ಸಂತ್ರಸ್ತೆಯ ಕುಟುಂಬದ ಧ್ವನಿ ಹತ್ತಿಕ್ಕಲು ಬಿಡೆವು
ಹತ್ರಾಸ್ ಸಂತ್ರಸ್ತೆಯ ಹೆತ್ತವರ ಭೇಟಿಯಾದ ರಾಹುಲ್-ಪ್ರಿಯಾಂಕಾ
Team Udayavani, Oct 4, 2020, 6:10 AM IST
ಸಂತ್ರಸ್ತೆಯ ಕುಟುಂಬಕ್ಕೆ ಪ್ರಿಯಾಂಕಾ, ರಾಹುಲ್ ಸಾಂತ್ವನ ಹೇಳಿದರು.
ಹತ್ರಾಸ್/ಹೊಸದಿಲ್ಲಿ: ದಿಲ್ಲಿ- ಉತ್ತರ ಪ್ರದೇಶದ ಗಡಿಯಲ್ಲಿ ಹೈಡ್ರಾಮಾ, ಲಾಠಿ ಪ್ರಹಾರ, ಪೊಲೀಸರೊಂದಿಗಿನ ಘರ್ಷಣೆ, ಶಕ್ತಿ ಪ್ರದರ್ಶನದ ಬಳಿಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಹತ್ರಾಸ್ ಅತ್ಯಾ ಚಾರ ಸಂತ್ರಸ್ತೆಯ ಮನೆಯನ್ನು ತಲುಪಿದ್ದಾರೆ.
ಬೂಲ್‌ಗಡಿ ಗ್ರಾಮದಲ್ಲಿನ ಮನೆಗೆ ತೆರಳಿದ ಪ್ರಿಯಾಂಕ- ರಾಹುಲ್, ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಮೃತ ಯುವತಿಯ ತಾಯಿ ಯನ್ನು ಪ್ರಿಯಾಂಕಾ ಆಲಿಂಗಿಸಿ ಕೊಂಡು ಸಮಾಧಾನ ಹೇಳಿದ್ದಾರೆ. ಬಳಿಕ ಮಾತ ನಾಡಿದ ರಾಹುಲ್, “ಸಂತ್ರಸ್ತೆಯ ಕುಟುಂಬದ ಧ್ವನಿಯನ್ನು ಹತ್ತಿಕ್ಕಲು ಯಾವ ಶಕ್ತಿಗೂ ಸಾಧ್ಯವಿಲ್ಲ’ ಎಂದಿದ್ದಾರೆ. ಇದೇ ವೇಳೆ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಸಿಎಂ ಯೋಗಿ ಆದಿತ್ಯನಾಥ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಕಳೆದ 3 ದಿನಗಳಿಂದಲೂ ಸಂತ್ರಸ್ತೆಯ ಕುಟುಂ ಬ ವನ್ನು ಭೇಟಿಯಾಗಲು ಉತ್ತರ ಪ್ರದೇಶ ಸರಕಾರ ಯಾರಿಗೂ ಅವಕಾಶ ನೀಡಿ ರಲಿಲ್ಲ. ಇದು ವಿಪಕ್ಷಗಳ ನಾಯಕರು, ಮಾಧ್ಯ ಮ ಪ್ರತಿನಿಧಿಗಳು ಸೇರಿದಂತೆ ಹಲ ವರ ಆಕ್ರೋಶಕ್ಕೆ ಕಾರಣವಾಗಿತ್ತು. ಶನಿವಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿಕೊಂಡ ಬಳಿಕ, ಇತರರಿಗೆ ಗ್ರಾಮಕ್ಕೆ ಪ್ರವೇಶಿಸಲು ಅನುಮತಿ ನೀಡುವುದಾಗಿ ಉ. ಪ್ರದೇಶ ಪೊಲೀಸರು ಘೋಷಿಸಿದರು. ಜತೆಗೆ, ಗ್ರಾಮದ ಪ್ರವೇಶದ್ವಾರದಲ್ಲಿ ಅಳವಡಿಸ ಲಾಗಿ ದ್ದ ಬ್ಯಾರಿಕೇಡ್‌ಗಳನ್ನು ತೆಗೆದರು.
ಘರ್ಷಣೆ, ಲಾಠಿಪ್ರಹಾರ: 2 ದಿನಗಳ ಹಿಂದೆ ಸಂತ್ರ ಸ್ತೆಯ ಕುಟುಂಬದ ಭೇಟಿಗೆ ಪ್ರಯತ್ನಿಸಿ ವಿಫಲವಾಗಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಶನಿವಾರ ಮತ್ತೆ ಉತ್ತರಪ್ರದೇಶಕ್ಕೆ ತೆರಳಿದರು. ಸೋದರನನ್ನು ಪಕ್ಕದಲ್ಲಿ ಕೂರಿಸಿ ಕೊಂಡು ಪ್ರಿಯಾಂಕಾ ಅವರೇ ಸ್ವತಃ ಕಾರು ಚಲಾಯಿಸಿದರು. ಈ ವಿಚಾರ ತಿಳಿಯು ತ್ತಿದ್ದಂತೆ, ದಿಲ್ಲಿ- ನೋಯ್ಡಾ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರು ಜಮಾವಣೆ ಗೊಂಡರು. ಘೋಷಣೆಗಳನ್ನು ಕೂಗುತ್ತಾ ಅಲ್ಲಿಗೆ ಆಗಮಿಸಿದ ನೂರಾರು ಕಾಂಗ್ರೆಸ್ ಕಾರ್ಯ ಕರ್ತರನ್ನು ಪೊಲೀಸರು ತಡೆಯಲು ಮುಂದಾದರು. ಈ ವೇಳೆ ಸಣ್ಣಮಟ್ಟಿಗೆ ಘರ್ಷಣೆ, ಲಾಠಿಪ್ರಹಾರ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ಲಾಠಿ ಬೀಸಿದಾಗ, ಪ್ರಿಯಾಂಕಾ ಅವರೇ ಅಡ್ಡ ಬಂದು ಕಾರ್ಯಕರ್ತರಿಗೆ ಲಾಠಿಯೇಟು ಬೀಳ ದಂತೆ ತಡೆಯುತ್ತಿದ್ದ ದೃಶ್ಯಗಳು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೊನೆಗೆ, ಪೊಲೀಸರು ಪ್ರಿಯಾಂಕಾ, ರಾಹು ಲ್ ಸೇರಿ 5 ಮಂದಿಗೆ ಸಂತ್ರಸ್ತೆಯ ಕುಟುಂಬ ವನ್ನು ಭೇಟಿಯಾ ಗಲು ಅನುಮತಿ ನೀಡಿದರು.
ಹಲವೆಡೆ ಪ್ರತಿಭಟನೆ, ರ್ಯಾಲಿ
ಹತ್ರಾಸ್ ಪ್ರಕರಣ ಖಂಡಿಸಿ ಕೋಲ್ಕತಾದಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಶನಿವಾರ ಭಾರೀ ರ್ಯಾಲಿ ನಡೆದಿದೆ. ಲಕ್ನೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರ ಕಾರನ್ನು ಅಡ್ಡಗಟ್ಟಿದ ಘಟನೆಯೂ ವರದಿಯಾಗಿದೆ.
ಮಂಪರು ಪರೀಕ್ಷೆ ಜಿಲ್ಲಾಧಿಕಾರಿ-ಎಸ್ಪಿಗೆ ಮಾಡಿಸಿ!
ನಾವು ಅಷ್ಟೊಂದು ಬೇಡಿಕೊಂಡರೂ ಪೊಲೀಸರು ನನ್ನ ಮಗಳ ಮೃತದೇಹವನ್ನು ಕೂಡ ನಮಗೆ ಹಸ್ತಾಂತರಿಸದೇ ಸುಟ್ಟುಬಿಟ್ಟರು. ವಿಶೇಷ ತನಿಖಾ ತಂಡವು ಆರೋಪಿಗಳೊಂದಿಗೆ ಕೈಜೋಡಿಸಿದೆ. ಎಸ್‌ಐಟಿ-ಸಿಬಿಐ ಮೇಲೆ ನಮಗೆ ನಂಬಿಕೆಯಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ನಾವು ಆಗ್ರಹಿಸು ತ್ತೇವೆ ಎಂದು ಸಂತ್ರಸ್ತೆಯ ತಾಯಿ ಕೋರಿಕೊಂಡಿದ್ದಾರೆ. ಜತೆಗೆ, ನಮ್ಮನ್ನೇಕೆ ಮಂಪರು ಪರೀಕ್ಷೆಗೆ ಒಳಪಡಿಸುತ್ತೀರಿ? ಪದೇ ಪದೆ ಸುಳ್ಳು ಹೇಳುತ್ತಿರುವ ಜಿಲ್ಲಾಧಿಕಾರಿ ಮತ್ತು ಎಸ್‌ಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದವರು ಆಗ್ರಹಿಸಿದ್ದಾರೆ.
ನಮ್ಮ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜ ನ್ಯವು ಅತ್ಯಂತ ನಾಚಿಕೆ ಗೇಡಿನ ಸಂಗತಿ. ಇಡೀ ದೇಶ ನಿಮ್ಮತ್ತ ನೋಡುತ್ತಿದೆ. ಅತ್ಯಾ ಚಾರ ವಿರುದ್ಧದ ಯುದ್ಧವನ್ನು ನೀವೇ ಮುನ್ನಡೆಸಬೇಕು. ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ನಾನು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ.
ಕೈಲಾಶ್ ಸತ್ಯಾರ್ಥಿ, ನೊಬೆಲ್ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.