್ ಬಾಬು ನೇತೃತ್ವದ ಬಿಹಾರ ರೆಜಿಮೆಂಟ್ಸ್‌ನ 20 ಸೈನಿಕರ ಹೆಸರನ್ನು ಕೆತ್ತಿ ಗೌರವ ಸೂಚಿಸಲಾಗಿದೆ. “ಹಿಮಚಿರತೆ ಕಾರ್ಯಾಚರಣೆಯಲ್ಲಿ ಮಡಿದ ಗಾಲ್ವಾನ್ ವೀರರು’ ಎಂಬ ಸಾಲು, ಧೀರರ ಕಥೆ ಸಾರುತ್ತಿದೆ.
ಜ. ನರವಣೆ ಶೀಘ್ರ ಮ್ಯಾನ್ಮಾರ್‌ಗೆ!
ಭಾರತ- ಚೀನ ಗಡಿಬಿಕ್ಕಟ್ಟಿನ ನಡುವೆಯೇ ನೆರೆಯ ಮ್ಯಾನ್ಮರ್ ಜತೆಗಿನ ಸಂಬಂಧ ಬಲಪಡಿಸಲು ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಶೀಘ್ರ ಮ್ಯಾನ್ಮಾರ್ ಪ್ರವಾಸ ಕೈಗೊಳ್ಳಲಿದ್ದಾರೆ. ಜ. ನರವಣೆ ಮತ್ತು ಹರ್ಷ ಅವರು ಮ್ಯಾನ್ಮಾರ್‌ನ ಹಿರಿಯ ಜ. ಮಿನ್ ಆಂಗ್ ಹೆಗ್ ಮತ್ತು ಸ್ಟೇಟ್ ಕೌನ್ಸೆಲರ್ ಆಂಗ್ ಸಾನ್ ಸೂ ಕಿ ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಬಂದರು ಸರಕು ಸಾಗಣೆ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಒಪ್ಪಂದಗಳಿಗೆ ಸಹಿಹಾಕುವ ನಿರೀಕ್ಷೆ ಇದೆ. ಮುಖ್ಯವಾಗಿ ಕಲಾದನ್ ಬಹುಮಾದರಿ ಯೋಜನೆ ಮತ್ತು ದಂಗೆಕೋರರ ನಿಯಂತ್ರಿಸುವ ಸಂಬಂಧದ ಭದ್ರತಾ ಒಪ್ಪಂದಗಳಿಗೆ ಅಂಕಿತ ಬೀಳಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.