ಪರಿಸರ ಸಂರಕ್ಷಣೆಗೆ ಸಂಕಲ್ಪ
Team Udayavani, Oct 4, 2020, 2:38 PM IST
ಚಿಂತಾಮಣಿ: ಗಾಂಧಿ ಜಯಂತಿ ಪ್ರಯುಕ್ತ ತಾಲೂಕಿನ ಹಿರೇಕಟ್ಟಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ರಾಚಾಪುರ ಗ್ರಾಮದ ಯುವಕರು ಕೆರೆಯಂಗಳದಲ್ಲಿರುವ 20 ಎಕರೆ ಖಾಲಿ ಜಾಗದಲ್ಲಿ ಸುಮಾರು 4 ಸಾವಿರ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಪಣ ತೊಡುವ ಮೂಲಕ ಗಾಂಧಿ ಮತ್ತು ಲಾಲ್‌ಬಹದ್ದೂರು ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಸಸಿ ನೆಟ್ಟು ಮಾತನಾಡಿದ ಗ್ರಾಮದ ಯುವ ಮುಖಂಡ ಮನೋಜ್ ಕುಮಾರ್, ಇಂದಿನ ಆಧುನಿಕತೆಯಧಾವಂತದಲ್ಲಿ ಜನರು ಜೀವ ಸಂಕುಲಕ್ಕೆ ಮುಖ್ಯವಾದ ಪರಿಸವನ್ನು ನಾಶ ಮಾಡುತ್ತಿದ್ದಾರೆ. ಆಧುನಿಕತೆ ಎಂದರೆ ಪರಿಸರ ನಾಶ ಎಂಬ ನಂಬಿಕೆ ನಮ್ಮಲ್ಲಿ ಮೂಡುತ್ತಿದೆ. ಈ ಆಲೋಚನೆಯನ್ನು ಹೋಗಲಾಡಿಸಬೇಕಿದೆ.ಆನಿಟ್ಟಿನಲ್ಲಿ ಪರಿಸರ ಮಹತ್ವವನ್ನು ಪರಿಸರ ಬೆಳೆಸುವುದರೊಂದಗೆ ಉಂಟು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಗ್ರಾಮೀಣ ಭಾದಲ್ಲಿ ಅರಣ್ಯದ ಪ್ರಮಾಣದಿನೇದಿನೆಕಡಿಮೆಯಾಗುತ್ತಿದೆ. ಪರಿಸರವು ಸಹ ಸಮತೋಲನ ಕಳೆದುಕೊಳ್ಳುತ್ತಿದೆ. ಇದರಿಂದ ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಆ ನಿಟ್ಟಿಲ್ಲಿ ಪರಿಸರ ರಕ್ಷಿಸಬೇಕಾದ ತುರ್ತು ಇದೆ. ಗ್ರಾಮದ ಯುವಕರು ಮತ್ತು ಹಿರಿಯರ ಸಹಕಾರದಿಂದ ಎರಡು ಕೆರೆಯಂಗಳದ 20 ಎಕರೆಯಲ್ಲಿ ನೇರಳೆ, ಹಲಸು, ಮಾವು, ಹೊಂಗೆ ಸೇರಿದಂತೆ ವಿವಿಧ ಜಾತಿಯ ಸುಮಾರು 4 ಸಾವಿರ ಸಸಿಗಳನ್ನು ನೆಡುವ ಸಂಕಲ್ಪಕ್ಕೆ ನಾಂದಿ ಹಾಡಿದ್ದೇವೆ ಎಂದರು.
ಗ್ರಾಮದ ಮುಖಂಡರಾದ ಆರ್ .ಬಿ.ಅಶ್ವತ್ಥಗೌಡ, ವಿಜಯ್‌ಕುಮಾರ್, ಮುನಿರಾಜು, ಆನೇಗೌಡ, ಎಂ.ಶ್ರೀಧರ್ ಮೂರ್ತಿ, ಎನ್.ಶ್ರೀಕಂಠ, ಗ್ರಾಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ಪದ್ಮಮ್ಮ ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.
ಸ್ವಚ್ಛತೆಗೆ ಸಹಕಾರ ಮುಖ್ಯ :
ಚಿಂತಾಮಣಿ: ನಾವು ವಾಸವಿರುವ ಮನೆಯ ಜೊತೆಗೆ ನಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಕೊಳ್ಳುವುದು ಅಗತ್ಯವಾಗಿದ್ದು, ಗ್ರಾಮಗಳ ಸ್ವಚ್ಛತೆಗೆ ನಿವಾಸಿಗಳ ಸಹಕಾರ ಅಗತ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ನುಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ತಾಲೂಕಿನ ಮುನಗನಹಳ್ಳಿ ಗ್ರಾಪಂ ವ್ಯಾಪ್ತಿಯ ಐತಿಹಾಸಿಕ ಕ್ಷೇತ್ರ ಆಲಂಬಗಿರಿ ಗ್ರಾಮದಲ್ಲಿನ ಕಲ್ಯಾಣಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮಕ್ಕೆ ಕಲ್ಪವೃಕ್ಷವಿಟ್ಟು ಗಿಡಕ್ಕೆ ನೀರುಹರಿಸುವ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತೆ ನಿರ್ವಹಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರು ಕೈಜೋಡಿಸುವ ಮೂಲಕ ಅನುಕೂಲವನ್ನು ಪಡೆಯಬೇಕೆಂದರು. ತಾಪಂ ಇಒ ಮಂಜುನಾಥ್ ಮಾತನಾಡಿ, ಸ್ವಚ್ಛತೆ ನಿತ್ಯೋತ್ಸವದಿಂದ ಪ್ರತಿಯೊಬ್ಬರು ಆರೋಗ್ಯವಂತರಾಗಿರುತ್ತಾರೆ. ಸ್ವಚ್ಛತೆ ಇದ್ದಲ್ಲಿ ಆರೋಗ್ಯವಿರುತ್ತದೆ. ನಿತ್ಯೋತ್ಸವವಿದ್ದಲ್ಲಿ ಆಯುಷ್‌ಇರುತ್ತದೆ.ಮಕ್ಕಳುಬಾಲ್ಯದಿಂದಲೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪೋಷಕರು ಶ್ರಮಿಸಬೇಕೆಂದರು.
ಆರ್‌ಡಿಪಿಆರ್ ಇಲಾಖೆಯ ಎಲ್ಲಾ ಸಿಬ್ಬಂದಿ ಶ್ರಮ ವಹಿಸಿದರು. ತಾಪಂ ಎಡಿಎ ಕವಿತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್, ಕೃಷಿ ಇಲಾಖೆಯ ಪುಷ್ಪಾ, ನರೇಗಾ ಇಲಾಖೆಯ ಅರುಣ್ ಹಾಗೂ ಅವರ ಸಹಪಾಠಿಗಳು, ಪಿಡಿಒಗಳಾದ ನಾಗೇಶ್, ಶಿವಣ್ಣ, ಸುರೇಶ್, ದೇವರಾಜ್, ಯಾದವ್ ಸೇರಿದಂತೆ ಹಲವು ಪಿಡಿಒಗಳು, ತಾಲೂಕಿನ ಗ್ರಾಪಂಕಾರ್ಯದರ್ಶಿಗಳು,ನೀರುಗಂಟಿಗಳು, ಬಿಲ್‌ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಅಂಗನವಾಡಿ ಕಾರ್ಯಕರ್ತರು, ನರೇಗಾ ಇಲಾಖೆಯ ಎಲ್ಲಾ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.