ಅಕ್ರಮ ಗಣಿಗಾರಿಕೆಯಿಂದ ನರಕ ಯಾತನೆ
ಶ್ರೀರಂಗಪಟ್ಟಣದ ಜಕ್ಕನಹಳ್ಳಿ ಬಳಿ ಎಗ್ಗಿಲ್ಲದೆ ಸಾಗಿದೆ ಗಣಿಗಾರಿಕೆ
Team Udayavani, Oct 7, 2020, 3:19 PM IST
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಗ್ರಾಮಸ್ಥರು ಇದರಿಂದ ಬೇಸತ್ತು ಹೋಗಿದ್ದಾರೆ. ರಾತ್ರಿ ವೇಳೆ ಸಂಚರಿಸುವ ಲಾರಿಗಳಿಂದ ನಿದ್ದೆ ಇಲ್ಲದೇ ಪ್ರತಿದಿನ ಯಾತನೆ ಪಡುವಂತಾಗಿದೆ. ಲಾರಿಗಳು ಸಂಚರಿಸುತ್ತಿದ್ದರೆ ನಮ್ಮ ಎದೆಯ ಮೇಲೆ ಸಂಚರಿಸಿದ ಅನುಭವವಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಹಲವು ಬಾರಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ, ಗಣಿಗಾರಿಕೆ ತಡೆಗಟ್ಟಲು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.
ಎಗ್ಗಿಲ್ಲದೆ ಕಲ್ಲು ಬಂಡೆಗಳ ಸ್ಫೋಟ: ಗಣಿಗಾರಿಕೆಗಾಗಿ ಕುಳಿ ತೋಡಿ ಕಲ್ಲು ಬಂಡೆ ಗಳನ್ನು ಹಗಲು, ರಾತ್ರಿ ಎನ್ನದೆ ಸಿಡಿಸುವುದರಿಂದ ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು ಬೆಚ್ಚಿ ಬೀಳುತ್ತಿದ್ದಾರೆ. ಜನ-ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಸಿಡಿಯುವ ಕಲ್ಲುಗಳು ಅಕ್ಕಪಕ್ಕದ ಜಮೀನುಗಳಿಗೆ ಬೀಳು ವುದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ.
ಮನೆಗಳ ಬಿರುಕು:ಕಲ್ಲು ಬಂಡೆಗಳನ್ನು ಸ್ಫೋಟ ಮಾಡುವುದರಿಂದ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ. ಇದ ರಿಂದ ಮನೆಗಳು ವಾಸಕ್ಕೆ ಯೋಗ್ಯ ವಿಲ್ಲದಂತಾಗಿದೆ. ಪ್ರತಿನಿತ್ಯ ಪ್ರಾಣ ಭಯದಲ್ಲೇ ವಾಸ ಮಾಡುವಂತಾಗಿದೆ. ಇದರ ಬಗ್ಗೆ ಕೇಳಿ ದರೆ ಗಣಿ ಮಾಲೀಕರು ಜೀವ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ರಸ್ತೆಗಳುಹಾಳು: ಪ್ರತಿದಿನ ಹಗಲು, ರಾತ್ರಿ ಸಾವಿರಾರು ಲಾರಿಗಳು ಕಲ್ಲುಗಳನ್ನು ಸಾಗಣೆಗೆ ಸಂಚರಿಸುತ್ತಿರುವುದರಿಂದ ರಸ್ತೆಗಳೆಲ್ಲ ಸಂಪೂರ್ಣವಾಗಿ ಹಾಳಾಗಿದೆ. ಹಳ್ಳ, ಗುಂಡಿಗಳಿಂದ ಕೂಡಿವೆ. ಮಳೆ ಬಂದಾಗ ರಸ್ತೆಯುಕೊಚ್ಚೆಯಂತಾಗಿ ಓಡಾಡಲು ತೊಂದರೆಯಾಗುತ್ತದೆ. ಆದರೆ, ಲಾರಿಗಳು ಮಾತ್ರ ಸಂಚರಿಸುತ್ತಲೇ ಇವೆ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಹೆಚ್ಚಿನ ಲಾರಿಗಳ ಸಂಚಾರದಿಂದಕಿತ್ತು ಹೋಗಿವೆ.
ಅರಣ್ಯ ಪ್ರದೇಶ ಒತ್ತುವರಿ: ಗ್ರಾಮಕ್ಕೆ ಹೊಂದಿಕೊಂಡಂತೆ ಅರಣ್ಯ ಪ್ರದೇಶವಿದೆ. ಅದನ್ನೂ ಗಣಿಮಾಲೀಕರು ಒತ್ತುವರಿ ಮಾಡಿ ಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ.ಗ್ರಾಮ, ಕೃಷಿ ಭೂಮಿ ಧೂಳುಮಯ: ಅಕ್ರಮ ಗಣಿಗಾರಿಕೆಯಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶ ಧೂಳಿನಿಂದ ಕೂಡಿದೆ. ಪ್ರತಿದಿನ ಗ್ರಾಮದಲ್ಲಿ ಸಂಚರಿಸುವ ಲಾರಿಗಳ ಸಂಚಾರದಿಂದ ಮೇಲೇಳುವ ಧೂಳು ಗ್ರಾಮವನ್ನುಆವರಿಸುತ್ತದೆ. ಇದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವೃದ್ಧರು, ರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಜೋರಾಗಿ ಸಾಗುವ ಲಾರಿಗಳಿಂದ ಬರುವ ಧೂಳು ಸಾರ್ವಜನಿಕರ ಕಣ್ಣಿಗೆ ರಾಚುತ್ತದೆ. ಇದರಿಂದ ಈಗಾಗಲೇ ಸಾಕಷ್ಟು ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ. ಇದರ ಜೊತೆಗೆ ಅಕ್ಕಪಕ್ಕದ ಜಮೀನುಗಳ ಬೆಳೆಗಳ ಮೇಲೆ ಧೂಳು ಆವರಿಸುವುದರಿಂದ ಬೆಳೆಗಳು ನಾಶವಾಗುತ್ತಿವೆ. ಭೂಮಿಯ ಫಲವತ್ತತೆ ನಾಶವಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕ್ರಮ ಕೈಗೊಳ್ಳದ ಜಿಲ್ಲಾಡಳಿತ : ಜಕ್ಕನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂಯಾವುದೇಕ್ರಮ ಕೈಗೊಂಡಿಲ್ಲ. ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಲಾಗಿದೆ. ಆದರೆ,ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಎಂದು ಗ್ರಾಮದ ಮಾದೇವು ಹೇಳುತ್ತಾರೆ.
ಸುಮಾರು 30ರಿಂದ 40 ಟನ್ ಕಲ್ಲು ತುಂಬಿದ ಲಾರಿಗಳು ಸಂಚರಿಸುವುದರಿಂದ ರಸ್ತೆಗಳು ಹಾಳಾಗಿವೆ. ರಾತ್ರಿ ವೇಳೆಯಲ್ಲಿ ಲಾರಿಗಳು ಸಂಚರಿಸುವುದರಿಂದ ಗ್ರಾಮಸ್ಥರು ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಎದೆಯ ಮೇಲೆಯೇ ಲಾರಿಗಳು ಸಂಚರಿಸುವ ಅನುಭವ ವಾಗುತ್ತದೆ. ಮಹಿಳೆಯರು, ಮಕ್ಕಳು ಭಯ ಪಡುವಂತಾಗಿದೆ. ಆದ್ದರಿಂದಕೂಡಲೇ ಜಿಲ್ಲಾಧಿಕಾರಿ ಕ್ರಮಕೈಗೊಂಡು ಗಣಿಗಾರಿಕೆ ನಿಲ್ಲಿಸಬೇಕು. –ಮಹದೇವು, ಗ್ರಾಮದ ಮುಖಂಡ
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.