ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನ ದರ್ಪ ಅಂತ್ಯಕ್ಕೆ ಕ್ವಾಡ್ ಸಂಕಲ್ಪ
Team Udayavani, Oct 7, 2020, 10:41 AM IST
ಹೊಸದಿಲ್ಲಿ: ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನದ ಉದ್ಧಟತನವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ನೀಡಲು ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ನಿರ್ಧರಿಸಿವೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್, ಅಮೆರಿಕ ರಾಷ್ಟ್ರಗಳ ವಿದೇಶಾಂಗ ಸಚಿವರ ಚತುಷ್ಕೋನ ಭದ್ರತಾ ಸಮ್ಮೇಳನ (ಕ್ವಾಡ್ ಸಮ್ಮೇಳನ)ದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಭೆಯಲ್ಲಿ, ಭಾರತದ ವಿದೇಶಾಂಗ ಸಚಿವ ಜೈಶಂಕರ್, ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪಿಯೂ , ಆಸ್ಟ್ರೇಲಿಯಾದ ಮ್ಯಾರಿಸ್ ಪಾಯ್ನೆ ಹಾಗೂ ಜಪಾನ್‌ನ ತೊಷಿಮಿಟ್ಸು ಮೊಟೆಗಿ ಉಪಸ್ಥಿತರಿದ್ದರು. ಸಮ್ಮೇಳನದ ಅನಂತರ ಅಧಿಕೃತ ಪ್ರಕಟನೆ ಹೊರಡಿಸಿರುವ ಜಪಾನ್, “ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ, ಸೌಹಾರ್ದ ನೆಲೆಸಲು ಕ್ವಾಡ್ ರಾಷ್ಟ್ರಗಳು ಸಮ್ಮತಿಸಿವೆ’ ಎಂದಿದೆ.
ಪರಸ್ಪರ ಗೌರವದ ಸೂತ್ರದ ವಿಶ್ವಕ್ಕೆ ಕಟಿಬದ್ಧ
ಸಮ್ಮೇಳನದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್, “”ವಿಶ್ವದಲ್ಲಿ ಎಲ್ಲ ದೇಶಗಳು ಪರಸ್ಪರರ ಭಾವನೆಗಳನ್ನು ಗೌರವಿಸುವ, ಗಡಿ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸುವಂಥ, ನಿರ್ದಿಷ್ಟ ನಿಯಮಿತ ರೂಪದಲ್ಲಿ ಸಾಗುತ್ತಿರುವಂಥ ವಾತಾವರಣ ನಿರ್ಮಾಣವಾಗಬೇಕು. ಅಂಥದ್ದೊಂದು ಸೂತ್ರದಡಿ ಇಡೀ ವಿಶ್ವ ಮುನ್ನಡೆಯುವಂತಿರಬೇಕು. ಅಂಥ ನಿಯಮ ಬದ್ಧ ಜಗತ್ತಿನ ನಿರ್ಮಾಣಕ್ಕೆ ಭಾರತ ಎಂದಿಗೂ ಕಟಿಬದ್ಧವಾಗಿದೆ” ಎಂದರು.
“”ವೈವಿಧ್ಯಮಯ ಸಂಸ್ಕೃತಿಗಳು, ಬಹು ಸಮುದಾಯಗಳ ಆಶ್ರಯದಾಣಗಳಾಗಿರುವ ಭಾರತ, ಜಪಾನ್, ಅಮೆರಿಕ ಹಾಗೂ ಆಸ್ಟ್ರೇಲಿಯಾ ದೇಶಗಳು, ಗಡಿ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಬಯಸುತ್ತವೆ.
ನಮ್ಮ ಈ ಔದಾರ್ಯವನ್ನು ಇತರ ರಾಷ್ಟ್ರಗಳು ಗೌರವಿಸಬೇಕು” ಎಂದು ಚೀನ, ಪಾಕಿಸ್ಥಾನದ ಹೆಸರೆತ್ತದೆ ಜೈಶಂಕರ್ ತಾಕೀತು ಮಾಡಿದರು.
ಚೀನ ದರ್ಪ ತಗ್ಗಿಸಬೇಕು: ಮೈಕ್
ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪಿಯೂ ಮಾತನಾಡಿ, “”ಚೀನದ ಕಮ್ಯೂನಿಸ್ಟ್ ಪಾರ್ಟಿಯ ಶೋಷಣೆಯಿಂದ ಅಮೆರಿಕ ತನ್ನ ಪ್ರಜೆಗಳನ್ನು ರಕ್ಷಿಸಬೇಕಿದೆ. ಅಂಥದ್ದೇ ದಬ್ಟಾಳಿಕೆಯ ವಾತಾವರಣವನ್ನು ನಾವು ಚೀನ ಸಮುದ್ರದ ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿ ಕಾಣುತ್ತಿದ್ದೇವೆ. ಏಷ್ಯಾದ ಪೂರ್ವ ಭಾಗದ ಮೆಕಾಂಗ್‌ನಲ್ಲಿ, ಹಿಮಾಲಯದಲ್ಲಿ, ತೈವಾನ್ ನ ಲ್ಲಿಯೂ ಚೀನ ಶಕ್ತಿ ಪ್ರದರ್ಶನ ಮಾಡಲಾರಂಭಿಸಿದೆ. ಚೀನದ ದರ್ಪಕ್ಕೆ ಇವು ಕೇವಲ ಉದಾಹರಣೆಗಳಷ್ಟೇ. ಆದಷ್ಟು ಬೇಗನೇ ಇದನ್ನು ತಗ್ಗಿಸಬೇಕಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.