ಫ್ರೆಂಚ್ ಓಪನ್ ಟೆನಿಸ್: ಉಪಾಂತ್ಯಕ್ಕೇರಿದ ಜೊಕೊ, ಸಿಸಿಪಸ್
Team Udayavani, Oct 8, 2020, 8:13 PM IST
ಪ್ಯಾರಿಸ್: ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ ಟೆನಿಸ್ನ ಉಪಾಂತ್ಯಕ್ಕೇರಿದ್ದಾರೆ. ಅವರೊಂದಿಗೆ ಸ್ಟೆಫಾನಸ್ ಸಿಸಿಪಸ್ ಕೂಡಾ ಮುಂದಿನ ಸುತ್ತಿಗೇರಿದ್ದಾರೆ. ಇವರಿಬ್ಬರ ನಡುವೆ ಉಪಾಂತ್ಯದಲ್ಲಿ ಹೋರಾಟ ನಡೆಯಲಿದೆ. ಆವೆ ಅಂಗಣದ ಮಾಸ್ಟರ್ ರಫೆಲ್ ನಡಾಲ್, ಇನ್ನೊಂದು ಉಪಾಂತ್ಯದಲ್ಲಿ ಡಿಯೊಗೆ ಸ್ವಾಜ್ಮನ್ರನ್ನು ಎದುರಿಸಲಿದ್ದಾರೆ.
ಬುಧವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಪುರುಷರ ಸಿಂಗಲ್ಸ್ನ ವಿಶ್ವ ನಂ.1 ಆಟಗಾರ ಜೊಕೊವಿಕ್, ಪ್ಯಾಬ್ಲೊ ಕರೆನೊ ಬುಸ್ಟರಿಂದ ಪೈಪೋಟಿ ಎದುರಿಸಿದರು. ಆದರೆ ಗೆಲುವನ್ನು ಬಿಟ್ಟುಕೊಡಲಿಲ್ಲ. ಮೊದಲ ಸೆಟ್ ಅನ್ನು ಜೊಕೊ ಕಳೆದುಕೊಂಡರು. ಮುಂದಿನ ಮೂರು ಸೆಟ್ಗಳನ್ನು ಸತತವಾಗಿ ಗೆದ್ದ ಜೊಕೊ ಯುಎಸ್ ಓಪನ್ ನೋವನ್ನು ಮರೆತರು. ಪ್ಯಾಬ್ಲೊ ವಿರುದ್ಧ ಜೊಕೊ ಗೆಲುವಿನ ಅಂತರ 4 -6, 6-2, 6-3, 6-4.
ಯುಎಸ್ ಓಪನ್ನಲ್ಲಿ ಇದೇ ಆಟಗಾರನ ವಿರುದ್ಧದ ಪಂದ್ಯದಲ್ಲಿ 1 ಸೆಟ್ ಮಾತ್ರ ಆಡಿದ್ದ ಜೊಕೊ, ಆ ಪಂದ್ಯವನ್ನು ಬಿಟ್ಟುಕೊಟ್ಟು, ಕೂಟದಿಂದ ಅನಿವಾರ್ಯವಾಗಿ ಹೊರ ನಡೆದಿದ್ದರು. ಆ ಸೆಟ್ನಲ್ಲಿ ಹಿನ್ನಡೆ ಸಾಧಿಸಿದ ಸಿಟ್ಟಲ್ಲಿ, ಕೈಯಲ್ಲಿದ್ದ ಚೆಂಡನ್ನು ತುಸು ನಿರ್ಲಕ್ಷ್ಯದಿಂದ ಹಿಂದಕ್ಕೆ ಎಸೆದ ವೇಳೆ ಚೆಂಡು ತೀರ್ಪುಗಾರ್ತಿಗೆ ಬಡಿಯಿತು. ನಿಯಮಾವಳಿಗಳ ಪ್ರಕಾರ ಜೊಕೊ ಕೂಟದಿಂದ ಹೊರ ನಡೆಯಬೇಕಾಯಿತು.
ಸಿಸಿಪಸ್ ಸೆಮೀಸ್ಗೆ
ಪುರುಷರ ಸಿಂಗಲ್ಸ್ನ ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಸ್ಟೆಫನಸ್ ಸಿಸಿಪಸ್ ಅವರು 7-5, 6-2, 6-3ರಿಂದ ಆಂಡ್ರೆ ರಬ್ಲೆವ್ರನ್ನು ಸೋಲಿಸಿ, ಕೂಟದಿಂದ ಹೊರಗಟ್ಟಿದರು. ಸಿಸಿಪಸ್ ಉಪಾಂತ್ಯದಲ್ಲಿ ನೊವಾಕ್ ಜೊಕೊವಿಕ್ರಂತಹ ಪ್ರಬಲ ಸ್ಪರ್ಧಿಯನ್ನು ಎದುರಿಸಬೇಕಾಗಿದೆ. ಇದು ಅವರಿಗೆ ಒಂದು ಅವಕಾಶವೂ ಹೌದು. ಇಲ್ಲಿ ಯಶಸ್ವಿಯಾಗಿ, ಅಂತಿಮಹಂತಕ್ಕೇರಿದರೆ ಭವಿಷ್ಯದ ತಾರೆಯಾಗಿ ಹೊರಹೊಮ್ಮಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.