ವಿದ್ಯಾಗಮ: ಶಿಕ್ಷಕರಿಗೆ ನಿತ್ಯ ಬಸ್ ಕೊರತೆ
Team Udayavani, Oct 6, 2020, 2:14 PM IST
ಶ್ರೀನಿವಾಸಪುರ: ಪಟ್ಟಣಸೇರಿ ತಾಲೂಕಿನಾದ್ಯಂತ ಕೋವಿಡ್ ಭಯದ ನಡುವೆಯೂ ಮಕ್ಕಳ ಹಿತದೃಷ್ಟಿಯಿಂದ ಅವರು ಇದ್ದಲ್ಲಿಗೆ ಶಿಕ್ಷಕರು ಹೋಗಿ ಪಾಠ ಮಾಡುತ್ತಿರುವುದು ಸ್ವಾಗತಾರ್ಹ ವಾದರೂ ಕೆಲವು ಶಿಕ್ಷಕರು ಮಕ್ಕಳು ಇರುವ ಗ್ರಾಮಗಳಿಗೆ ಹೋಗಲು ಬಸ್ ಕೊರತೆ ಉಂಟಾಗಿದೆ.
ಶ್ರೀನಿವಾಸಪುರ ತಾಲೂಕಿನ ಎಲ್ಲಾ ಕಡೆ ಕೋವಿಡ್ ಮಹಾಮಾರಿ ಆವರಿಸಿ ರುವುದರಿಂದ ಶೈಕ್ಷಣಾರ್ಥಿಗಳಿಗೆ, ಶಿಕ್ಷಕರಿಗೆ ಸಮಸ್ಯೆ ಎದುರಿಸುವಂತಾಗಿದೆ. ಒಂದಡೆ ಶಾಲೆಮತ್ತೂಂದಡೆಕೊರೊನಾ ಸಮಸ್ಯೆಯಿಂದ ಪಾರಾಗುವುದು ಹೇಗೆಂಬುದು ತಲೆನೋವಾಗಿದೆ. ಶಾಲೆ ಗಳನ್ನು ತೆರೆದು 6 ತಿಂಗಳಾಗುತ್ತಿದೆ. ಮಕ್ಕಳು ಸ್ವೇಚ್ಚಾಚಾರದಲ್ಲಿ ಟಿವಿಗಳಮುಂದೆ, ಮೊಬೈಲ್‌ಗಳಲ್ಲಿ ಆಟಪಾಠ ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಆದರೂ, ಮಕ್ಕಳು ಶೈಕ್ಷಣಿಕ ಚಟುವಟಿಕೆ ಮರೆಯಬಾರದೆಂದು ನಿರಂತರ ಕಲಿಕೆಗಾಗಿ ವಿದ್ಯಾಗಮ ವಿನೂತನ ಯೋ ಜನೆ ಆರಂಭಿಸಿದ್ದು ಮಕ್ಕಳ ಹಿತ ದೃಷ್ಟಿ ಯಿಂದ ಒಳ್ಳೆಯ ಬೆಳವಣಿಗೆಯಾಗಿದೆ.
ಶಾಲೆಗಳ ಬಾಗಿಲುಗಳನ್ನು ತೆರೆಯದೇ ಕಪ್ಪುಹಲಗೆ ಬಳಸದೇ ಹೊರಗೆ ಆಯಾ ಗ್ರಾಮಗಳಲ್ಲಿರುವ ಮಕ್ಕಳ ಬಳಿಗೆ ಶಿಕ್ಷಕರು ಹೋಗಿ ಪಾಠ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿನ ಆಯಾ ದೇವಾಲಯ, ಸಮುದಾಯ ಭವನ, ಇತರೆ ಸ್ಥಳಗಳಲ್ಲಿ ಮಕ್ಕಳನ್ನು ಸೇರಿಸಿ ಪಾಠ ಪ್ರವಚನ ಮುಂದುವರಿಸಿದ್ದಾರೆ. ಆದರೆ, ಶಿಕ್ಷಕರ ಅನುಕೂಲಕ್ಕೆ ಬಸ್‌ಗಳು ಸಕಾಲಕ್ಕೆ ಸಿಗುತ್ತಿಲ್ಲ. ಇನ್ನೊಂದೆಡೆ ಮಹಿಳಾ ಶಿಕ್ಷಕರುತೀವ್ರ ಸಮಸ್ಯೆ ಎದುರಿಸಬೇಕಾಗಿದೆ.
ಹಾಗೆಯೇ ಕೋವಿಡ್ ಮುನ್ನೆಚ್ಚರಿಕೆಯಾಗಿ ಬಹುತೇಕ ಪೋಷಕರು ಕೋವಿಡ್ ಮರೆಯಾದ ಮೇಲೆ ಶಾಲೆಗಳನ್ನು ಆರಂಭಿಸುವುದು ಸೂಕ್ತವೆಂದಿದ್ದಾರೆ. ಇನ್ನೂ ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿ ಟೈಜರ್ ಬಳಸಿ ತರಗತಿ ಆರಂಭಿಸ ಬಹುದೆಂಬ ಲೆಕ್ಕಾಚಾರದಲ್ಲಿ ಭಯದ ನಡುವೆ ಹೇಳುತ್ತಿದ್ದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವ ಧೈರ್ಯ ಮಾತ್ರ ಮಾಡುತ್ತಿಲ್ಲ. ಆದರೂ, ಪಟ್ಟಣ ಹಾಗೂಹಳ್ಳಿಗಳಲ್ಲಿವಿದ್ಯಾಗಮಯೋಜ ನೆಯಲ್ಲಿ ಶಿಕ್ಷಕರು ಮಕ್ಕಳನ್ನು ಒಂದಡೆ ಸೇರಿಸಿ ಪಾಠ ಪ್ರವಚನ ಮುಂದುವರಿಸಿರುವುದು ನಿತ್ಯದ ಕಾಯಕದಲ್ಲಿ ಕಂಡು ಬಂದಿದೆ. ಆದರೂ, ಆಂಗ್ಲ ಮಾಧ್ಯಮ ಪಾಠಗಳು ನಡೆಯುತ್ತಿಲ್ಲ. ಇದನ್ನು ಪ್ರಾರಂಭ ಮಾಡಬೇಕೆಂಬುದು ವಿದ್ಯಾರ್ಥಿಗಳ ಮನವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.