ಪೃಥ್ವೀ ಶಾ ಬೊಂಬಾಟ್ ಆಟ ; ಸಿಡಿದ ಸ್ಟೋಯ್ನ್ಸ್- ಪಂತ್ : RCB ಗೆಲುವಿಗೆ 197 ರನ್ ಸವಾಲು
Team Udayavani, Oct 5, 2020, 9:18 PM IST
ದುಬಾಯಿ: ಆರಂಭಿಕ ಆಟಗಾರ ಪೃಥ್ವೀ ಶಾ (42) ಅವರ ಬೊಂಬಾಟ್ ಬ್ಯಾಟಿಂಗ್ ಹಾಗೂ ಮಾರ್ಕಸ್ ಸ್ಟೋಯ್ನ್ಸ್ ಮತ್ತು ರಿಷಭ್ ಪಂತ್ ಅವರ ಹೊಡೆಬಡಿಯ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 197 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಜೋಡಿ ಪೃಥ್ವೀ ಶಾ (42) ಮತ್ತು ಅನುಭವಿ ಬ್ಯಾಟ್ಸ್ ಮನ್ ಶಿಖರ್ ಧವನ್ (32) ಮೊದಲ ವಿಕೆಟಿಗೆ 68 ರನ್ ಜೊತೆಯಾಟ ಕಟ್ಟಿದರು.
ಆದರೆ 23 ಎಸೆತಗಳಲ್ಲಿ 42 ರನ್ ಗಳಿಸಿದ್ದ ಪೃಥ್ವೀ ಶಾ ಔಟಾಗುತ್ತಲೇ ಕ್ಯಾಪಿಟಲ್ಸ್ ಕುಸಿತ ಆರಂಭವಾಯಿತು. ಶಿಖರ್ ಧವನ್ (32), ನಾಯಕ ಶ್ರೇಯಸ್ ಅಯ್ಯರ್ (11) ಔಟಾಗುತ್ತಲೇ ಕ್ಯಾಪಿಟಲ್ಸ್ ಸ್ಥಿತಿ 90 ರನ್ನಿಗೆ 3 ವಿಕೆಟ್ ಆಗಿತ್ತು.
ಈ ಹಂತದಲ್ಲಿ ಜೊತೆಯಾದ ರಿಷಭ್ ಪಂತ್ ಹಾಗೂ ಹೊಡೆಬಡಿಯ ದಾಂಢಿಗ ಮಾರ್ಕಸ್ ಸ್ಟೋಯ್ನ್ಸ್ ಸೇರಿಕೊಂಡು ಬಿರುಸಿನ ಆಟಕ್ಕಿಳಿದರು. ಈ ಜೋಡಿ ಕೇವಲ 45 ಎಸೆತಗಳಲ್ಲಿ 89 ರನ್ ಗಳ ಉತ್ತಮ ಜೊತೆಯಾಟ ನೀಡಿದರು.
ರಿಷಭ್ ಪಂತ್ 25 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರೆ, ಸ್ಟೋಯ್ನ್ಸ್ 26 ಎಸೆತಗಳಲ್ಲಿ 53 ರನ್ ಸಿಡಿಸಿ ಔಟಾಗದೇ ಉಳಿದರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 197 ರನ್ ಗಳ ಗುರಿ ನಿಗದಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೌಲರ್ ಗಳಲ್ಲಿ ಮಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ, ಉದಾನ ಹಾಗೂ ಮೊಯೀನ್ ಆಲಿ ತಲಾ 1 ವಿಕೆಟ್ ಪಡೆದರು. 4 ಓವರ್ ಗಳಲ್ಲಿ 20 ರನ್ ನೀಡಿದ ವಾಷಿಂಗ್ಟನ್ ಸುಂದರ್ ಎಕಾನಮಿ ಬೌಲರ್ ಎಣಿಸಿಕೊಂಡರು. 3 ಓವರ್ ಗಳನ್ನು ಎಸೆದು 48 ರನ್ ನೀಡಿದ ನವದೀಪ್ ಸೈನಿ ಇಂದು ತುಸು ದುಬಾರಿಯೆಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.