ಅನುಮತಿಗಾಗಿ ಕಾಯುತ್ತಿವೆ ಸಾರ್ವಜನಿಕ ಗ್ರಂಥಾಲಯಗಳು
ಮಾನಸಿಕ ಒತ್ತಡ ಕಳೆಯಲು ಸಹಕಾರಿ ಪುಸ್ತಕಗಳು: ಹೆಚ್ಚುತ್ತಿರುವ ಪುಸ್ತಕಾಸಕ್ತರು
Team Udayavani, Oct 6, 2020, 6:26 PM IST
ಸಾಂದರ್ಭಿಕ ಚಿತ್ರ
ಮುಂಬಯಿ, ಅ. 5: ಒಂಟಿತನ ಹಾಗೂ ಉಂಟಾದ ಮಾನಸಿಕ ಒತ್ತಡ ಕಳೆಯಲು ಪುಸ್ತಕಗಳು ಒಳ್ಳೆಯ ಸಂಗಾತಿ. ಈ ಬಾರಿಯ ಲಾಕ್‌ಡೌನ್ ಸಂದರ್ಭದಲ್ಲೂ ಪುಸ್ತಕಗಳು ಅದನ್ನು ಸಾಬೀತುಪಡಿಸಿ, ಓದಿನ ಅಭಿರುಚಿ ಹೆಚ್ಚಿಸಿದೆ. ಈ ಒತ್ತಡದ ಸಂದರ್ಭ ಮುಂಬಯಿ ಗರಿಗೆ ಸಂಗಾತಿಯಾಗಬೇಕಿದ್ದ ಗ್ರಂಥಾಲಯ ಗಳಿಗಿನ್ನೂ ತೆರೆಯುವ ಭಾಗ್ಯ ದೊರೆತಿಲ್ಲ.
ಅನ್‌ಲಾಕ್ 5.0 ಜಾರಿಯಲ್ಲಿದ್ದು, ಈಗಾಗಲೇಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯವಹಾರಗಳಿಗೆ ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ಇನ್ನೂ ಅನುಮತಿ ನೀಡಿಲ್ಲ. ಗ್ರಂಥಾಲಯದ ನಿರ್ವಾಹಕರು ತಮ್ಮ ಸಿಬಂದಿಗೆ ಇನ್ನೂ ವೇತನ ನೀಡದ ಕಾರಣ ಗ್ರಂಥಪಾಲಕರಿಗೆ ಷರತ್ತುಬದ್ಧ ಅನುಮತಿ ನೀಡಬೇಕೆಂದು ಒತ್ತಾಯಿಸಿದರೆ, ಓದುಗರು ರಾಜ್ಯ ಸರಕಾರವು ಗ್ರಂಥಾಲಯಗಳನ್ನು ಬಹುಮುಖ್ಯವಾಗಿ ಸ್ವೀಕರಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಲಾಕ್‌ಡೌನ್ ಓದಲು ಉತ್ತಮ ಸಮಯ. ಆದ್ದರಿಂದ ಗ್ರಂಥಾಲಯಗಳನ್ನು ಮುಚ್ಚುವುದು ತಪ್ಪು. ಗ್ರಂಥಾಲಯ ಕಚೇರಿ ತೆರೆದಾಗ ಓದುಗರು ಬರುತ್ತಾರೆ. ಆದರೆ ಪುಸ್ತಕಗಳು ಸಿಗದಿದ್ದರೆ ನಿರಾಶೆಯಾಗುತ್ತದೆ. ಗ್ರಂಥಾಲಯಗಳಲ್ಲಿ ಹೆಚ್ಚು ಜನದಟ್ಟಣೆ ಇರದ ಕಾರಣ ಅನುಮತಿ ಕೊಡಲು ಯಾವುದೇ ಸಮಸ್ಯೆಯಿಲ್ಲ. ಹಾಗಾಗಿ ಕೂಡಲೇ ಗ್ರಂಥಾಲಯಗಳ ಆರಂಭಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗ್ರಂಥಪಾಲಕರ ಆಗ್ರಹ.
ಮಾಲ್‌ಗಳು, ಹೊಟೇಲ್‌ಗಳಿಗೆ ಅವಕಾಶ ಕೊಟ್ಟಿರುವುದು ಸರಿ. ಅಲ್ಲಿ ಗ್ರಂಥಾಲಯಗಳಿ ಗಿಂತ ಹೆಚ್ಚು ಜನದಟ್ಟಣ ಇರುತ್ತದೆ. ಆದರೆ ಸ್ಥಳೀಯ ಆರ್ಥಿಕತೆಗೆ ಅವುಗಳೂ ಮುಖ್ಯ. ಸರಕಾರ ಜನದಟ್ಟಣೆ ಸೇರುವಂಥ ಉದ್ಯಮಗಳಿಗೆ ಅವಕಾಶ ನೀಡಿರುವಾಗ ನಮಗೇಕೆ ಅವಕಾಶ ನೀಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ನಮ್ಮ ತಪ್ಪಾದರೂ ಏನು ಎಂದು ರಾಜ್ಯ ಗ್ರಂಥಾಲಯ ಸಂಘದ ಕಾರ್ಯಕಾರಿ ಅಧ್ಯಕ್ಷ ಶಿವಕುಮಾರ್ ಶರ್ಮ ಪ್ರಶ್ನಿಸಿದ್ದಾರೆ.ಸೆಪ್ಟಂಬರ್‌ನಲ್ಲಿ ನಿರೀಕ್ಷಿಸಿದ ಅನುದಾನದ ಮೊದಲ ಕಂತು ಬಾರದ ಕಾರಣ, ಎಪ್ರಿಲ್ ನಿಂದ ಗ್ರಂಥಾಲಯ ಸಿಬಂದಿಗೆ ವೇತನವಿತರಣೆಯಾಗಿಲ್ಲ. ಓದುಗರು ಪ್ರತಿದಿನ ಗ್ರಂಥಾಲಯಕ್ಕೆ ಬರುತ್ತಾರೆ. ಸರಕಾರ ಕೂಡಲೇ ತೀರ್ಮಾನ ಕೈಗೊಂಡು ಗ್ರಂಥಾಲಯಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೀಗ ಜನರು ಮಾಸ್ಕ್ಗಳನ್ನು ಧರಿಸಿ ಹೊರಗಡೆ ಹೋಗುತ್ತಿದ್ದಾರೆ. ಆದ್ದರಿಂದ ಗ್ರಂಥಾಲಯಕ್ಕೆ ಬರುವುದರಲ್ಲಿ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ವಾಸ್ತವವಾಗಿ, ಗ್ರಂಥಾಲಯಗಳು ಹೆಚ್ಚು ಕಿಕ್ಕಿರಿದಿರುವುದಿಲ್ಲ. ಆದ್ದರಿಂದ ಅವುಗಳನ್ನು ಮತ್ತೆ ತೆರೆಯಬೇಕು. ಆದರೆ, ರೈಲುಗಳು ಮುಚ್ಚಿರುವುದರಿಂದ ಸಿಬಂದಿ ಹೇಗೆ ಬರುತ್ತಾರೆ ಎಂಬ ಪ್ರಶ್ನೆಯೂ ಇದೆ ಎನ್ನುತ್ತಾರೆ ಮುಂಬಯಿ ಮರಾಠಿ ಗ್ರಂಥಾಲಯದ ಅಧೀಕ್ಷಕ ಸುನಿಲ್ ಕುಬಲ್. ಗ್ರಂಥಾಲಯಗಳನ್ನು ಪ್ರಾರಂಭಿಸಿದರೆ, ಸಾಮಾ ಜಿಕ ಅಂತರವೂ ಸಹಿತ ಎಲ್ಲ ನಿಯಮ ಗಳನ್ನು ಅನುಸರಿಸಲಾಗುತ್ತದೆ. ಅಗತ್ಯ ವಿರುವೆಡೆ ಮನೆಗೆ ಪುಸ್ತಕ ವಿತರಿಸಲಾಗು ವುದು. ಗ್ರಂಥಾಲಯಗಳಿಗೆ ಪುಸ್ತಕ ಹಿಂದಿರುಗಿದ ಅನಂತರ ಎರಡು ದಿನಗಳ ವರೆಗ ಅದನ್ನು ಮುಟ್ಟಲಾಗುವುದಿಲ್ಲ ಎಂದು ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ| ರಾಮೇಶ್ವರ್ ಪವಾರ್ ತಿಳಿಸಿದ್ದಾರೆ.
ಗ್ರಂಥಾಲಯಗಳನ್ನು ಪ್ರಾರಂಭಿಸಬೇಕು ಎಂದು ಓದುಗರು ಒತ್ತಾಯಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಪ್ರತಿದಿನ ವಾಚನಾಲಯದ ಹೊರಗೆ ಮೆಟ್ಟಿಲುಗಳ ಮೇಲೆ ಅಥವಾ ಕಾಲುದಾರಿಗಳಲ್ಲಿ ಕುಳಿತಿರುತ್ತಾರೆ. ಆದ್ದರಿಂದ, ಓದುಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಂಥಾಲಯಗಳನ್ನು ಪ್ರಾರಂಭಿಸಬೇಕು ಎಂದು ರಾಜ್ಯ ಗ್ರಂಥಾಲಯ ಸಂಘ’ದ ಮುಖ್ಯ ಕಾರ್ಯಕರ್ತ ಡಾ| ಗಜಾನನ್ ಕೊಟೆವಾರ್ ಅಭಿಪ್ರಾಯಪಟ್ಟಿದ್ದಾರೆ. ಗ್ರಂಥಾಲಯ ಆರಂಭ ಬಗ್ಗೆ ಆದರ್ಶ ಕಾರ್ಯ ವಿಧಾನ (ಎಸ್‌ಒಪಿ) ರೂಪಿಸಿ ಕಳೆದ ವಾರ ಅದನ್ನು ಉನ್ನತ ಶಿಕ್ಷಣ ಸಚಿವ ಉದಯ್ ಸಾಮಂತ್ ಮುಂದೆ ಪ್ರಸ್ತುತಪಡಿಸಿದಾಗ, ಅವರು ಗ್ರಂಥಾಲಯಗಳಿಗೆ ಅನು ಮತಿ ನೀಡಲು ಸಿದ್ಧರಾಗಿದ್ದರು. ಆದರೆ ಇದೀಗ ಸಚಿವರೇ ಸೋಂಕಿಗೆ ಗುರಿಯಾಗಿರುವುದ ರಿಂದ ಮುಂದೇನೆಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ನಮ್ಮಲ್ಲಿ ಕುಳಿತು ಓದುವ ಸೌಲಭ್ಯವಿಲ್ಲ, ಸದಸ್ಯರು ಬಂದು ಪುಸ್ತಕ ಪಡೆದು ಹೋಗುವುದರಿಂದ ಲೈಬ್ರರಿ ಕಾರ್ಯಾ ಚರಣೆಯಲ್ಲಿದೆ. ಸದಸ್ಯರಿಗೆ ಒಂದು ಬಾರಿಗೆ ಐದು ಪುಸ್ತಕ ನೀಡುತ್ತೇವೆ. ಅವರು ಐದರಿಂದ ಆರು ದಿನಗಳಲ್ಲಿ ಒಮ್ಮೆ ಲೈಬ್ರರಿಗೆ ಭೇಟಿ ನೀಡುತ್ತಾರೆ. ಮಾಸ್ಕ್ ಕಡ್ಡಾಯಗೊಳಿಸಿ ಸಾಮಾಜಿಕ ಅಂತರ ಪಾಲಿಸುತ್ತಿದ್ದೇವೆ. ಹಿರಿಯ ನಾಗರಿಕರಿಗೆ ಮನೆಗೇ ಪುಸ್ತಕ ಒದಗಿಸು ತ್ತೇವೆ, ವೆಬ್ ಸೈಟ್ ಮೂಲಕ ಪುಸ್ತಕಗಳ ಆನ್‌ಲೈನ್ ಡೆಲಿವರಿ ಸೌಲಭ್ಯವನ್ನೂ ಕಲ್ಪಿಸಿದ್ದೇವೆ. ಆನ್‌ಲೈನ್‌ನಲ್ಲಿ ಮುಂಬಯಿ, ಥಾಣೆ, ಪುಣೆ, ನಾಸಿಕ್‌ನಾದ್ಯಂತ ಸದಸ್ಯರಿಗೆ ಪುಸ್ತಕ ಪೂರೈಸಲಾಗುತ್ತಿದೆ. ಆನ್‌ಲೈನ್ ಸದಸ್ಯರಿಗೆ ಒಂದು ಬಾರಿಗೆ 6 ಪುಸ್ತಕಗಳನ್ನು ನೀಡುತ್ತಿದ್ದೇವೆ. ಪುಸ್ತಕಗಳನ್ನು ಹಿಂಪಡೆದ ಅನಂತರ ಎರಡು ದಿನಗಳವರೆಗೆ ಅವುಗಳನ್ನು ಪ್ರತ್ಯೇಕವಾಗಿಡುತ್ತೇವೆ ಮತ್ತು ಅವುಗಳನ್ನು ಸ್ಯಾನಿಟೈಸ್ ಮಾಡುತ್ತೇವೆ. ಲಾಕ್‌ಡೌನ್ ಅವಧಿಯಲ್ಲಿ ಓದುಗರಲ್ಲಿ ಆಸಕ್ತಿ ಹೆಚ್ಚಾಗಿದೆ. -ಪುಂಡಲೀಕ ಪೈ, ಮಾಲಕರು, ಪೈಸ್ ಫ್ರೆಂಡ್ಸ್ ಲೈಬ್ರರಿ, ಡೊಂಬಿವಲಿ
ಅಕ್ಷಿತ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.