![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 8, 2020, 7:18 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಕೋವಿಡ್ 19 ವೈರಸ್ ಈಗ ನೇತ್ರದಾನದ ಮೇಲೂ ವಕ್ರದೃಷ್ಟಿ ಬೀರಿದೆ.
ಪರಿಣಾಮ ಈ ಸಾಲಿನಲ್ಲಿ ರಾಜ್ಯದಲ್ಲಿ ಆಗಿರುವುದು ಕೇವಲ 90 ನೇತ್ರದಾನಗಳಷ್ಟೆ.
ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ನೇತ್ರದಾನ ಪ್ರಮಾಣ ಶೇ.98ರಷ್ಟು ಕುಸಿದಿದ್ದು, ಇದು ಈವರೆಗಿನ ಕನಿಷ್ಠ ದಾಖಲೆಯೂ ಆಗಿದೆ.
ಪ್ರತೀ ವರ್ಷ ರಾಜ್ಯದಲ್ಲಿ ಸರಾಸರಿ 5,000 ನೇತ್ರದಾನಗಳಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ಸರಾಸರಿ 5,300 ನೇತ್ರದಾನಗಳಾಗಿವೆ.
ಈ ವರ್ಷ ಕೋವಿಡ್ 19 ಹಿನ್ನೆಲೆಯಲ್ಲಿ “ಆಸ್ಪತ್ರೆಯಲ್ಲಿ ದಾಖಲಾಗಿ ಕೋವಿಡೇತರ ಕಾರಣಕ್ಕೆ ಮೃತಪಟ್ಟವರಿಂದ ಮಾತ್ರ ನೇತ್ರದಾನ ಪಡೆಯಬೇಕು’ ಎಂಬ ನಿಯಮವನ್ನು ಕೇಂದ್ರ ಆರೋಗ್ಯ ಇಲಾಖೆಯು ಜಾರಿಗೊಳಿಸಿತ್ತು.
ಪರೀಕ್ಷೆಗೆ ಸಮಯವಿಲ್ಲ
ಮೃತಪಟ್ಟವರಿಂದ 6 ಗಂಟೆಗಳಲ್ಲೇ ಕಣ್ಣನ್ನು ಸಂಗ್ರಹಿಸಬೇಕಿದ್ದು, ಕೋವಿಡ್ 19 (ಆರ್‌ಟಿಪಿಸಿಆರ್) ಪರೀಕ್ಷೆ ನಡೆಸಿ ಸೋಂಕನ್ನು ಖಚಿತಪಡಿಸಿಕೊಳ್ಳಲು ಸಮಯ ಇರುವುದಿಲ್ಲ. ಹೀಗಾಗಿ ಮನೆಯಿಂದ ನೇತ್ರ ಸಂಗ್ರಹಕ್ಕೆ ತಡೆಯೊಡ್ಡಲಾಗಿದೆ ಎಂದು ಆರೋಗ್ಯ ಇಲಾಖೆ ನೇತ್ರ ವಿಭಾಗದ ಹಿರಿಯ ವೈದ್ಯಾಧಿಕಾರಿ ಡಾ| ಜಿ.ಎನ್. ರಜನಿ ತಿಳಿಸುತ್ತಾರೆ.
ಮನೆಯಿಂದಲೇ ಸಂಗ್ರಹ ಹೆಚ್ಚು
ರಾಜ್ಯದಲ್ಲಿ ಲಕ್ಷಾಂತರ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದು, ಅಂಥವರು ಮನೆಯಲ್ಲೇ ಮೃತಪಟ್ಟಾಗ ಆರೋಗ್ಯ ಸಿಬಂದಿ ಸ್ಥಳಕ್ಕೆ ತೆರಳಿ ನೇತ್ರವನ್ನು ಸಂಗ್ರಹಿಸುತ್ತಾರೆ. ರಾಜ್ಯದಲ್ಲಿ ಶೇ.90ಕ್ಕೂ ಅಧಿಕ ನೇತ್ರ ದಾನಗಳು ಈ ರೀತಿಯಾಗಿದ್ದವು.
ಇಂದು ವಿಶ್ವ ದೃಷ್ಟಿ ದಿನ
ದೃಷ್ಟಿ ಬಗ್ಗೆ ಅರಿವು ಮೂಡಿ ಸಲು ವಿಶ್ವಾದ್ಯಂತ ಅಕ್ಟೋಬರ್ 2ನೇ ಗುರುವಾರವನ್ನು ದೃಷ್ಟಿ ದಿನವಾಗಿ ಆಚರಿಸಲಾಗುತ್ತದೆ. ಈ ಬಾರಿಯ ಘೋಷ ವಾಕ್ಯವು ‘ದೃಷ್ಟಿಯಲ್ಲಿ ನಂಬಿಕೆ’ ಎಂಬುದಾಗಿದೆ. ದೇಶದಲ್ಲಿ 1.5 ಕೋಟಿ ಅಂಧರಿದ್ದು, ಈ ಪೈಕಿ ಕಾರ್ನಿಯ ಅಂಧತ್ವ ಪ್ರಮಾಣ ಶೇ.25ರಷ್ಟಿದೆ. ಭಾರತಕ್ಕೆ ಪ್ರತಿ ವರ್ಷ 2 ಲಕ್ಷ ನೇತ್ರದಾನಿಗಳ ಅಗತ್ಯವಿದೆ.
– ಜಯಪ್ರಕಾಶ್ ಬಿರಾದಾರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
You seem to have an Ad Blocker on.
To continue reading, please turn it off or whitelist Udayavani.