ತುರ್ತು ಸಹಾಯಕ್ಕೆ 112 ಡಯಲ್‌ ಮಾಡಿ

Team Udayavani, Oct 7, 2020, 5:11 PM IST

dg-tdy-2

ದಾವಣಗೆರೆ: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಲು ಸರಕಾರ ಹೊಸ ತುರ್ತು ಸ್ಪಂದನ ಸಹಾಯ ವ್ಯವಸ್ಥೆ(ಸಹಾಯವಾಣಿ-112)ಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು ಇದಕ್ಕಾಗಿ 13 ತುರ್ತು ಸೇವಾ ವಾಹನಗಳು ಕಾರ್ಯನಿರತವಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತುರ್ತು ಸ್ಪಂದನ ವ್ಯವಸ್ಥೆ ಕುರಿತು ವಿವರಣೆ ನೀಡಿದರು. ಅ. 1ರಿಂದಲೇ ಈ ನೂತನ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. ಈ ವ್ಯವಸ್ಥೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದ್ದು ಇದರಲ್ಲಿ ದಾವಣಗೆರೆ ಜಿಲ್ಲೆಯೂ ಒಂದು ಎಂದರು.

ಪೊಲೀಸ್‌ ನೆರವು, ಅಗ್ನಿಶಾಮಕದಳದ ನೆರವು ಅಥವಾ ಆಂಬ್ಯುಲೆನ್ಸ್‌ ಸೇವೆ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ನೂತನ ಸಹಾಯವಾಣಿ ಸಂಖ್ಯೆ 112ಕ್ಕೆ ಸಾರ್ವಜನಿಕರು ಕರೆ ಮಾಡಿದರೆ ಸಾಕು ಪೊಲೀಸರುರಕ್ಷಣೆ, ಸಹಾಯಕ್ಕೆ (ಇಆರ್‌ಎಸ್‌ಎಸ್‌) ಎಮೆರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಂ ವ್ಯವಸ್ಥೆಯಡಿ ತುರ್ತಾಗಿ ಅಲ್ಲಿಗೆ ತಲುಪಿ ರಕ್ಷಣೆ ಒದಗಿಸಲಾಗುತ್ತದೆ. 112ಕ್ಕೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಿಂದ ಏಕೀಕೃತ ತುರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 15ನಿಮಿಷಗಳಲ್ಲಿಯೇ ಇಆರ್‌ಎಸ್‌ಎಸ್‌ ವಾಹನ ಅಲ್ಲಿಗೆ ತಲುಪಿ, ಸಂಕಷ್ಟದಲ್ಲಿರುವವವರಿಗೆ ತುರ್ತು ನೆರವು ಒದಗಿಸುವ ವ್ಯವಸ್ಥೆ ಇದಾಗಿದೆ ಎಂದರು.

ತುರ್ತು ಸಹಾಯ ಒದಗಿಸುವ ಉದ್ದೇಶಕ್ಕಾಗಿಯೇ ಜಿಲ್ಲೆಗೆ ಆರು ಸ್ಕಾರ್ಪಿಯೋ, ಏಳು ಇನ್ನೋವಾ ಸೇರಿ ಒಟ್ಟು 13ಬೀಟ್‌ ವಾಹನಗಳನ್ನು ಪೂರೈಸಲಾಗಿದೆ. ಇಆರ್‌ಎಸ್‌ಎಸ್‌ ಸೇವೆ ನೀಡುವ ಈ ವಾಹನಕ್ಕೆಹೊಯ್ಸಳ ಎಂದು ಹೆಸರಿಡಲಾಗಿದೆ. ಒಂದು ವಾಹನದಲ್ಲಿ ಒಬ್ಬ ಎಎಸ್‌ಐ, ಒಬ್ಬ ಕಾನ್ಸ್ ಟೇಬಲ್‌ ಹಾಗೂ ವಾಹನ ಚಾಲಕ ಸೇರಿ  ಮೂವರು ಸಿಬ್ಬಂದಿ ಇರುತ್ತಾರೆ. ಸಂರಕ್ಷಣಾ ಸಲಕರಣೆಗಳು ವಾಹನದಲ್ಲಿರುತ್ತವೆ. 24/7 ತುರ್ತು ಸ್ಪಂದನಾ ಕರ್ತವ್ಯಕ್ಕಾಗಿ ಈಗಾಗಲೇ 65 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ, 26 ಚಾಲಕರಿಗೆ ತರಬೇತಿ ನೀಡಲಾಗಿದೆ. ದಿನದ 24ತಾಸು ಪ್ರಾಯೋಗಿಕ ಚಟುವಟಿಕೆ ಪ್ರಾರಂಭಿಸಲಾಗಿದ್ದು ಎರಡು ತಾಸಿಗೊಮ್ಮೆ ಇಆರ್‌ಎಸ್‌ಎಸ್‌ ವಾಹನ ನಿಲುಗಡೆ ಸ್ಥಳ ಬದಲಾಯಿಸಲಾಗುತ್ತದೆ. ಎರಡು ಶಿಫ್ಟ್‌ಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ವ್ಯವಸ್ಥೆ ಆರಂಭಿಸಿದ ಎರಡು ದಿನಗಳಲ್ಲಿಯೇ ಎಂಟು ಪ್ರಕರಣಗಳಿಗೆ ಸ್ಪಂದನ ಸೇವೆ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದರು.

ಇನ್ನು ಮುಂದೆ ಪೊಲೀಸ್‌ ಕಂಟ್ರೋಲ್‌ ರೂಮ್‌ನ 100 ಸಹಾಯವಾಣಿ , ಅಗ್ನಿಶಾಮಕದಳದ 101 ಸಹಾಯವಾಣಿ ಹಾಗೂ ಆರೋಗ್ಯ ಇಲಾಖೆಯ 108 ಸಹಾಯವಾಣಿ 108 ಎಲ್ಲವೂ ನೂತನ ಸಹಾಯವಾಣಿ ಸಂಖ್ಯೆ 112ರಲ್ಲಿ ವಿಲೀನವಾಗಿದೆ. ಯಾವುದೇಸಮಸ್ಯೆ ಇದ್ದರೂ ಸಾರ್ವಜನಿಕರು 112ಕ್ಕೆ ಕರೆ ಮಾಡಬಹುದು. ಅಥವಾ ಕೆಎಸ್‌ಪಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಿಂದಲೂ ಇಲ್ಲವೇ  [email protected]  ಮೂಲಕವೂ ಸಂದೇಶ ರವಾನಿಸಬಹುದಾಗಿದೆ ಎಂದು ತಿಳಿಸಿದರು.

ಪೊಲೀಸ್‌ ಉಪಾಧೀಕ್ಷಕ ಬಸವರಾಜ್‌, ಅಗ್ನಿಶಾಮಕದಳ ಜಿಲ್ಲಾ ನಿರೀಕ್ಷಕ ಬಸವಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.