ಹಾಸನ-ಮಂಗಳೂರು ರೈಲು ಮಾರ್ಗ: ಅತ್ಯಾಧುನಿಕ ಸಿಗ್ನಲ್ ಕಾರ್ಯಾರಂಭ
Team Udayavani, Oct 5, 2020, 10:28 AM IST
ಮಂಗಳೂರು: ಮಂಗಳೂರು – ಹಾಸನ ರೈಲು ಮಾರ್ಗದ ಎಡಕುಮೇರಿ ಹಾಗೂ ಕಡಗರವಳ್ಳಿ ನಿಲ್ದಾಣ ಮಧ್ಯೆ ಕೈಗೊಂಡಿದ್ದ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಸಿಗ್ನಲ್ ವ್ಯವಸ್ಥೆ ಅಳವಡಿಕೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಿಸಿದೆ. ಹಾಸನ-ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮ (ಎಚ್‌ಎಂಆರ್‌ಡಿಸಿ) ಇದರ 4.4 ಕೋ.ರೂ. ವೆಚ್ಚವನ್ನು ಭರಿಸಿದೆ.
ಸಿಗ್ನಲ್ ವ್ಯವಸ್ಥೆ ಉನ್ನತೀಕರಣದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯ ಶೇ. 35ರಷ್ಟು ವೃದ್ಧಿಯಾಗಿದ್ದು, ಹೆಚ್ಚು
ಪ್ರಯಾಣಿಕರ ಹಾಗೂ ಸರಕು ಸಾಗಾಟ ರೈಲುಗಳ ಸಂಚಾರ ಸಾಧ್ಯವಾಗಲಿದೆ.
ಕಡಗರವಳ್ಳಿ ಹಾಗೂ ಎಡಕುಮೇರಿ ನಿಲ್ದಾಣಗಳಲ್ಲಿ ರೈಲುಗಳ ಕ್ರಾಸಿಂಗ್ ಸೌಲಭ್ಯಗಳು ಲಭ್ಯವಾಗಲಿದ್ದು ರೈಲುಗಳ ಸಂಚಾರ ಸಂಖ್ಯೆ ಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ 24 ತಾಸುಗಳಲ್ಲಿ ರೈಲುಗಳ ಸಂಚಾರ ಸಾಮರ್ಥ್ಯ 20ಕ್ಕೇರಲಿದೆ. ಪ್ರಸ್ತುತ 13 ರೈಲುಗಳು ಸಂಚರಿಸುತ್ತಿವೆ.
ಇದನ್ನೂ ಓದಿ :ಮುನ್ನೆಚ್ಚರಿಕೆಯೊಂದಿಗೆ ಮಂಗಳೂರು ದಸರಾ : ಈ ಬಾರಿ ದಸರಾ ಮೆರವಣಿಗೆ ಇಲ್ಲ
ಬೆಂಗಳೂರು- ಮಂಗಳೂರು ಸೆಂಟ್ರಲ್ ವಿಶೇಷ ರೈಲು ರದ್ದು
ಮಂಗಳೂರು: ವಾರದಲ್ಲಿ ನಾಲ್ಕು ದಿನ ಕುಣಿಗಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆಂಗಳೂರು- ಮಂಗಳೂರು ಸೆಂಟ್ರಲ್- ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು (06515/ 16) ತಾತ್ಕಾಲಿಕವಾಗಿ ರದ್ದು ಪಡಿಸುವುದಾಗಿ ನೈಋತ್ಯ ರೈಲ್ವೇ ಪ್ರಕಟನೆ ತಿಳಿಸಿದೆ.
ಪ್ರಯಾಣಿಕರ ತೀವ್ರ ಕೊರತೆಯಿಂದ ಈ ಕ್ರಮ ಕೈಗೊಂಡಿದ್ದು, ಹೊಸ ಅಧಿಸೂಚನೆ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಅ. 7ರಿಂದ ಮತ್ತು ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ಅ. 11ರಿಂದ ಜಾರಿಯಾಗಲಿದೆ. ವಾರದಲ್ಲಿ ಮೂರು ದಿನ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಬೆಂಗಳೂರು- ಮಂಗಳೂರು ಸೆಂಟ್ರಲ್- ಬೆಂಗಳೂರು ಸ್ಪೆಷಲ್ ಎಕ್ಸ್‌ಪ್ರೆಸ್ (06517/18) ಹಾಗೂ ಬೆಂಗಳೂರು-ಮಂಗಳೂರು - ಕಾರವಾರ -ಬೆಂಗಳೂರು ರೈಲು ಸಂಚಾರವೂ ಯಥಾಸ್ಥಿತಿಯಲ್ಲಿರುತ್ತದೆ.
ಇದನ್ನೂ ಓದಿ :14.94 ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ ವಶ : ಮಣಿಪಾಲದ ವಿದ್ಯಾರ್ಥಿ ಬಂಧನ
ವೇಳಾಪಟ್ಟಿ ಬದಲು
ರೈಲು ಸಂ. 06517 ಬೆಂಗಳೂರು-ಮಂಗಳೂರು ರೈಲು ರವಿವಾರ, ಸೋಮವಾರ, ಮಂಗಳವಾರದ ಬದಲು ಅ. 7ರಿಂದ ಬುಧವಾರ, ಶುಕ್ರವಾರ, ರವಿವಾರ ಸಂಚರಿಸಲಿದೆ. ರೈಲು ಸಂ. 06518 ಮಂಗಳೂರು- ಬೆಂಗಳೂರು ರೈಲು ಗುರುವಾರ, ಶುಕ್ರವಾರ, ಶನಿವಾರದ ಬದಲು ಅ. 8ರಿಂದ ಗುರುವಾರ, ಶನಿವಾರ, ಸೋಮವಾರಗಳಂದು ಸಂಚರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.