ಕೋವಿಡ್: ದಸರಾ ಸರಳ ಆಚರಣೆಗೆ ನಿರ್ಧಾರ
Team Udayavani, Oct 4, 2020, 4:49 PM IST
ದಾವಣಗೆರೆ: ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ದಸರಾ ಹಬ್ಬದ ಕಾರ್ಯಕ್ರಮ ನಡೆಸಲು ಶನಿವಾರ ದುರ್ಗಾಂಬಿಕಾ ದೇವಾಲಯದ ಪ್ರಸಾದ ನಿಲಯದಲ್ಲಿ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಚರ್ಚೆ, ಪರಾಮರ್ಶೆಯ ನಂತರಸರಳವಾಗಿ ದಸರಾ ಮಹೋತ್ಸವ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಮಹಾಮಾರಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ಬಾರಿ ದಸರಾ ದಲ್ಲಿ ನೆರವೇರಿಸಲಾಗುತ್ತಿದ್ದ ಕುಂಭಾಭಿಷೇಕ ಮೆರವಣಿಗೆ, ಅಭಿಷೇಕ, ಸಾಮೂಹಿಕ ವಿವಾಹಗಳನ್ನು ನಡೆಸದಂತೆ ತೀರ್ಮಾನ ಕೈಗೊಳ್ಳಲಾಯಿತು. 1001 ಕುಂಭಗಳ ಬದಲಿಗೆ ಸರಳವಾಗಿ 9 ಕಳಶಗಳನ್ನು ಇಟ್ಟು ಪೂಜಿಸಲು ಹಾಗೂ ನವದುರ್ಗೆಯರನ್ನು ಪೂಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೋವಿಡ್ ಕಾರಣದಿಂದ ಸರ್ಕಾರದ ನಿಯಮಗಳನ್ನು ಪಾಲಿಸುವುದು ಮುಖ್ಯ. ಸಭೆ ಸಮಾರಂಭಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡದೇ ಇರುವುದರಿಂದ ಸರಳ ಆಚರಣೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ತಿಳಿದುಕೊಂಡು ಹಬ್ಬದ ಆಚರಣೆ ಮಾಡಬೇಕು. ಆದರೆ ಕುಂಭಗಳನ್ನು ಮಾಡುವಂತಹ ಕುಂಬಾರರಿಗೆ ಗೌರವ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ದೇವಸ್ಥಾನ ಟ್ರಸ್ಟ್ ಸಂಬಂಧಪಟ್ಟ ಲೆಕ್ಕಪತ್ರಗಳಿಗೆ ಸಂಬಂಧಪಟ್ಟಂತೆ ವಾದ-ವಿವಾದವೂ ನಡೆಯಿತು. ಟ್ರಸ್ಟ್ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಅವರನ್ನು ಮಾಜಿ ಶಾಸಕ ಅಧ್ಯಕ್ಷ ಯಜಮಾನ್ ಮೋತಿ ವೀರಣ್ಣ ತರಾಟೆಗೆ ತೆಗೆದುಕೊಂಡರು. ಲೆಕ್ಕಪತ್ರ ಸರಿಯಾಗಿ ಇಟ್ಟುಕೊಳ್ಳಬೇಕು. ಗೌಡಿಕೆ ಮಾಡುವುದು ಸರಿಯಲ್ಲ. ದೇವಾಲಯ ಯಾರ ಮಾಲಿಕತ್ವದಲ್ಲೂ ಇಲ್ಲ. ಎಲ್ಲಾ ಜನಾಂಗದವರಿಗೂ ಸೇರಿದ್ದು, ಇನ್ನು ಮುಂದೆ ತಪಉ ³ ಮಾಡಿದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ ಪ್ರಸಂಗವೂ ಜರುಗಿತು. ತಪ್ಪು ಮಾಡಿದ್ದರೆ ತಿದ್ದಿಕೊಳ್ಳುತ್ತೇನೆ ಎಂದು ಗೌಡ್ರ ಚನ್ನಬಸಪ್ಪ ಸಮಜಾಯಿಷಿ ನೀಡಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಲೆಕ್ಕಪತ್ರದ ಪೂರ್ಣ ವಿವರಕ್ಕೆ ಒತ್ತಾಯಿಸಿದರು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ತಪ್ಪಿದ್ದರೆ ಇದ್ದರೆ ಇಡಿ ಸಮಿತಿಯೇ ಹೊಣೆ ಹೊರಬೇಕು. ಒಬ್ಬರ ಮೇಲೆ ದೂಷಣೆ ಮಾಡುವುದು ಸರಿಯಲ್ಲ ಎಂದರು. ಧರ್ಮದರ್ಶಿಗಳಾದ ಅಥಣಿ ಎಸ್. ವೀರಣ್ಣ, ಎಚ್.ಡಿ. ಗೋಣೆಪ್ಪ, ಉಮೇಶ್ ಜಾಧವ್, ಹನುಮಂತರಾವ್ ಜಾಧವ್, ಜೆ.ಕೆ. ಕೊಟ್ರಬಸಪ್ಪ, ರಾಮಕೃಷ್ಣ, ಬಳ್ಳಾರಿ ಷಣ್ಮುಖಪ್ಪ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.