ಜಾಗೃತಿ ಕೊರತೆಯಿಂದ ಪ್ಲಾಸ್ಮಾ ಸಂಗ್ರಹ ಕಡಿಮೆ

ಶತಕ ದಾಟಿದ ಸೋಂಕಿತರ ಸಾವಿನ ಸಂಖ್ಯೆ,ರೋಗಿಗಳ ಜೀವ ಉಳಿವಿಗಾಗಿ ಪ್ಲಾಸ್ಮಾ ನೀಡಲು ಮನವಿ

Team Udayavani, Oct 4, 2020, 1:42 PM IST

ಜಾಗೃತಿ ಕೊರತೆಯಿಂದ ಪ್ಲಾಸ್ಮಾ ಸಂಗ್ರಹ ಕಡಿಮೆ

ಸಾಂದರ್ಭಿಕ ಚಿತ್ರ

ಮಂಡ್ಯ: ಜಿಲ್ಲೆಯಲ್ಲಿ ಜಾಗೃತಿ ಕೊರತೆಯಿಂದ ಚೇತರಿಸಿಕೊಂಡ ಕೋವಿಡ್ ರೋಗಿಗಳು ಪ್ಲಾಸ್ಮಾ ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿಲ್ಲ. ಇದರಿಂದ ಮಂಡ್ಯ ಮಿಮ್ಸ್‌ನ ರಕ್ತನಿಧಿ ಕೇಂದ್ರದಲ್ಲಿ ಅಗತ್ಯದಷ್ಟು ಪ್ಲಾಸ್ಮಾ ಸಂಗ್ರಹವಾಗುತ್ತಿಲ್ಲ.

ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಚೇತರಿಸಿಕೊಂಡ ಕೋವಿಡ್ ರೋಗಿಗಳನ್ನು ಸಂಪರ್ಕಿಸಿ, ಅವರ ಮನವೊಲಿಸುವ ಮೂಲಕಪ್ಲಾಸ್ಮಾ ಪಡೆದು ರೋಗಿಗಳಿಗೆ ನೀಡಲಾಗುತ್ತಿದೆ. ಪ್ರತಿದಿನ ಕೋವಿಡ್ ಸೋಂಕಿಗೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಶತಕ ದಾಟಿ ಮುಂದುವರಿಯುತ್ತಿದೆ. ಈಗಾಗಲೇ 111 ಮಂದಿ ಸೋಂಕಿತರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ.

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೂ ಪರೀಕ್ಷೆ ಮಾಡಿಸಿಕೊಳ್ಳದೆ ಕೊನೇ ಘಳಿಗೆಯಲ್ಲಿ ಬಂದು ಆಸ್ಪತ್ರೆಗೆ ದಾಖಲಾಗುತ್ತಿರುವುದು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ವಯೋ ವೃದ್ಧರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು, ತುರ್ತು ಪರಿಸ್ಥಿತಿಯಲ್ಲಿ ರುವ ರೋಗಿಗಳು ಹೆಚ್ಚು ಸೋಂಕಿಗೆ ಮೃತ ಪಟ್ಟಿದ್ದಾರೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿಕಡಿಮೆಯಾಗುತ್ತಿದ್ದಂತೆ ದೇಹದ ರಕ್ತ ದಲ್ಲಿನ ಬಿಳಿ ರಕ್ತ ಕಣಗಳ ಪ್ರಮಾಣವೂ ಕುಸಿತ ಗೊಳ್ಳಲಿದೆ. ಇದರಿಂದ ಸಾವುಗಳು ಹೆಚ್ಚು ಸಂಭ ವಿಸುತ್ತವೆ. ಆ ಸಂದರ್ಭದಲ್ಲಿ ಬಿಳಿ ರಕ್ತ ಕಣಗಳ ಪ್ಲಾಸ್ಮಾ ನೀಡಿದರೆ ಜೀವ ಉಳಿಸಬಹುದಾಗಿದೆ.

ರೋಗಿಗಳಲ್ಲಿ ಪ್ಲಾಸ್ಮಾ ಉತ್ಪತ್ತಿ: ಕೋವಿಡ್ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿ ನಂತರ ಚೇತರಿಸಿಕೊಂಡು ಬಿಡುಗಡೆಯಾದ ಬಳಿಕ 15ದಿನಗಳ ನಂತರ ಸೋಂಕಿತರ ದೇಹದಲ್ಲಿ ಆಂಟಿಬಾಟಿಕ್‌ ಹೆಚ್ಚು ಉತ್ಪತ್ತಿಯಾಗುತ್ತದೆ. ಆಗ ಆಂಟಿಬಾಟಿಕ್‌ ಪ್ರಮಾಣ ಹೆಚ್ಚಿದ್ದರೆ ಅದರಆಧಾರದ ಮೇಲೆ ಅಗತ್ಯದಷ್ಟು ಪ್ಲಾಸ್ಮಾವನ್ನು ತೆಗೆದುಕೊಂಡು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ನೀಡಿ ಜೀವ ಉಳಿಸಬಹುದಾಗಿದೆ. ಕೋವಿಡ್ ಲಕ್ಷಣಗಳು ಇಲ್ಲದೆ ಇರುವ ಸೋಂಕಿತರು ಚೇತರಿಸಿಕೊಂಡ 28 ದಿನಗಳ ನಂತರ ಪ್ಲಾಸ್ಮಾ ನೀಡಬಹುದಾಗಿದೆ.

ಭಯ, ಕೀಳರಿಮೆ ಮನೋಭಾವ: ಪ್ರತಿದಿನ ಜಿಲ್ಲೆಯಲ್ಲಿರುವ ಕೋವಿಡ್‌ ಆಸ್ಪತ್ರೆಗಳಿಂದ ಸುಮಾರು 100ಕ್ಕೂ ಹೆಚ್ಚು ಮಂದಿ ಗುಣ ಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ. ಆದರೆ, ಮನೆಗೆ ಹೋದವರು 15 ದಿನಗಳ ನಂತರ ಬಂದು ಪ್ಲಾಸ್ಮಾ ಕೊಡಬಹುದು. ಆದರೆ, ಯಾರೂ ಬರುತ್ತಿಲ್ಲ. ಭಯ, ಆತಂಕ, ಕೀಳರಿಮೆ ಮನೋಭಾವದಿಂದ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸೋಂಕಿತ ರನ್ನು ಅಸ್ಪಶ್ಯತೆಯಿಂದ ನೋಡುವಂಥ ಕಾಲ ಬಂದಿರುವುದರಿಂದ ಜನರಲ್ಲಿ ಭಯದ ವಾತಾ ವರಣ ನಿರ್ಮಾಣವಾಗಿದೆ. ಆದ್ದರಿಂದ ಭಯ, ಆತಂಕ, ಕೀಳರಿಮೆ ಬಿಟ್ಟು ಪ್ಲಾಸ್ಮಾ ನೀಡುವ ಮೂಲಕ ಮತ್ತೂಬ್ಬರ ಜೀವ ಉಳಿಸುವ ಕಾರ್ಯಕ್ಕೆ ಸ್ವಯಂ ಪ್ರೇರಿತರಾಗಿ ರೋಗಿಗಳು ಮುಂದಾಗಬೇಕಾಗಿದೆ.

83 ಮಂದಿಯಿಂದ ಪ್ಲಾಸ್ಮಾದಾನ : ಮಿಮ್ಸ್‌ನ ರಕ್ತನಿಧಿ ಕೇಂದ್ರದಲ್ಲಿಕೋವಿಡ್‌ ಸಂದರ್ಭದಲ್ಲಿ ಇದುವರೆಗೂ ಕೇವಲ 83 ಮಂದಿ ಮಾತ್ರ ಪ್ಲಾಸ್ಮಾ ದಾನ ಮಾಡಿದ್ದಾರೆ. ಪ್ರತಿದಿನ 100ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗುತ್ತಿದ್ದಾರೆ. ಅದರಲ್ಲಿ ಪ್ರತಿದಿನ 5 ಮಂದಿ ಪ್ಲಾಸ್ಮಾ ನೀಡಿದರೆ, ಎಷ್ಟೋ ರೋಗಿಗಳ ಪ್ರಾಣ ಉಳಿಸಬಹುದಾಗಿದೆ. ಈಗಾಗಲೇ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳಿಗೂ ಮಿಮ್ಸ್‌ ರಕ್ತನಿಧಿ ಕೇಂದ್ರದಿಂದ ಪ್ಲಾಸ್ಮಾ ನೀಡಲಾಗಿದೆ.

ಆರೋಗ್ಯಕ್ಕೆ ಯಾವುದೇ ತೊಂದರೆಯಾಗಲ್ಲ : ಪ್ಲಾಸ್ಮಾ ನೀಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗಲಿದೆ ಎಂಬ ತಪ್ಪುಕಲ್ಪನೆ ಬಿಡಬೇಕು. ಪ್ಲಾಸ್ಮಾ ನೀಡಿದ24 ಗಂಟೆಗಳಲ್ಲಿ ದೇಹದಲ್ಲಿ ಮತ್ತೆ ಬಿಳಿ ರಕ್ತಕಣಗಳ  ಉತ್ಪತ್ತಿಯಾಗಲಿದ್ದು, ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆರೋಗ್ಯ ಉತ್ತಮವಾಗಲಿದೆ. ಮತ್ತೆ15 ದಿನಗಳ ನಂತರ ನೀಡಬಹುದಾಗಿದೆ. ವರ್ಷಕ್ಕೆ 24 ಬಾರಿ ನೀಡಬಹುದಾಗಿದೆ. ಇದರ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಚೇತರಿಸಿಕೊಂಡ ಸೋಂಕಿತರಿಗೆ ತಿಳುವಳಿಕೆ ಹಾಗೂ ಅರಿವು ಮೂಡಿಸಬೇಕಾಗಿದೆ. ಎಲ್ಲ ರೋಗಿಗಳಿಂದ ಪಡೆಯಲು ಸಾಧ್ಯವಿಲ್ಲ. ಆಂಟಿಬಾಟಿಕ್‌ ಹೆಚ್ಚು ಉತ್ಪತ್ತಿಯಾದವರಲ್ಲಿ ಮಾತ್ರ ಅಗತ್ಯದಷ್ಟು ಮಾತ್ರ ಪ್ಲಾಸ್ಮಾ ಪಡೆಯಲಾಗುತ್ತದೆ.

5 ಸಾವಿರ ರೂ.ಆರೈಕೆಭತ್ಯೆ :  ಪ್ಲಾಸ್ಮಾ ನೀಡಿದವರಿಗೆ ಸರ್ಕಾರದಿಂದ ಆರೈಕೆ ಭತ್ಯೆಯಾಗಿ 5 ಸಾವಿರ ರೂ. ನೀಡಲಾಗುತ್ತದೆ. ಯಾವುದೇ ತೊಂದರೆ ಇಲ್ಲದೆ ಚೇತರಿಸಿಕೊಂಡ ಕೋವಿಡ್ ರೋಗಿಗಳು ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ನೀಡಲು ಮುಂದೆ ಬರಬೇಕು. ಐಸಿಎಂಆರ್‌ ಸೂಚನೆಯಂತೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ಪ್ಲಾಸ್ಮಾ ಪಡೆಯಲಾಗುತ್ತದೆ.

ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆಮಾಡಲು ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬಗ್ಗೆ ಜಾಗೃತಿ, ಕೌನ್ಸೆಲಿಂಗ್‌ ಮಾಡಲಾಗುತ್ತಿದೆ. ಸೋಂಕನ್ನು ಜಿಲ್ಲೆಯಲ್ಲಿ ನಿಯಂತ್ರಿಸಲಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಹಾಗೂ ಸೋಂಕಿನ ಸಂಖ್ಯೆಕಡಿಮೆ. ಸೋಂಕಿತರಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತಿದಿನ ಹೆಚ್ಚಿನ ರೋಗಿಗಳು ಚೇತರಿಸಿಕೊಂಡು ಬಿಡುಗಡೆಯಾಗುತ್ತಿದ್ದಾರೆ. ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ, ಮಂಡ್ಯ

ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ ವಿವಿಧ ರೋಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೋಂಕಿನ ಲಕ್ಷಣಗಳುಕಂಡು ಬಂದರೂ ನಿರ್ಲಕ್ಷ್ಯ ಮುಂದುವರೆದಿದೆ. ಅದು ಮೀರಿದಾಗ ಕೊನೆ ಕ್ಷಣದಲ್ಲಿ ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರುಯಾವುದೇ ಲಕ್ಷಣಗಳು ಕಂಡು ಬಂದರೂ ತಕ್ಷಣ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯಬೇಕು. ಪ್ಲಾಸ್ಮಾ ಥೆರಪಿ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ. ರೋಗಿಯ ಗುಣಲಕ್ಷಣಗಳ ಮೇಲೆ ವೈದ್ಯರ ಸಲಹೆ ಮೇರೆಗೆ ಪ್ಲಾಸ್ಮಾ ಪಡೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಟಿ.ಎನ್‌.ಧನಂಜಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಡ್ಯ

ಪ್ಲಾಸ್ಮಾ ನೀಡುವುದರಿಂದ ಆರೋಗ್ಯ ಉತ್ತಮವಾಗಲಿದೆ. ಪ್ಲಾಸ್ಮಾ ನೀಡಿದ 24 ಗಂಟೆಗಳಲ್ಲಿ ಮತ್ತೆ ದೇಹದಲ್ಲಿ ಉತ್ಪತ್ತಿಯಾಗಲಿದೆ. ಒಬ್ಬ ಚೇತರಿಸಿಕೊಂಡ ಸೋಂಕಿತ ವರ್ಷಕ್ಕೆ 24 ಬಾರಿ ನೀಡಬಹುದಾಗಿದೆ. ಆದ್ದರಿಂದಯಾವುದೇ ಭಯ, ಆತಂಕಪಡದೆ ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ನೀಡಲು ಮುಂದಾಗಬೇಕು. ಮೊಹಮ್ಮದ್‌ ರಫಿ, ಶುಶ್ರೂಷಕ ಅಧಿಕಾರಿ, ಮಿಮ್ಸ್‌ ರಕ್ತನಿಧಿ ಕೇಂದ್ರ, ಮಂಡ್ಯ

 

 

ಎಚ್‌.ಶಿವರಾಜು

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.