ಅತ್ಯಾಚಾರ ತಡೆಗೆ ಉ.ಪ್ರ ಸರ್ಕಾರ ವಿಫಲ
Team Udayavani, Oct 4, 2020, 1:31 PM IST
ಮಳವಳ್ಳಿಯಲ್ಲಿ ವಿವಿಧ ಸಂಘಟನೆಗಳು ಉತ್ತರ ಪ್ರದೇಶದ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಅವರ ಪ್ರತಿಕೃತಿದಹಿಸಿ ಪ್ರತಿಭಟನೆ ನಡೆಸಿದರು.
ಮಳವಳ್ಳಿ: ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಕೊಲೆ ಪ್ರಕರಣವನ್ನು ಹೆಚ್ಚಾಗುತ್ತಿದ್ದರೂ, ಇಂತಹಕೃತ್ಯವನ್ನುನಿಯಂತ್ರಿಸಲು ಸರ್ಕಾರ ವಿಫಲವಾಗಿದೆ. ಕೂಡಲೇ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರ ಹಿಸಿ, ವಿವಿಧ ಜನಪರ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಪಂ ಕಚೇರಿಯಿಂದ ಅಂಬೇಡ್ಕರ್ ವಿಚಾರ ವೇದಿಕೆ, ಬೌದ್ದಮಹಾಸಭಾ, ಗಂಗಾಮತ ಸಮಾಜಸೇರಿದಂತೆವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಮೂಲಕ ಅನಂತ್ ರಾಂ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ, ಯೋಗಿ ಆದಿತ್ಯನಾಥ್ ಅವರ ಪ್ರತಿಕೃತಿದಹಿಸಿ ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಉತ್ತರ ಪ್ರದೇಶದ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರ ಬೇಕು, ಸಾಕ್ಷ್ಯನಾಶ ಮಾಡಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಹೊಣೆಯಾಗಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾ ಗೊಳಿಸಿ ಪ್ರಕರಣವನ್ನು ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ ಮೃತಪಟ್ಟ ಯುವತಿಯ ಕುಟುಂಬದವರಿಗೆ ನ್ಯಾಯ ದೊರಕಿಸಿ ಕೊಡಬೇ ಕೆಂದು ಆಗ್ರಹಿಸಿ ಕಂದಾಯಇಲಾಖೆಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಪಂ ಪ್ರಭಾರ ಅಧ್ಯಕ್ಷ ಸಿ. ಮಾಧು, ಪುರಸಭೆ ಮಾಜಿ ಸದಸ್ಯರಾದ ಮಹೇಶ್, ಗಂಗಾಧರ್, ಮೆಹಬೂಬಾಷ, ಜಿ.ಪ.ಮಾಜಿ ಜಯ ರಾಜ್, ಸಿಐಟಿಯುನ ಜಿ.ರಾಮಕೃಷ್ಣ, ಮುಖಂಡ ರಾದ ಎನ್.ಎಲ್.ಭರತ್ ರಾಜ್, ದುಗ್ಗನಹಳ್ಳಿ ನಾಗ ರಾಜು, ಆಟೋ ಮಂಜು ಮಹೇಶ್, ಕಾಂತರಾಜು, ನಟರಾಜ್, ಶಾಂತರಾಜ್, ಬಸವರಾಜು, ಶಿವ ಕುಮಾರ್, ಕಂಬರಾಜು, ಪ್ರಸಾದ್, ನಾಗರಾಜು, ಯತೀಶ್ ಇದ್ದರು.
ಬಿಎಸ್‌ಪಿಪಕ್ಷದ ತಾಲೂಕುಘಟಕದವತಿಯಿಂದ ಪ್ರತ್ಯೇಕವಾಗಿಪ್ರತಿಭಟನೆನಡೆಸಿಮನವಿಸಲ್ಲಿಸಿದರು. ಕುಮಾರ್, ಶಿವಮೂರ್ತಿ, ತಮ್ಮಯ್ಯ, ವೀರ ಭದ್ರಯ್ಯ, ಸತೀಶ್ ಹಾಜರಿದ್ದರು
ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ :
ಶ್ರೀರಂಗಪಟ್ಟಣ: ಉತ್ತರ ಪ್ರದೇಶದಲ್ಲಿ ಅತ್ಯಾ ಚಾರವನ್ನು ಖಂಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡ ಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖಂಡರು ತಹಶೀಲ್ದಾರ್‌ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ಆಗಮಿಸಿದ ಕಾರ್ಯರ್ತರು, ಉತ್ತರ ಪ್ರದೇಶ ಸರ್ಕಾರ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿಲ್ಲ. ಅಲ್ಲದೆ, ಅತ್ಯಾಚಾರ ಮತ್ತು ಕೊಲೆ ಹೆಚ್ಚಾ ಗುತ್ತಿ ದ್ದರೂ ಸರ್ಕಾರ ಕಾನೂನು ಕ್ರಮ ಕೈಗೊಂ ಡಿಲ್ಲ. ಅತ್ಯಾಚಾರ ತಡೆಗೆ ಅಲ್ಲಿನ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು.
ಪಕ್ಷದ ತಾಲೂಕು ಉಸ್ತುವಾರಿ ವಿ. ಸುರೇಶ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದರೂ,ದೇಶದಲ್ಲಿಕಾನೂನುಇಲ್ಲವೇನೋಎಂಬ ಪ್ರಶ್ನೆಯಾಗಿದೆ. ಇದರಿಂದ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ಉತ್ತರ ಪ್ರದೇಶದ ಸರ್ಕಾರವನ್ನು ವಜಾಗೊಳಿಸ ಬೇಕು. ಉತ್ತಮ ಸಮಾಜ ನಿರ್ಮಾಣ ವಾಗಬೇಕು. ಪೊಲೀಸರಿಂದ ಅವರಿಗೆ ನ್ಯಾಯ ಕಲ್ಪಿಸ ಬೇಕು ಎಂದು ಹೇಳಿದರು. ಉಪ ತಹಶೀಲ್ದಾರ್ ಪುಟ್ಟ ಸ್ವಾಮಿಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಕಾರ್ಯದರ್ಶಿ ಚುಂನಚಯ್ಯ, ಶಿವಯ್ಯ, ರವಿಕುಮಾರ ಸೇರಿದಂತೆ ಮುಖಂಡರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.