ಕುಂದಾಪುರ: ವಿವಿಧೆಡೆ ಅಂಚೆ ಆಧಾರ್ ನೋಂದಣಿ
Team Udayavani, Oct 7, 2020, 11:30 AM IST
ಕುಂದಾಪುರ, ಅ. 6: ತಾಲೂಕಿನ ವಿವಿಧ ಅಂಚೆ ಕಚೇರಿಗಳಲ್ಲಿ ಅಂಚೆ ಇಲಾಖೆ ವತಿಯಿಂದ ಆಧಾರ್ ತಿದ್ದುಪಡಿ, ನೋಂದಣಿ ಪ್ರಕ್ರಿಯೆ ಮಂಗಳವಾರ ನಡೆಯಿತು.
ಎರಡು ಕಡೆ ಸರ್ವರ್ ಸಮಸ್ಯೆ ಉಂಟಾದುದು ಬಿಟ್ಟರೆ ಇತರೆಡೆ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುವಲ್ಲಿ ಅಂಚೆ ಇಲಾಖೆಯ ಶ್ರಮ ಫಲ ಕೊಟ್ಟಿದೆ. ಮಂಗಳವಾರ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯದ ದಿನವಾಗಿದ್ದು ಅಂಚೆ ಇಲಾಖೆ ಆಧಾರ್ ಅಭಿಯಾನವನ್ನು ಸವಾಲಾಗಿ ಸ್ವೀಕರಿಸಿ ಜನರಿಗೆ ಸೇವೆ ನೀಡಿದೆ. ಉಡುಪಿಯಿಂದ ಬೈಂದೂರಿನ ಶಿರೂರುವರೆಗೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್‌ಚಂದ್ರ ಅವರು ಸ್ವತಃ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಕಂಪ್ಯೂಟರ್ ಕೈ ಕೊಟ್ಟಲ್ಲಿಗೆ ಬದಲಿ ವ್ಯವಸ್ಥೆ ಯನ್ನೂ ಮಾಡಿಸಿದ್ದರು.
ಸಾರ್ವಜನಿಕರಿಗೆ ಆಧಾರ್ ಸೇವೆಯ ಅಗತ್ಯವನ್ನು ಅರಿತು ಉಡುಪಿ ಅಂಚೆ ವಿಭಾಗವು ಎರಡು ಜಿಲ್ಲೆಗಳಲ್ಲಿ ವಿವಿಧ ಅಂಚೆ ಕಚೇರಿಗಳಲ್ಲಿ ಆಧಾರ್ ಅಭಿಯಾನ ಆಯೋಜಿಸಿತ್ತು. ಕುಂದಾಪುರ ತಾಲೂಕಿನ ಅಂಚೆ ಕಚೇರಿಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಆಧಾರ್ ಅಭಿಯಾನ ಆರಂಭಗೊಳ್ಳಲಿದೆ, ಗರಿಷ್ಠ 150 ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆ ಲಭ್ಯವಿದೆ ಎಂದು ತಿಳಿಸಲಾಗಿತ್ತು. ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಾಗಿ ಆಸಕ್ತರು ಮುಂಗಡ ಟೋಕನ್ ಪಡೆದುಕೊಂಡು ನಿಗದಿತ ಸಮಯಕ್ಕೆ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಸಂಬಂಧಿತ ಸೇವೆಯನ್ನು ಪಡೆದುಕೊಳ್ಳಲು ಇಲಾಖೆ ಏರ್ಪಾಡು ಮಾಡಿತ್ತು. ಅದರಂತೆ ನೋಂದಣಿ ಮಾಡಿದವರಿಗೆ ಅಂಚೆ ಇಲಾಖೆ ಸಿಬಂದಿ ಮನೆ ಮನೆಗೆ ತೆರಳಿ ಸಮಯ ನಿಗದಿ ಮಾಡಿ ಟೋಕನ್ ನೀಡಿದ್ದರು.
ಕುಂದಾಪುರ ಪ್ರಧಾನ ಅಂಚೆ ಕಚೇರಿ ಹಾಗೂ ಬೈಂದೂರಿನಲ್ಲಿ ಕಂಪ್ಯೂಟರ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಲಿಲ್ಲ. ಹಾಗಿದ್ದರೂ ಕುಂದಾಪುರದಲ್ಲಿ ತತ್‌ಕ್ಷಣ ಬದಲಿ ವ್ಯವಸ್ಥೆ ಮಾಡಿ ಸಂಜೆ ವೇಳೆಗೆ 75ರಷ್ಟು ಮಂದಿಗೆ ಸೌಕರ್ಯ ಮಾಡಿಕೊಡಲಾಯಿತು. ಬೈಂದೂರಿನಲ್ಲಿ ಸಾಧ್ಯವಾಗಲಿಲ್ಲ. ಬಸ್ರೂರು ಮೊದಲಾದೆಡೆ ಸಂಜೆ 6 ಗಂಟೆ ಅನಂತರವೂ ಜನ ಆಗಮಿಸುತ್ತಲೇ ಇದ್ದರು.ಕುಂದಾಪುರ ಪ್ರಧಾನ ಅಂಚೆ ಕಚೇರಿ 75, ತಲ್ಲೂರು ಅಂಚೆ ಕಚೇರಿ 92, ಬಸ್ರೂರು 100, ತ್ರಾಸಿ 85, ವಂಡ್ಸೆ 84, ಕೋಟೇಶ್ವರ 150, ಶಂಕರನಾರಾಯಣ 55, ಶಿರೂರು 16, ಗಂಗೊಳ್ಳಿ 68 ಆಧಾರ್ ಪ್ರಕ್ರಿಯೆಗಳು ನಡೆದಿವೆ.
ಮಾರ್ಗಸೂಚಿ ಪಾಲನೆ : ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಹೆಚ್ಚು ಜನಸಂದಣಿ ಆಗದಂತೆ ಮೊದಲೇ ನಮ್ಮ ಸಿಬಂದಿ ಮೂಲಕ ಟೋಕನ್ ವಿತರಿಸಿ ಸಮಯ ನಿಗದಿ ಮಾಡಿಯೇ ಪ್ರಕ್ರಿಯೆ ನಡೆಸಲಾಯಿತು. –ಗಣಪತಿ ಮರ್ಡಿ ಸಹಾಯಕ ಅಂಚೆ ಅಧೀಕ್ಷಕರು, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.