ಸ್ಯಾನಿಟೈಸರ್‌ ಸುಗಂಧ

Team Udayavani, Oct 7, 2020, 7:40 PM IST

ಸ್ಯಾನಿಟೈಸರ್‌ ಸುಗಂಧ

ಬಹಳ ಜಾಗರೂಕರಾಗಿದ್ದಾರೆ. ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಕೈಗಳನ್ನು ಚೆನ್ನಾಗಿ ತೊಳೆಯುತ್ತಾರೆ. ಸ್ಯಾನಿಟೈಸರ್‌ ಬಳಕೆಯನ್ನೂ ಮಾಡುತ್ತಾರೆ. ಹೆಚ್ಚಿನ ಸ್ಯಾನಿಟೈಸರ್‌ಗಳಲ್ಲಿ ಆಲ್ಕೋಹಾಲ್‌ ಇರುವ ಕಾರಣ, ಕೈಯೆಲ್ಲ ಒಂದು ರೀತಿಯ ವಾಸನೆ ಬರುತ್ತದೆ.

ಅದೇ ಕೈಯಿಂದ ಆಹಾರವನ್ನು ಮುಟ್ಟಲು ಅಥವಾ ಸೇವಿಸಲು ಮನಸ್ಸು ಒಪ್ಪುವುದಿಲ್ಲ. ಇನ್ನೂ ಕೆಲವು ಸ್ಯಾನಿಟೈಸರ್‌ಗಳು ಫಾರ್ಮಲಿನ್‌ ನಂತೆ ವಾಸನೆ ಬೀರುತ್ತವೆ. ಆಗ ಆಸ್ಪತ್ರೆಯಲ್ಲಿರುವಂತೆ ಭಾಸವಾಗುತ್ತದೆ. ಹಾಗಾಗಿ, ಇದೀಗ ಸ್ಯಾನಿಟೈಸರ್‌ ಮತ್ತು ಹ್ಯಾಂಡ್‌ವಾಶ್‌ ತಯಾರಕರು ಸುಗಂಧ ಬಳಸಿ ದುರ್ವಾಸನೆಯನ್ನು ಮರೆಮಾಚುವಲ್ಲಿ ಯಶಸ್ವಿ ಆಗಿದ್ದಾರೆ.

ಗ್ರೀನ್‌ ಆಪಲ್, ಲೆಮನ್‌, ಸ್ಟ್ರಾಬೆರಿ, ಕಿತ್ತಳೆ, ಅನಾನಸು, ಲಿಚ್ಚಿ ಯಂತಹ ಹಣ್ಣುಗಳ ಸುಗಂಧ ಉಳ್ಳ ಹ್ಯಾಂಡ್‌ ವಾಶ್‌ಗಳು ಹಾಗೂ ಸ್ಯಾನಿಟೈಸರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಗುಲಾಬಿ, ಕೇಸರಿ, ಮಲ್ಲಿಗೆ, ಸಂಪಿಗೆ, ಲ್ಯಾವೆಂರ್ಡ, ಆರ್ಕಿಡ್‌ನ‌ಂತ ಹೂವುಗಳ ಸುಗಂಧವನ್ನು ಬಳಸಿಯೂ ಹ್ಯಾಂಡ್‌ವಾಶ್‌ ಮತ್ತು ಸ್ಯಾನಿಟೈಸರ್‌ಗಳನ್ನೂ ತಯಾರಿಸಲಾಗುತ್ತದೆ. ಅಂತೆಯೇ ಚಂದನ, ಗಂಧ, ಮುಂತಾದ ಪರಿಮಳ ಬೀರುವ ಮರಗಳ ಸುಗಂಧಕ್ಕೆ ಹೋಲುವ ಫ್ರೇಗ್ರೇನ್ಸ್ ಬಳಸಿಯೂ ತಯಾರಿಸಲಾದ ಹ್ಯಾಂಡ್‌ವಾಶ್‌ ಮತ್ತು ಸ್ಯಾನಿಟೈಸರ್‌ ಗಳನ್ನು ಜನರು ಉಪಯೋಗಿಸುತ್ತಿದ್ದಾರೆ. ಕೇವಲ ಸುಗಂಧವಷ್ಟೇ ಅಲ್ಲ, ಔಷಧೀಯ ಗುಣಗಳೂ ಇರಬೇಕೆಂದು ಬಯಸುವವರು ಬೇವು (ನೀಂ), ತುಳಸಿ, ಇತ್ಯಾದಿಗಳ ರಸ ಉಳ್ಳ ಆಯುರ್ವೇದೀಯ ಸಾಬೂನು,ಹ್ಯಾಂಡ್‌ವಾಶ್‌ ಹಾಗೂ ಸ್ಯಾನಿಟೈಸರ್‌ಗಳ ಮೊರೆ ಹೋಗಿದ್ದಾರೆ.

ಮಹಿಳೆಯರು ಹೆಚ್ಚಾಗಿ ಒಂದೇ ಬ್ಯಾಗ್‌ ಅನ್ನು ಎಲ್ಲಾ ಕಡೆಯೂ ತೆಗೆದುಕೊಂಡು ಹೋಗುವುದಿಲ್ಲ. ದೊಡ್ಡ ಬ್ಯಾಗ್‌, ಚಿಕ್ಕ ಬ್ಯಾಗ್‌, ಪರ್ಸ್‌, ಕ್ಲಚ್‌, ಹೀಗೆ ಸಂದರ್ಭ ಅಥವಾ ಹೋಗುವ ಜಾಗಕ್ಕೆ ತಕ್ಕಂತೆ, ಕೈಚೀಲಗಳನ್ನು ಬದಲಿಸುತ್ತಾ ಇರುತ್ತಾರೆ. ಹಾಗಿದ್ದಾಗ ಕೆಲವೊಮ್ಮೆ ಸ್ಯಾನಿಟೈಸರ್‌ ಇಟ್ಟುಕೊಳ್ಳುವುದೇ ಮರೆತು ಹೋಗುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು, ಪ್ರತಿ ಬ್ಯಾಗ್‌ನಲ್ಲಿಯೂ ಒಂದೊಂದು ಚಿಕ್ಕ ಸ್ಯಾನಿಟೈಸರ್‌ ಬಾಟಲಿಯನ್ನು ಇಟ್ಟುಕೊಳ್ಳಬಹುದು. ಹೇಗಿದ್ದರೂ ಪಾಕೆಟ್‌ ಸೈಜ್‌ ಸ್ಯಾನಿಟೈಸರ್‌ಗಳು ಮತ್ತು ಹ್ಯಾಂಡ್‌ವಾಶ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಾಗಾಗಿ, ಒಂದೊಂದು ಬ್ಯಾಗ್‌ ನಲ್ಲಿ ಒಂದೊಂದು ಸುಗಂಧದ ಸ್ಯಾನಿ ಟೈಸರ್‌ ಅಥವಾ ಹ್ಯಾಂಡ್‌ ವಾಶ್‌ ಇಟ್ಟು ಕೊಂಡು ಹೋಗಬಹುದು. ಒಂದೇ ಬಗೆಯ ಸುಗಂಧದ ಸ್ಯಾನಿಟೈಸರ್‌ ಬಳಸುವುದು ಬೋರ್‌ ಅನ್ನಿಸಿದರೆ, ಬಗೆಬಗೆಯ ಸುಗಂಧದ ಸ್ಯಾನಿಟೈಸರ್‌ಗಳನ್ನು ಬಳಸಬಹುದು.

– ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

9

Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.