9 ವರ್ಷದ ಬಾಲಕ ಅಥರ್ವಗೆ ಕರ್ನಾಟಕ ಅಚೀವರ್ಸ್ ಬುಕ್ ರೆಕಾರ್ಡ್ ಪದಕ
Team Udayavani, Oct 4, 2020, 2:25 PM IST
ಗದಗ: ದೇಶದ ಸುಮಾರು 1,500 ಖ್ಯಾತನಾಮರ ಜೀವನದ ಪ್ರಮುಖ ಘಟನಾವಳಿಗಳ ದಿನಾಂಕವನ್ನು ಹೇಳುವ ನಗರದ 9 ವರ್ಷದ ಬಾಲಕ ಅಥರ್ವ ಕಟವಟೆಗೆ ಹಾವೇರಿ ಮೂಲದ ಕರ್ನಾಟಕ ಅಚೀವರ್ಸ್ ಬುಕ್ ರೆಕಾರ್ಡ್ ಸಂಸ್ಥೆಯಿಂದ ಪದಕ ಮತ್ತು ಪ್ರಮಾಣ ಪತ್ರ ಲಭಿಸಿದೆ ಎಂದು ಬಾಲಕನ ತಂದೆ ವಿಕಾಸ ಲಕ್ಷ್ಮೀಕಾಂತ ಕಟವಟೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥರ್ವ ತನ್ನ 7ನೇ ವರ್ಷದಲ್ಲೇ ಈ ಹವ್ಯಾಸ ರೂಢಿಸಿಕೊಂಡಿದ್ದಾನೆ. ಆರಂಭದಲ್ಲಿ ಕುಟುಂಬ ಸದಸ್ಯರು, ನೆರೆಹೊರೆಯ ಮಕ್ಕಳು, ವೃದ್ಧರ ಜನ್ಮದಿನಾಂಕವನ್ನು ತಿಳಿದುಕೊಂಡು ನೆನಪಿಟ್ಟುಕೊಳ್ಳುತ್ತಿದ್ದ. ಆಯಾ ದಿನಾಂಕದಂದು ಅವರಿಗೆ ಜನ್ಮದಿನದ ಶುಭ ಕೋರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಆನಂತರ ದಿನಕಳೆದಂತೆ ಅಂರ್ಜಾಲದಲ್ಲಿ ಮಾಹಿತಿ ಕಲೆಹಾಕಿ, ಸಿನಿಮಾ ಮತ್ತು ಕ್ರಿಕೆಟ್ ತಾರೆಯರು, ಸ್ವಾತಂತ್ರ್ಯ ಯೋಧರು, ರಾಷ್ಟ್ರಪತಿಗಳು, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಪ್ರಖ್ಯಾತರ ಜನ್ಮದಿನ, ವಿವಾಹ, ಮರಣ ದಿನಾಂಕ, ಅವರ ವಂಶವೃಕ್ಷವನ್ನು ಹೇಳಬಲ್ಲ. ಅರ್ಥವ ಅವರ ಈ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಿಂದ ಮೆಡಲ್ ಹಾಗೂ ಪ್ರಮಾಣ ನೀಡಿ ಗೌರವಿಸಿದೆ. ಸದ್ಯ ಈತ ನಗರದ ಕೆಎಲ್‌ಇ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮುಂದೆ ಇಂಡಿಯಾ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಬಾಲಚಂದ್ರ ಕಟವಟೆ, ಮಿನಿತಾ ಲಕ್ಷ್ಮೀಕಾಂತ ಕಟವಟೆ ಇದ್ದರು.
ಇದನ್ನೂ ಓದಿ:CBI ತನಿಖೆಗೆ ವಿರೋಧ ವ್ಯಕ್ತಪಡಿಸಿದ ಹತ್ರಾಸ್ ಸಂತ್ರಸ್ತೆಯ ಕುಟುಂಬ: ಸ್ಥಳಕ್ಕೆ SIT ಭೇಟಿ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.