ವಿಯವಾಕಿ ಮಾದರಿ ಕಿರು ಅರಣ್ಯ ನಿರ್ಮಾಣಕ್ಕೆ ಚಾಲನೆ
Team Udayavani, Oct 6, 2020, 12:21 PM IST
ದೊಡ್ಡಬಳ್ಳಾಪುರ: ಮಿತ್ರ ಫೌಂಡೇಷನ್ ಹಾಗೂ ಯುವ ಸಂಚಲನದ ಸಹಯೋಗದಲ್ಲಿ ತಾಲೂಕಿನ ಸೂಲುಕುಂಟೆ ಗ್ರಾಮದಲ್ಲಿ ರೈತ ಯುವರಾಜ್ ಅವರ ಕೃಷಿ ಭೂಮಿಯಲ್ಲಿ ವಿಯವಾಕಿ ಕಿರು ಅರಣ್ಯ ಬೆಳೆಸುವ ವನ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕುರಿತು ಮಾಹಿತಿ ನೀಡಿದ ಯುವ ಸಂಚಲನ ಅಧ್ಯಕ್ಷ ಚಿದಾನಂದ್, ಜಪಾನ್ ದೇಶದ ಮಿಯವಾಕಿಎಂಬ ಪರಿಸರ ತಜ್ಞ ನಗರ ಪ್ರದೇಶಗಳಲ್ಲಿ ಕಡಿಮೆ ಜಾಗದಲ್ಲಿಕಿರು ಅರಣ್ಯ ಬೆಳೆಸುತ್ತಿದ್ದರು. ಅತ್ಯಲ್ಪ ಸ್ಥಳದಲ್ಲಿ ನಿರೀಕ್ಷೆಗೂ ಮೀರಿ ಗಿಡಗಳನ್ನು ಬೆಳೆಸಲಾಗಿತು. ಈಮಾದರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತರ ನಗರಗಳಿಗೂ ವ್ಯಾಪಿಸಿದ್ದು, ಕಿರು ಅರಣ್ಯ ನಿರ್ಮಾಣ ಹೆಚ್ಚಾದಂತೆ ವಿಯವಾಕಿ ವಿಧಾನ’ ಎಂದೇ ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಜಪಾನ್ ದೇಶದಲ್ಲಿ ಸುನಾಮಿ ಮೊದಲಾಗಿ ಪ್ರವಾಹಗಳು ಎದುರಾದಾಗ ಮಣ್ಣಿನ ಸವಕಳಿಯಾಗಿ ಮಣ್ಣಿನ ಸತ್ವ ಕಡಿಮೆಯಾಗುತ್ತದೆ. ಉತ್ತಮ ಪರಿಸರಕ್ಕೆ ಅರಣ್ಯ ಅವಶ್ಯವಾಗಿದ್ದು, ಬೃಹತ್ ಅರಣ್ಯ ಬೆಳೆಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಮಿಯವಾಕಿ ಮಾದರಿಯಲ್ಲಿ ಕಡಿಮೆ ಅವಧಿಯಲ್ಲಿ ಅರಣ್ಯ ಬೆಳೆಸಬಹುದು ಎಂದರು.
ಪ್ರಸ್ತುತ ಸುಮಾರು 3 ಗುಂಟೆ ಜಮೀನಿನಲ್ಲಿ 91 ವಿವಿಧ ಜಾತಿಯ840 ಸಸಿಗಳನ್ನು ನಾಟಿ ಮಾಡಲಾಗಿದೆ. ಮಣ್ಣಿನ ಗುಣ ಪರಿಶೀಲನೆ ಮಾಡಿಕೊಂಡು ಭೂಮಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಹಾಕಿ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಪೋಷಕಾಂಶಗಳ ಕೊರತೆ ನೀಗಿಸಲಾಗಿದೆ. 1 ಚದರ ಮೀಟರ್ ವ್ಯಾಪ್ತಿಯಲ್ಲಿ 3 ರಿಂದ 4 ಗುಂಡಿ ತೆಗೆದು ಗಿಡ ನೆಡಲಾಗಿದೆ. ಅತಿ ಎತ್ತರ ಬೆಳೆಯುವ, ಸಾಧಾರಣ ಎತ್ತರ ಬೆಳೆಯುವ ಹಾಗೂ ಪೊದೆ ರೀತಿ ಬೆಳೆಯುವ ಸಸಿಗಳನ್ನು ವಿಂಗಡಿಸಿ ನಾಟಿ ಮಾಡಲಾಗಿದೆ. 2 ವರ್ಷ ನೀರು ಹಾಕಿ ಗಿಡಗಳನ್ನು ಪೋಷಿಸಿದರೆ, ಸಾಕು ನಮಗೇ ಗೊತ್ತಿಲ್ಲದಂತೆ ಪುಟ್ಟದೊಂದು ಅರಣ್ಯ ನಿರ್ಮಾಣವಾಗುತ್ತದೆ ಎಂದರು.
ಮಿತ್ರ ಫೌಂಡೇಷನ್‌ನ ಯುವರಾಜ್ ಮಾಹಿತಿ ನೀಡಿ, ನಮ್ಮಲ್ಲಿ ಅರಣ್ಯ ಎಂದರೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವುದು ಎನ್ನುವ ಕಲ್ಪನೆ ಇದೆ. ಆದರೆ ನಮ್ಮ ಕೃಷಿ ಜಮೀನಿನಲ್ಲೂ ವಿಯವಾಕಿಮಾದರಿಯಲ್ಲಿ ಕಿರು ಅರಣ್ಯ ಬೆಳೆಸುವುದರಿಂದ ನಮ್ಮ ಜಮೀನಿನಲ್ಲಿ ಬೆಳೆಯುವ ಇತರೆ ಬೆಳೆಗಳಿಗೆ ಬರುವ ಕೀಟಗಳ ಹಾವಳಿ ನಿಯಂತ್ರಣವಾಗುತ್ತದೆ ಎಂದರು.
ಕಿರು ಅರಣ್ಯದಲ್ಲಿ ವಿವಿಧ ಬಗೆಯ ಔಷಧಿ ಗುಣವನ್ನು ಹೊಂದಿರುವ ಸಸಿಗಳು ಇರುವುದರಿಂದ ಬಿಡುವಿನ ವೇಳೆಯಲ್ಲಿ ಕುಳಿತು ಕಾಲ ಕಳೆಯುವುದರಿಂದ ನಮ್ಮ ಆರೋಗ್ಯವು ಸುಧಾರಣೆಯಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.