BB Ki Vines : ಯುವ ಮನ ಮೆಚ್ಚುವ ಯೂಟ್ಯೂಬರ್ ಭುವನ್ ಬಾಮ್ ಹಿಂದಿನ ಕಥೆ ಗೊತ್ತಾ?
Team Udayavani, Oct 7, 2020, 8:08 PM IST
ಯೂಟ್ಯೂಬ್. ದಿನವೊಂದಕ್ಕೆ ಸಾವಿರಾರು ಮನರಂಜನೆ,ಮಾಹಿತಿಯನ್ನು ಹೊಂದಾಗಿಸುವ ತಾಣ.ಹಳ್ಳಿಯಿಂದ ದಿಲ್ಲಿಯವರೆಗಿನ ಪ್ರತಿಭೆಗಳಿಗೆ ಯೂಟ್ಯೂಬ್ ಒಂದು ಮಾಧ್ಯಮವಾಗಿ ಲಭ್ಯವಾಗುತ್ತಿದೆ. ಯೂಟ್ಯೂಬ್ ಡಿಜಿಟಲ್ ಯುಗದ ಭವಿಷ್ಯ ಅಂದರೂ ತಪ್ಪು ಆಗದು.
ಯೂಟ್ಯೂಬ್ ಮೂಲಕ ಮಿಂಚಿದವರು ಹಲವಾರು. ದಿನವೊಂದಕ್ಕೆ ನೂರಾರು ಹೊಸ ನಮೂನೆಯ ಚಾನೆಲ್ ಗಳು ಯೂಟ್ಯೂಬ್ ನಲ್ಲಿ ಹುಟ್ಟುತ್ತಲೇ ಇವೆ. ಯುವ ಜನರಲ್ಲಿ ತನ್ನ ಹಾಸ್ಯದ ವಿಶೇಷ ಅಭಿನಯದಿಂದ ಇಂದು ಮಿಲಿಯನ್ ಗಟ್ಟಲೇ ಚಂದಾದಾರರರನ್ನು ಹೊಂದಿರುವ ಯುವಕನೊಬ್ಬನ ಕಥೆಯಿದು.
ಭುವನ್ ಬಾಮ್. ದಿಲ್ಲಿಯಲ್ಲಿ ಬಾಲ್ಯ ಕಳೆದ ಭುವನ್ ಓದಿನಲ್ಲಿ ಅತ್ತ ಪೂರ್ತಿಯಾಗಿ ಆಸಕ್ತಿ ಹೊಂದದ,ಇತ್ತ ಹಾಗೆಯೇ ಕೂರದ ಒಬ್ಬ ಸಾಮಾನ್ಯ ವಿದ್ಯಾರ್ಥಿ. ಅಪ್ಪ ಅಮ್ಮ ಬಾಲ್ಯದಿಂದಲೇ ತಮ್ಮ ಮಗ ಒಳ್ಳೆ ಕೆಲಸ ಪಡೆಯಬೇಕೆನ್ನುವ ಕನಸನ್ನು ಬಿತ್ತರಿಸಿ ಇರುತ್ತಾರೆ. ಆದರೆ ಭುವನ್ ನಲ್ಲಿ ತಾನೊಬ್ಬ ಗಾಯಕನಾಗಬೇಕೆನ್ನುವ ಉಮೇದು ಚಿಗುರೊಡೆದಿರುತ್ತದೆ. ಅಪ್ಪ ಅಮ್ಮನ ಇಚ್ಛೆಯಂತೆ ಹೈಸ್ಕೂಲ್ ವರೆಗೆ ಭುವನ್ ತನ್ನ ಕನಸನ್ನು ಬಚ್ಚಿಟ್ಟುಕೊಂಡು ಕಲಿಯುತ್ತಾರೆ.
ಹತ್ತನೇ ತರಗತಿ ಬಳಿಕ ಕಾಮರ್ಸ್ ನ್ನು ಆಯ್ಕೆ ಮಾಡಿಕೊಂಡು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಕಾಲೇಜಿನ ಮೊದಲ ವರ್ಷದಲ್ಲೇ ದಿಲ್ಲಿಯ ರೆಸ್ಟೋರೆಂಟ್ ವೊಂದರಲ್ಲಿ ಗಾಯಕನಾಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾರೆ. ಮನೆಯಲ್ಲಿ ತಮ್ಮ ಹವ್ಯಾಸಕ್ಕೆ ಸಹಕಾರ ಇಲ್ಲದೆ ಇದಿದ್ದರಿಂದ ಭುವನ್ ಗಿಟಾರ್ ನುಡಿಸುವುದನ್ನು ಸಹ ಯೂಟ್ಯೂಬ್ ಮೂಲಕ ಕಲಿಯುತ್ತಾರೆ. ಅದೊಂದು ದಿನ ಹಾಡು ಹಾಡುತ್ತಾ ಅದನ್ನು ತನ್ನ ಫೇಸ್‌ಬುಕ್ ನಲ್ಲಿ ಭುವನ್ ಹಂಚಿಕೊಳ್ಳುತ್ತಾರೆ. ಅದೃಷ್ಟ ಅಂದರೆ ಭುವನ್ ಅವರ ಆ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ.
ಫಾಕ್ಸ್ ಸ್ಟಾರ್ ಸಂಸ್ಥೆ ಭುವನ್ ಅವರ ಹಾಡನ್ನು ನೋಡಿ ಅವರಿಗೆ ತನ್ನ ಸಂಸ್ಥೆಯಲ್ಲಿ ಹಾಡುವ ಅವಕಾಶ ಕಲ್ಪಿಸುತ್ತದೆ. ಭುವನ್ ಕನಸಿಗೆ ಎರಡು ರೆಕ್ಕೆಯ ಬಲ ಬಂದಂತೆ ಆತ್ಮವಿಶ್ವಾಸದಿಂದ ನಿರಂತರವಾಗಿ ಹತ್ತು ದಿನ ಹಾಡು ಹಾಡುತ್ತಾರೆ. ಆದರೆ ಫಾಕ್ಸ್ ಸ್ಟಾರ್ ಸಂಸ್ಥೆಗೆ ಭುವನ್ ಪ್ರಯತ್ನ ಇಷ್ಟವಾಗುವುದಿಲ್ಲ. ಭುವನ್ ನಿರಾಶರಾಗುತ್ತಾರೆ.ಆದರೆ ಕುಗ್ಗಿ ಹೋಗುವುದಿಲ್ಲ.
ಭುವನ್ ಅದೊಂದು ದಿನ ತನ್ನ ಮೊಬೈಲ್ ನಲ್ಲಿ ಸೆಲ್ಫಿ ವಿಡಿಯೋ ತರಹದ ವಿಡಿಯೋ ಮಾಡಿ ಅದನ್ನು ‘BB Ki Vines’ ಎಂದು ನಾಮಾಕರಣ ಮಾಡಿದ ಯೂಟ್ಯೂಬ್ ಚಾನೆಲ್ ನಲ್ಲಿ ಆಪ್ಲೋಡ್ ಮಾಡುತ್ತಾರೆ. ಸತತವಾಗಿ ನಾಲ್ಕು ವಿಡಿಯೋ ಗಳನ್ನು ಆಪ್ಲೋಡ್ ಮಾಡುತ್ತಾರೆ. ಭುವನ್ ಸ್ನೇಹಿತರೆಲ್ಲಾ ಇದನ್ನು ನೋಡಿ ಸಮಯ ವ್ಯರ್ಥ ಮಾಡುತ್ತಿದ್ದೀಯಾ ಎಂದು ಹೇಳುತ್ತಾರೆ. ಆದರೆ ಭುವನ್ ಮಾತ್ರ ಅದು ಯಾವುದನ್ನು ತಲೆಗೆ ಹಾಕಿಕೊಳ್ಳದೆ ಸುಮ್ಮನೆ ಇರುತ್ತಾರೆ.
ಭುವನ್ ಮಾಡಿದ ವಿಡಿಯೋ ಗಳಲ್ಲಿ ಒಂದು ವಿಡಿಯೋ ಪಾಕಿಸ್ತಾನದ ಯಾವುದೋ ಒಂದು ವಿಶ್ವವಿದ್ಯಾಲಯದಲ್ಲಿ ವೈರಲ್ ಆಗುತ್ತದೆ. ಒಂದೇ ದಿನದಲ್ಲಿ 50 ಸಾವಿರ ವೀಕ್ಷಣೆ ಪಡೆದುಕೊಳ್ಳುತ್ತದೆ. ಇದು ಭುವನ್ ಅವರನ್ನು ನಿಧಾನವಾಗಿ ಜನಮನ್ನಣೆಗೆ ಬರುವಂತೆ ಮಾಡುತ್ತದೆ.
ನಿಧಾನವಾಗಿ ಭುವನ್ ಬಾಮ್ ಯೂಟ್ಯೂಬ್ ಚಾನೆಲ್ ನಲ್ಲಿ ಸಬ್ ಸ್ಕ್ರೈಬರ್ಸ್ ಬರಲು ಶುರು ಆಗುತ್ತದೆ.
ಭಾರತದಲ್ಲಿ ಮೊಬೈಲ್ ಮುಂದೆ ಇಟ್ಟು ಒಂಟಿಯಾಗಿ ಹಾಸ್ಯಾಸ್ಪದವಾಗಿ ವಿಚಾರಗಳನ್ನು ಹಂಚಿಕೊಳ್ಳುವ ಹೊಸ ಬಗೆಯ ಪ್ರಯೋಗಗಳನ್ನು ಮನರಂಜನೆಯೊಂದಿಗೆ ಜನ ಒಪ್ಪಿಕೊಳ್ಳುತ್ತಾರೆ. 2015 ರಲ್ಲಿ ಆರಂಭಿಸಿದ ಭುವನ್ ಅವರ ‘BB KI VINES ‘ಚಾನೆಲ್ ನೋಡು ನೋಡುತ್ತಿದ್ದಂತೆ ಲಕ್ಷಾಂತರ ಜನರ ಮನವನ್ನು ತಲುಪುತ್ತದೆ. ಮುಖ್ಯವಾಗಿ ಯುವ ಜನರನ್ನು. ಏಕೆಂದರೆ ಭುವನ್ ಬಳಸುವ ಭಾಷಾ ಪ್ರಯೋಗ ವಯಸ್ಕರಿಗೆ ಸಂಬಂಧಿಸಿದ್ದಾಗಿರುತ್ತದೆ. ಭುವನ್ ತುಂಬಾ ಬೇಗನೇ ಜನಪ್ರಿಯರಾಗುತ್ತಾರೆ. ವೈಯಕ್ತಿಕವಾಗಿ ಅತೀ ಹೆಚ್ಚು ಚಂದಾದಾರರನ್ನು ಪಡೆದವರಲ್ಲಿ ಭುವನ್ ಮೊದಲಿಗರಾಗುತ್ತಾರೆ.
ಭುವನ್ ಇಂದು ಹಾಡುಗಳನ್ನು ಬರೆಯುತ್ತಾರೆ. ಹಾಡುತ್ತಾರೆ. ಕಿರುಚಿತ್ರ,ಚಿತ್ರಗಳಲ್ಲಿ ನಟಿಸುತ್ತಾರೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಇಂದು ಭುವನ್ ಹಾಕುವ ವಿಡಿಯೋಗಳು ಬರೀ ನಿಮಿಷಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ ಆಗುತ್ತದೆ.
ಭುವನ್ ಚಾನೆಲ್ ನಲ್ಲಿ ಬರೋಬ್ಬರಿ 19.3 ಮಿಲಿಯನ್ ಸಬ್ ಸ್ಕ್ರೈಬರ್ಸ್ ಇದ್ದು ಇದುವರೆಗೆ ಭುವನ್ ತಮ್ಮ ಚಾನೆಲ್ ನಲ್ಲಿ 167 ವಿಡಿಯೋಗಳನ್ನು ಆಪ್ಲೋಡ್ ಮಾಡಿದ್ದಾರೆ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.