ವಾಣಿಜ್ಯ ಮಳಿಗೆ-ಹೋಟೆಲ್ ಮೇಲೆ ದಿಢೀರ್ ದಾಳಿ
Team Udayavani, Oct 7, 2020, 4:07 PM IST
ಕಲಬುರಗಿ: ದಿನೇ-ದಿನೇ ಹೆಚ್ಚಳವಾಗುತ್ತಿರುವ ಕೋವಿಡ್ ತಡೆಗಟ್ಟಲು ಹಾಗೂ ಮಹಾನಗರದಲ್ಲಿ ಸ್ವಚ್ಛತೆ ಹೆಚ್ಚಿಸಲು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಮಂಗಳವಾರ ಬೆಳಿಗ್ಗೆ ನಗರದಲ್ಲಿ ಮಿಂಚಿನ ಕಾರ್ಯಾಚರಣೆಕೈಗೊಂಡರು.
ವಾಣಿಜ್ಯ ಮಳಿಗೆಗಳಲ್ಲಿ ಹಾಗೂ ರಸ್ತೆ ಬದಿ ಹೋಟೆಲ್ಗಳಲ್ಲಿ ಮತ್ತು ವ್ಯಾಪಾರಿಗಳು ಮಾಸ್ಕ್ ಹಾಕಿಕೊಳ್ಳದೇ ಇದ್ದುದ್ದಕ್ಕೆ ಜತೆಗೆ ಸಾಮಾಜಿಕ ಅಂತರಕಾಪಾಡದಿರುವುದಕ್ಕೆ ಆಯುಕ್ತರು ದಂಡ ವಿಧಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಮಾಸ್ಕ್ ಹಾಕಿಕೊಳ್ಳದವರಿಗೆ, ಸಾಮಾಜಿಕ ಅಂತರ ನಿರ್ಲಕ್ಷಿಸಿದವರಿಗೆ ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳದವರಿಗೆಆಯುಕ್ತರು ತರಾಟೆಗೆ ತೆಗೆದುಕೊಂಡರಲ್ಲದೇ ಇನ್ಮೂಂದೆಯೂ ಹೀಗೆ ಮುಂದುವರೆದಲ್ಲಿ ಪಾಲಿಕೆಯಅನುಮತಿಯೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರಿಗಳು ಹಾಗೂ ಚಹಾದಂಗಡಿಗಳಿಗೆ ಕಸ ಹಾಗೂ ಇತರೆ ತ್ಯಾಜ್ಯ ಹಾಕಲು ಬುಟ್ಟಿಗಳನ್ನು ಸಾಂಕೇತಿಕವಾಗಿ ನೀಡಿದ ಪಾಲಿಕೆ ಆಯುಕ್ತರು, “ನನ್ನ ಕಸ ನನ್ನ ಜವಾಬ್ದಾರಿ ಎಂಬ ಅಭಿಯಾನಕ್ಕೆ ಆಯುಕ್ತರು ಚಾಲನೆ ನೀಡಿದರು.
ಹೊಟೇಲ್, ಬೀದಿ ವ್ಯಾಪಾರಿಯ ಗೂಡಂಗಡಿ ಬಳಿ ಚಹಾ ಕುಡಿದ ಕಪ್ ಗಳು ಎಲ್ಲೆಂದರಲ್ಲಿ ಎಸೆಯಬಾರದು. ಇನ್ಮುಂದೆ ಎಸೆದಲ್ಲಿ ದಂಡ ಹಾಕಲಾಗುವುದು ಎಚ್ಚರಿಕೆ ನೀಡಿದರಲ್ಲದೇ ತ್ಯಾಜ್ಯದಿಂದಲೇ ರೋಗ ರುಜಿನಗಳಿಗೆಕಾರಣವಾಗುತ್ತಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.
ತೆರಿಗೆ ಸಂಗ್ರಹಕ್ಕೆ ಕ್ರಮ: ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಈಗ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ಹಿನ್ನೆಲೆ ಪಾಲಿಕೆ ಸಿಬ್ಬಂದಿಗಳಿಗೆಮೊದಲು ತಮ್ಮ ನಿವಾಸಗಳ ತೆರಿಗೆ ತುಂಬುವಂತೆ ನೊಟೀಸ್ ನೀಡಲಾಗಿದೆ. ಸರ್ಕಾರಿ ಕಚೇರಿಗಳಿಂದಲೂ ಸೇವಾ ತೆರಿಗೆ ತುಂಬುವಂತೆ ಸರ್ಕಾರಿ ಅಂಗ ಸಂಸ್ಥೆಗಳ ಕಚೇರಿಗಳಿಗೂ ಮನವಿ ಮಾಡಲಾಗಿದೆ. ಅದೇ ರೀತಿ ತೆರಿಗೆ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಇದೇ ಸಂದರ್ಭದಲ್ಲಿ ತಿಳಿಸಿದರು.
ಪಾಲಿಕೆಯ ಉಪಆಯುಕ್ತ ಆರ್.ಪಿ. ಜಾಧವ್, ಪಾಲಿಕೆ ಆರೋಗ್ಯಾಧಿಕಾರಿ ಡಾ| ವಿನೋದಕುಮಾರ ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ ಮಹಾನಗರದ ಸ್ವತ್ಛತೆಯಲ್ಲಿ ಜನರು ತಮ್ಮ ಪಾತ್ರ ನಿರ್ವಹಿಸುವ ಕುರಿತಾಗಿ ಜಾಗೃತಿ ಮೂಡಿಸಲು ಮುಂದಾಗಲಾಗಿದೆ. ಪಾಲಿಕೆ ಆದಾಯ ಹೆಚ್ಚಳಕ್ಕೂ ಉದ್ದೇಶಿಸಲಾಗಿದೆ. ಕೋವಿಡ್ ದಿಂದ ಎಲ್ಲದರ ಮೇಲೆ ಹೊಡೆತ ಬಿದ್ದಿದೆ. ಹೀಗಾಗಿ ಮತ್ತೆ ಮೊದಲಿನಂತೆ ಪಾಲಿಕೆ ಆದಾಯ ಬರುವಲ್ಲಿ ಶ್ರಮ ವಹಿಸಬೇಕಿದೆ. ಆಡಳಿತ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. – ಸ್ನೇಹಲ್ ಲೋಖಂಡೆ, ಪಾಲಿಕೆ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.