ಲ್ಯಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯ ಬಳಿಕ ಆಹಾರ ನುಂಗುವಿಕೆ
Team Udayavani, Oct 4, 2020, 7:29 PM IST
ಸಾಂದರ್ಭಿಕ ಚಿತ್ರ
ಧ್ವನಿ ಪೆಟ್ಟಿಗೆ, ಓರೊಫಾರಿಂಕ್ಸ್, ಟಾನ್ಸಿಲ್‌ಗಳು ಮತ್ತು ಗಂಟಲು ಪ್ರದೇಶದ ಇತರ ಅಂಗಾಂಗಳಲ್ಲಿ ಉಂಟಾಗುವ ಕ್ಯಾನ್ಸರ್‌ಗಳನ್ನು ಗಂಟಲಿನ ಕ್ಯಾನ್ಸರ್ ಎಂದು ವರ್ಗೀಕರಿಸಲಾಗುತ್ತದೆ. ಕ್ಯಾನ್ಸರ್ ಗಡ್ಡೆಯ ಗಾತ್ರ, ಸ್ಥಾನ ಮತ್ತು ಪ್ರಸರಣವನ್ನು ಆಧರಿಸಿ ಅದಕ್ಕೆ ಶಸ್ತ್ರಕ್ರಿಯೆಯ ಮೂಲಕ ಹಾಗೂ ಕೀಮೋಥೆರಪಿ ಸಹಿತ ರೇಡಿಯೋಥೆರಪಿಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ. ಲ್ಯಾರಿಂಜೆಕ್ಟಮಿ ಅಂದರೆ ಗಂಟಲುಕುಹರವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು.
ಲ್ಯಾರಿಂಜೆಕ್ಟಮಿ ನಡೆಸಿದ ಬಳಿಕ ರೋಗಿಗೆ ಧ್ವನಿಪೆಟ್ಟಿಗೆಯು ಇರುವುದಿಲ್ಲ ಮತ್ತು ಮಾತನಾಡಲು ಸಾಧ್ಯವಾಗುವುದಿಲ್ಲ. ಅಂಥವರು ಟ್ರೇಕಿಯೋಸೊಯಲ್ ಮಾತು, ಈಸೊಫೇಜಿಯಲ್ ಮಾತು ಅಥವಾ ಕೃತಕ ಲ್ಯಾರಿಂಕ್ಸ್‌ನಂತಹ ಮಾತನಾಡುವ ಪರ್ಯಾಯ ವಿಧಾನಗಳನ್ನು ಅವಲಂಬಿಸಬೇಕಾಗುತ್ತದೆ. ಈ ಮೂರು ವಿಧಾನಗಳಲ್ಲಿ ಈಸೊಫೇಜಿಯಲ್ ಸ್ಪೀಕರ್‌ಗಳು ಮಾತು ಉತ್ಪತ್ತಿ ಮಾಡಲು ಸಿಲಿಕಾನ್‌ನಿಂದ ನಿರ್ಮಿಸಲಾದ ಧ್ವನಿ ಪ್ರಾಸ್ಥೆಸಿಸ್ ಗಳನ್ನು ಉಪಯೋಗಿಸುತ್ತವೆ. ಇಲ್ಲಿ ಶ್ವಾಸಕೋಶದಿಂದ ಬರುವ ಗಾಳಿಯನ್ನು ಈಸೋಫೇಗಸ್ ಅಥವಾ ಅನ್ನನಾಳಕ್ಕೆ ತಿರುಗಿಸಿ ಅನ್ನನಾಳದ ಮೇಲ್ಭಾಗ (ಪಿಇ ವಿಭಾಗ) ದಿಂದ ಮಾತು ಉತ್ಪತ್ತಿಯಾಗುತ್ತದೆ. ಲ್ಯಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯು ಎಲ್ಲ ಪ್ರಕರಣಗಳಲ್ಲಿ ಅನ್ನನಾಳಕ್ಕೆ ವ್ಯತ್ಯಯ ಉಂಟುಮಾಡದಿದ್ದರೂ ಈ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ನುಂಗುವುದಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ. ಬಾಯಿಯ ಮೂಲಕ ಆಹಾರ ಸೇವಿಸುವ ಕ್ರಿಯೆಯು ಕ್ಯಾನ್ಸರ್ ಚಿಕಿತ್ಸೆಯ ಪ್ರಕ್ರಿಯೆ ಮತ್ತು ಗುಣ ಹೊಂದುವ ಸಮಯದಲ್ಲಿ ಅನನುಕೂಲ, ವ್ಯತ್ಯಯ ಎದುರಿಸಬಹುದಾಗಿದೆ.
ನುಂಗುವಿಕೆಯಲ್ಲಿ ವ್ಯತ್ಯಯವು ಕ್ಯಾನ್ಸರ್‌ನ ಪರಿಣಾಮವಾಗಿಯೇ ಆಗಿರಬಹುದು, ಶಸ್ತ್ರಚಿಕಿತ್ಸೆಯ ಪರಿಣಾಮದಿಂದ ಆಗಿರಬಹುದು ಮತ್ತು/ ಅಥವಾ ರೇಡಿಯೇಶನ್ ಮತ್ತು ಕಿಮೋಥೆರಪಿ ಚಿಕಿತ್ಸೆಗಳ ಪರಿಣಾಮವಾಗಿಯೂ ಉಂಟಾಗಬಹುದು. ಸಂಪೂರ್ಣ ಲ್ಯಾರಿಂಜೆಕ್ಟಮಿಗೆ ಒಳಗಾಗಿರುವ ರೋಗಿಗಳು ಮೂಗಿನ ಮೂಲಕ ಉಸಿರಾಟ ನಡೆಸುವುದಿಲ್ಲ, ಬದಲಾಗಿ ಕುತ್ತಿಗೆಯಲ್ಲಿ ಅಳವಡಿಸಲಾಗಿರುವ ಸ್ಟೋಮಾ ಎಂಬ ಕೊಳವೆಯ ಮೂಲಕ ಉಸಿರಾಡುತ್ತಾರೆ. ಶಸ್ತ್ರಚಿಕಿತ್ಸೆಯ ಬಳಿಕ ಇಂತಹ ರೋಗಿಗಳಿಗೆ ಉಸಿರಾಡಲು ಶ್ವಾಸನಾಳ ಮತ್ತು ಆಹಾರ ಸೇವಿಸಲು ಅನ್ನನಾಳಗಳ ಎರಡು ಪ್ರತ್ಯೇಕ ವ್ಯವಸ್ಥೆಗಳಿರುತ್ತವೆ. ಶಸ್ತ್ರಚಿಕಿತ್ಸೆಯ ಬಳಿಕ ಬಾಯಿಯ ಮೂಲಕ ಆಹಾರ ಸೇವಿಸುವುದಕ್ಕೆ ಸಾಧ್ಯವಾಗುವಷ್ಟು ಗಾಯ ಗುಣವಾಗುವವರೆಗೆ ಫೀಡಿಂಗ್ ಟ್ಯೂಬ್ (ಆರ್‌ಟಿ) ಆಹಾರ ಸೇವಿಸುವುದಕ್ಕೆ ದಾರಿಯಾಗಿರುತ್ತದೆ.
ರೇಡಿಯೋಥೆರಪಿಯಿಂದಾಗಿ ಬಾಯಿ ಮತ್ತು ಗಂಟಲುಗಳಲ್ಲಿ ಹುಣ್ಣುಗಳಾಗಬಹುದು, ಇದರಿಂದಾಗಿ ಆಹಾರ ಸೇವಿಸುವುದು ತುಂಬಾ ಯಾತನಾಮಯವಾಗಬಹುದು ಮಾತ್ರವಲ್ಲದೆ, ಕೆಲವು ಪ್ರಕರಣಗಳಲ್ಲಿ ಅಸಾಧ್ಯವೂ ಆಗಬಹುದು. ಇಂತಹ ಸಂದರ್ಭಗಳಲ್ಲಿ ಫೀಡಿಂಗ್ ಟ್ಯೂಬ್ ನ ಅಗತ್ಯ ಬೀಳಬಹುದು, ಅಲ್ಲದೆ ನೋವನ್ನು ಕಡಿಮೆ ಮಾಡುವುದಕ್ಕಾಗಿ ನೋವು ನಿವಾರಕಗಳು ಮತ್ತು ಬಾಯಿಯನ್ನು ಸ್ಥಳೀಯವಾಗಿ ಜೋಮುಗಟ್ಟಿಸುವ ಜೆಲ್ ಗಳನ್ನು ವೈದ್ಯರು ಶಿಫಾರಸು ಮಾಡಬಹುದು.
ರೋಗಿಯು ಬಾಯಿಯ ಮೂಲಕ ಆಹಾರ ಸೇವಿಸಲು ಆರಂಭಿಸಿದಾಗ ಆರಂಭದಲ್ಲಿ ಕೆಲವು ನಿರ್ಬಂಧಗಳನ್ನು ಅನುಸರಿಸಬೇಕಾಗುತ್ತದೆ. ಹಾನಿಗೊಂಡ ಧ್ವನಿ ಪ್ರಾಸ್ಥೆಸಿಸ್ ಬಳಸುವುದರಿಂದ ಅಥವಾ ಶಸ್ತ್ರಚಿಕಿತ್ಸೆಯ ಬಳಿಕದ ಕೆಲವು
ಸಂರಚನಾತ್ಮಕ ಸಮಸ್ಯೆಗಳಿಂದಾಗಿ ಟ್ರೇಕಿಯೊ-ಈಸೊಫೇಜಿಯಲ್ ಪ್ರಾಸ್ಥೆಟಿಕ್ ಬಳಕೆದಾರರಲ್ಲಿ ತಿನ್ನುವಾಗ ಅಥವಾ ಕುಡಿಯುವಾಗ ಆಹಾರವು ಶ್ವಾಸಮಾರ್ಗಕ್ಕೆ ನುಗ್ಗುವ ಅಪಾಯ ಇರುತ್ತದೆ.
ಲ್ಯಾರಿಂಜೆಕ್ಟಮಿ ರೋಗಿಗಳು ಆಹಾರಾಭ್ಯಾಸದಲ್ಲಿ ಅನುಸರಿಸಬೇಕಾದ ಬದಲಾವಣೆಗಳೇನು? : ಆಹಾರ ಸೇವಿಸುವಾಗ ಸದಾ ನೇರವಾಗಿ ಕುಳಿತಿರುವ ಭಂಗಿಯಲ್ಲಿರಬೇಕು. ಮಲಗಿಕೊಂಡು ಅಥವಾ ಬಿದ್ದುಕೊಂಡ ಸ್ಥಿತಿಯಲ್ಲಿ ಆಹಾರ ಸೇವಿಸಲೇಬಾರದು. ಹಾಗೆ ಮಾಡಿದರೆ ಶ್ವಾಸಮಾರ್ಗಕ್ಕೆ ಆಹಾರವು ನುಗ್ಗುವ ಅಪಾಯ ಇರುತ್ತದೆ, ಅದರಲ್ಲೂ ವಿಶೇಷವಾಗಿ ಟ್ರೆಕಿಯಾ ಈಸೊಫೇಜಿಯಲ್ ಪ್ರಾಸ್ಥೆಸಿಸ್ ಬಳಕೆದಾರರಲ್ಲಿ ಈ ಅಪಾಯ ಇನ್ನೂ ಹೆಚ್ಚು. ಆರಂಭದಲ್ಲಿ ಅರೆ ಘನ ಅಥವಾ ದ್ರವರೂಪದ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಅನ್ನನಾಳದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಬದಲಾವಣೆ ಮಾಡಿದ್ದಾಗ ಅಥವಾ ಧ್ವನಿ ಪ್ರಾಸ್ಥೆಸಿಸ್ ಬಳಕೆದಾರರಲ್ಲಿ ಅದು ಸರಿಯಾಗಿ ಕೆಲಸ ಮಾಡದೆ ಇರುವಾಗ ಘನ ಆಹಾರವನ್ನು ಸೇವಿಸುವುದು ಕಷ್ಟವಾಗುತ್ತದೆ ಅಥವಾ ಅಸುರಕ್ಷಿತವಾಗಿರುತ್ತದೆ. ಆಮ್ಲಿಯ ಮತ್ತು ಮಸಾಲೆಯುಕ್ತ, ಖಾರವಾದ ಆಹಾರವು ಉರಿ ಮತ್ತು ತೊಂದರೆಯನ್ನು ಉಂಟು ಮಾಡುವುದರಿಂದ ದೂರವಿಡುವುದು ಸೂಕ್ತ. ಘನ-ದ್ರವ ಮಿಶ್ರ ಆಹಾರವನ್ನು ವರ್ಜಿಸಿ, ಒಂದೇ ರೀತಿಯ ಆಹಾರವು ನುಂಗಲು ಸುಲಭ. ಬಾಯಿಯನ್ನು ಆರ್ದ್ರ ಮತ್ತು ಶುಚಿಯಾಗಿ ಇರಿಸಿಕೊಳ್ಳಲು ಆಗಾಗ ನೀರು ಗುಟುಕರಿಸುತ್ತಿರುವುದು ಸೂಕ್ತ.
ದಿನಕ್ಕೆ ಮೂರು ಬಾರಿ ಸೇವಿಸುವ ಆಹಾರವನ್ನು ರೋಗಿಯು ನಾಲ್ಕೈದು ಬಾರಿ ಸಣ್ಣ ಸಣ್ಣ ಪ್ರಮಾಣಗಳಲ್ಲಿ ಸೇವಿಸುವಂತೆ ವಿಭಜಿಸಿ ಸೇವಿಸಬೇಕು. ಆಹಾರದ ಪ್ರಮಾಣವನ್ನು ಕಿರಿದುಗೊಳಿಸಿ ಸೇವಿಸುವ ಸರದಿಗಳನ್ನು ಹೆಚ್ಚಿಸುವುದರಿಂದ ದೇಹಕ್ಕೆ ಪೂರೈಕೆಯಾಗುವಪೌಷ್ಟಿಕಾಂಶ ಕಡಿಮೆಯಾಗುವುದಿಲ್ಲ. ಅಲ್ಲದೆ ಇದು ರೋಗಿಗೆ ಹೊರೆಯೂ ಆಗುವುದಿಲ್ಲ. ರೋಗಿಯು ಘನ ಆಹಾರಗಳನ್ನು ನುಂಗಲು ಶಕ್ತನಾಗಿದ್ದರೆ ನುಂಗುವುದಕ್ಕೆ ಸುಲಭವಾಗುವಂತೆ ಆಹಾರ ಸೇವನೆಯ ಜತೆಗೆ ಆಗಾಗ ನೀರು ಗುಟುಕರಿಸಬೇಕು.
ಆಹಾರಾಭ್ಯಾಸವು ಸಮತೋಲಿತವಾಗಿರಬೇಕು, ಪೌಷ್ಟಿಕಾಂಶ ಸಮೃದ್ಧವಾಗಿರಬೇಕು. ಇದರಿಂದ ಗುಣವಾಗುವ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆಯಲ್ಲದೆ ದಣಿವು ಮತ್ತು ತೂಕ ನಷ್ಟ ಆಗುವುದಿಲ್ಲ. ಅನ್ನ, ಗೋಧಿ,ರಾಗಿ, ಕಿರುಧಾನ್ಯಗಳು, ಬೇಳೆಕಾಳುಗಳು, ಧಾನ್ಯಗಳು (ಹೆಸರುಕಾಳು, ಕಡಲೆ, ಮಸೂರ್ ದಾಲ್, ತೊಗರಿಬೇಳೆ, ರಾಜ್ಮಾ, ತುಪ್ಪ, ಬಟಾಣಿ ಇತ್ಯಾದಿ) ಕಾಬೊìಹೈಡ್ರೇಟ್‌ನ ಉತ್ತಮ ಮೂಲಗಳಾಗಿವೆ. ಪ್ರೊಟೀನ್ ಅಂಶಹೆಚ್ಚಿರುವ ಆಹಾರ ಸೇವಿಸುವುದು ಸೂಕ್ತ. ಪನೀರ್, ಸೋಯಾ ಚಂಕ್‌ಗಳು, ಬೇಳೆಕಾಳು ಮತ್ತು ಬಾದಾಮಿ, ವಾಲ್ನಟ್, ನೆಲಗಡಲೆ, ಪಿಸ್ತಾ ಮುಂತಾದವುಗಳು ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ. ಮಾಂಸಾಹಾರಿಗಳಿಗೆ ಮೀನು ಮತ್ತು ಮೊಟ್ಟೆ ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ. ಪ್ರತೀದಿನ ಎರಡು ಸಲ ಮೊಸರು ಅಥವಾ ಮಜ್ಜಿಗೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತವಾಗಿದೆ. ಈ ಪ್ರೊಬಯೋಟಿಕ್‌ಗಳ ಸೇವನೆಯು ಧ್ವನಿ ಪ್ರಾಸ್ಥೆಸಿಸ್ (ಲ್ಯಾರಿಂಜೆಕ್ಟೊಮಿ ಚಿಕಿತ್ಸೆಯ ಬಳಿಕ ಟ್ರೇಕಿಯೊಫೇಜಿಯಲ್ ಮೂಲಕ ಮಾತನಾಡುವವರು ಉಪಯೋಗಿಸುವ ಸಾಧನ)ನಲ್ಲಿ ಫಂಗಸ್ ಬೆಳವಣಿಗೆಯನ್ನು ತಡೆಯುತ್ತದೆ. (ಮುಂದಿನ ವಾರಕ್ಕೆ)
ಡಾ| ವೆಂಕಟ್ರಾಜ ಐತಾಳ ಯು.
ಪ್ರೊಫೆಸರ್, ಸ್ಪೀಚ್ ಆ್ಯಂಡ್ ಹಿಯರಿಂಗ್
ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.