ಕೆಜಿಎಫ್ ತಾಲೂಕಿಗೆ ಆಡಳಿತಾತ್ಮ ಅನುಮೋದನೆ
Team Udayavani, Oct 4, 2020, 2:57 PM IST
ಬೇತಮಂಗಲ: ಕೆಜಿಎಫ್ ತಾಲೂಕು ಘೋಷಣೆಯಾದ2 ವರ್ಷಗಳ ನಂತರ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಸರ್ಕಾರದಿಂದ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕಿ ಎಂ.ರೂಪ ಕಲಾ ಹೇಳಿದರು.
ಪಟ್ಟಣದ ಬಳಿಯ ಬಡಮಾಕನಹಳ್ಳಿ, ಕಳ್ಳಿಕುಪ್ಪ, ನಲ್ಲೂರು, ಜಯಮಂಗಲ, ಪೋತರಾಜನಹಳ್ಳಿ, ಭಟ್ರ ಕುಪ್ಪ, ವೆಂಕಟಾಪುರ, ಕೋಡಿಹಳ್ಳಿ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕೊಂದುಕೊರತೆಗಳನ್ನು ಆಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಜಿ ಎಫ್ ತಾಲೂಕು ಘೋಷಣೆಯಾದ ನಂತರ 10 ಕೋಟಿರೂ.ಬಿಡುಗಡೆಯಾಗಿದ್ದುಖುಷಿ ತಂದಿದೆಯಾದರೂ, ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಚಾಲನೆ ಸಿಗದಿರುವುದು ಬೇಸರ ತಂದಿದೆ ಎಂದರು.
ಕಾರ್ಯಪ್ರವೃತ್ತರಾಗಿ: 10ಕೋಟಿ ರೂ.ಅನುದಾನವನ್ನು ಅಧಿಕಾರಿಗಳು ಬಳಸಿಕೊಂಡು ಕಾಮಗಾರಿ ಕೈಗೊಳ್ಳ ಬೇಕಿದೆ. ಕೆಜಿಎಫ್ ತಾಲೂಕಿನ ಜನರು ಇನ್ನೂ ಅನೇಕ ದಾಖಲೆಗಳಿಗೆ ಬಂಗಾರಪೇಟೆಗೆ ಅಲೆದಾಡುವ ಪರಿ ಸ್ಥಿತಿ ಇದ್ದು, ಅಧಿಕಾರಿಗಳುಕಾರ್ಯಪ್ರವೃತ್ತರಾಗಬೇಕೆಂದರು. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಆತಂಕಕಾರಿ. ಅಲ್ಲಿನ ಅಧಿಕಾರಿಗಳು ಏಕೆ ರಾತ್ರೋ ರಾತ್ರಿ ಮೃತದೇಹವನ್ನು ಸುಟ್ಟು ಹಾಕಿದ್ದಾರೋ ಗುತ್ತಿಲ್ಲ ಎಂದರು.
ಗ್ರಾಮ ಸಂಚಾರ ವೇಳೆ ಹುಲ್ಕೂರು ಗ್ರಾಪಂನ ಭಟ್ರಕುಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರಿದರು. ತಕ್ಷಣ ಪಿಡಿಒಗೆ ಸೂಚಿಸಿ ಸಮಸ್ಯೆ ನೀಗಿಸುವಂತೆ ಸೂಚಿಸಿದರು.
ಕೆಜಿಎಫ್ ಅಶೋಕ ನಗರ ರಸ್ತೆ ಅಭಿವೃದ್ಧಿ ಬಗ್ಗೆಯಾರೂ ರಾಜಕೀಯ ಮಾಡಕೂಡದು, ನಾನು ಜನಪ್ರತಿನಿಧಿಯಾಗಿ ಸಾರ್ವಜನಿಕರು ಪ್ರಶ್ನಿಸಿದರೆ ಉತ್ತರಿಸುತ್ತೇನೆ. –ಎಂ.ರೂಪಕಲಾ, ಶಾಸಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.