ಕೋವಿಡ್ ಗೆ ದಂಗು ಬಡಿದ ಜವಳಿ ಉದ್ಯಮ
ಸಗಟು-ಚಿಲ್ಲರೆ ವ್ಯಾಪಾರ ಸೇರಿ ಸುಮಾರು 300 ಕೋಟಿ ರೂ. ನಷ್ಟ | ಶೇ.30-40 ಉದ್ಯೋಗ ಕಡಿತ
Team Udayavani, Oct 9, 2020, 4:43 PM IST
ಹುಬ್ಬಳ್ಳಿ: ಅತಿವೃಷ್ಟಿ, ಜಿಎಸ್‌ಟಿ ಹಾಗೂ ನೋಟ್ ಬ್ಯಾನ್ ಹೊಡೆತದಿಂದ ಬಸವಳಿದಿದ್ದ ಜವಳಿ ಉದ್ಯಮಕ್ಕೆ ಕೋವಿಡ್ ದೊಡ್ಡ ಆಘಾತವೇ ತಂದೊಡ್ಡಿದೆ.ವರ್ಷದ ಶೇ.40 ವ್ಯಾಪಾರು-ವಹಿವಾಟು ಆಗುತ್ತಿದ್ದ ಸಮಯದಲ್ಲೇ ಕೋವಿಡ್ ಒಕ್ಕರಿಸಿಕೊಂಡು ಇಡೀ ಉದ್ಯಮಕ್ಕೆ ಬರಸಿಡಿಲು ಅಪ್ಪಳಿಸಿದಂತಾಗಿದೆ.
ಅದೆಷ್ಟೋ ಅಂಗಡಿಗಳು ಶಾಶ್ವತವಾಗಿ ಬೀಗ ಹಾಕಿದ್ದು, ಉದ್ಯೋಗ ಕಡಿತಗೊಂಡಿವೆ. ತಲತಲಾಂತರದಿಂದ ಈ ಉದ್ಯಮದಲ್ಲಿರುವವರು ಮಾತ್ರ ಕೊಂಚ ಸಾವರಿಸಿಕೊಂಡು ಉಳಿದಿದ್ದಾರೆ. ಉದ್ಯೋಗ ಸೃಷ್ಟಿಸುವಂತಹ ಹಲವು ಉದ್ಯಮಗಳ ಪೈಕಿ ಒಂದಾಗಿರುವ ಜವಳಿ ಕ್ಷೇತ್ರ ಸದ್ಯಕ್ಕೆ ಚೇತರಿಸಿಕೊಳ್ಳದಂಥ ಸ್ಥಿತಿಗೆ ತಲುಪಿದೆ. ಬಂಡವಾಳ ಹೂಡಿಕೆ ಮಾಡಿದ ಉದ್ಯಮಿಗಳು ತಲೆ ಮೇಲೆ ಕೈಹೊತ್ತು ಕೂರುವಂತಾದರೆ ಇದೇ ಕ್ಷೇತ್ರದಲ್ಲಿ ಉದ್ಯೋಗ ನೆಚ್ಚಿಕೊಂಡವರು ನಿರುದ್ಯೋಗಿಗಳಾಗಿದ್ದಾರೆ. ಜವಳಿ ಉದ್ಯಮ ಯಥಾಸ್ಥಿತಿಗೆ ಬರಲು ಎರಡು ವರ್ಷಗಳು ಬೇಕಾಗಬಹುದೆಂಬುದು ಜವಳಿ ಉದ್ಯಮ ವಲಯದ ಅನಿಸಿಕೆ.
ಸುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿ ಜವಳಿ ಉದ್ಯಮಕ್ಕೂ ಹೆಸರುವಾಸಿ. ಮಹಾನಗರ ವ್ಯಾಪ್ತಿಯೊಂದರಲ್ಲೇ 250 ಚಿಲ್ಲರೆ ಹಾಗೂ 150 ಸಗಟು ವ್ಯಾಪಾರದ ಅಂಗಡಿಗಳಿವೆ. ಲಾಕ್‌ಡೌನ್ ಪರಿಣಾಮ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯೊಂದರಲ್ಲೇ ಸಗಟು ಹಾಗೂ ಚಿಲ್ಲರೆ ವ್ಯಾಪಾರ ಸೇರಿ ಸುಮಾರು 300 ಕೋಟಿ ರೂ. ವ್ಯಾಪಾರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಮುಖ ಅವಧಿಯಲ್ಲೇ ಕುಸಿತ: ವರ್ಷದ ಶೇ.40 ವ್ಯಾಪಾರು- ವಹಿವಾಟು ಆಗುವುದು ಮಾರ್ಚ್ ತಿಂಗಳಿಂದ ಜೂನ್15ರವರೆಗೆ. ಆದರೆ ವ್ಯಾಪಾರು-ವಹಿವಾಟುನಡೆಯಬೇಕಿದ್ದ ಸಂದರ್ಭದಲ್ಲೇ ಲಾಕ್‌ಡೌನ್‌ಘೋಷಣೆಯಾಗಿದ್ದರಿಂದ ದೊಡ್ಡ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ. ಮದುವೆ ಸಮಾರಂಭಗಳಿಗೆ ನಿಯಂತ್ರಣ ಹೇರಿದ್ದರಿಂದ ಅದ್ಧೂರಿತನ ಇಲ್ಲದಂತಾಗಿದೆ. ಒಂದು ಸಣ್ಣ ಮದುವೆಯೆಂದರೂ ಕನಿಷ್ಠ 1ಲಕ್ಷದ ರೂ. ಮೌಲ್ಯದ ಬಟ್ಟೆಗಳನ್ನುಖರೀದಿಸಲಾಗುತ್ತಿತ್ತು. ಇನ್ನು ಮಧ್ಯಮ ಹಾಗೂಸ್ಥಿತವಂತರ ಕುಟುಂಬದ ಮದುವೆಯ ಜವಳಿ ಲೆಕ್ಕ ಇರಲ್ಲ. ಆದರೆ ಲಾಕೌಡೌನ್‌ನಿಂದ ಶೇ.5ರಿಂದ 10 ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ವಿನಃ ಆಗಬೇಕಿದ್ದ ಮದುವೆ, ಶುಭ ಸಮಾರಂಭಗಳು ಸರಳವಾಗಿ ನಡೆದಿವೆ. ಮುಸ್ಲಿಂ ಸಮುದಾಯದ ದೊಡ್ಡ ಹಬ್ಬ ರಂಜಾನ್‌ನಲ್ಲೂ ಕೂಡ ಈ ಬಾರಿ ಜವಳಿ ವಹಿ ವಾಟು ನಡೆಯದ್ದ ರಿಂದ ಶೇ.40 ವ್ಯಾಪಾರ ಶೂನ್ಯಕ್ಕೆ ಬಂದು ತಲುಪಿದೆ.
ಉದ್ಯಮ, ಉದ್ಯೋಗ ತೊರೆದಿದ್ದಾರೆ: ಮದುವೆಸೀಸನ್‌ನಲ್ಲಿ ಭರ್ಜರಿ ವ್ಯಾಪಾರ ಮಾಡುವ ಗುರಿಯಿಂದ ಹೊಸದಾಗಿ ಅಂಗಡಿಗಳನ್ನು ಬಾಡಿಗೆ ಪಡೆದು ಬಂಡವಾಳ ಹಾಕಿದವರು ಈ ಉದ್ಯಮವನ್ನೇ ತೊರೆದಿದ್ದಾರೆ. ಹಾಕಿರುವ ಬಂಡವಾಳಕ್ಕೆ ಬಡ್ಡಿಕಟ್ಟಲಾಗದೆ ದಾಜಿಬಾನ ಪೇಟೆ ರಸ್ತೆಯಲ್ಲಿ ಮೂರುಅಂಗಡಿಗಳು ಶಾಶ್ವತವಾಗಿ ಬಾಗಿಲು ಹಾಕಿವೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಉದ್ಯೋಗದ ಕ್ಷೇತ್ರವಾಗಿದ್ದ ಜವಳಿ ಉದ್ಯಮದಲ್ಲೂಶೇ.30-40 ಉದ್ಯೋಗ ಕಡಿತವಾಗಿದೆ. ಸ್ವಂತ ಕಟ್ಟಡ ಹಾಗೂ ತಲಾತಲಾಂತರದಿಂದ ಈ ಉದ್ಯಮದಲ್ಲಿ ತೊಡಗಿದವರು ಮಾತ್ರ ಕೊರೊನಾಘಾತ ತಡೆದುಕೊಂಡಿದ್ದಾರೆ.
ದೀಪಾವಳಿ ಕೈ ಹಿಡಿಯುತ್ತಾ?: ಪ್ರಮುಖ ಸೀಸನ್ ಕೈ ತಪ್ಪಿ ಹೋಗಿರುವಾಗ ಜವಳಿ ಉದ್ಯಮ ದೀಪಾವಳಿ ಹಬ್ಬದ ಸಡಗರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಪ್ರತಿ ವರ್ಷ ಈ ಹಬ್ಬದ ಸಂದರ್ಭದಲ್ಲಿ ಕನಿಷ್ಠ ಶೇ.20-25 ವ್ಯಾಪಾರ ಈ ಬಾರಿ ಆಗುತ್ತಾ ಎನ್ನುವ ನಿರೀಕ್ಷೆಯೊಂದಿಗೆ ಆತಂಕವೂ ಇದೆ. ಲಾಕ್‌ಡೌನ್ ಅನ್‌ಲಾಕ್ ಆಗಿದ್ದರೂ ಕೂಡ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಅಗತ್ಯ ಕಾರ್ಯಗಳಿಗೆ ಹಣ ಕೂಡಿಡಬೇಕು, ಮುಂದಿನ ಬಾರಿ ಬಟ್ಟೆ ಕೊಂಡುಕೊಳ್ಳೋಣ ಎನ್ನುವ ಮನಸ್ಥಿತಿಗೆ ಜನರು ಬಂದಿದ್ದಾರೆಂಬುದು ವ್ಯಾಪಾರಿಗಳ ಅಭಿಪ್ರಾಯ.
ಪೂರೈಕೆಯಲ್ಲಿ ವ್ಯತ್ಯಯ: ಕೋವಿಡ್ ಲಾಕ್‌ಡೌನ್ ನಿಂದ ಉತ್ಪಾದನಾ ಘಟಕಗಳಲ್ಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಹೀಗಾಗಿ ಉತ್ಪಾದನಾ ಪ್ರಮಾಣವೂ ಕುಸಿದಿದೆ. ಹೊಸ ಮಾದರಿಯ ಬಟ್ಟೆಗಳಿಗೆ ಉತ್ಪನ್ನಕ್ಕೆ ಕಂಪನಿಗಳು ಮುಂದಾಗಿವೆಯಾದರೂ ಅವುಗಳನ್ನು ಕೊಂಡುಕೊಳ್ಳವ ಶಕ್ತಿ ಸಗಟು ವ್ಯಾಪಾರಿಗಳಿಗೆ ಇಲ್ಲದಂತಾಗಿದೆ. ಇನ್ನು ಕಂಪನಿಗಳಿಗೆ ತೆರಳಿ ಬಟ್ಟೆಯ ಗುಣಮಟ್ಟ ಪರೀಕ್ಷಿಸಿ ಖರೀದಿ ಮಾಡಲು ಅಲ್ಲಿಗೆ ತೆರಳಲು ವ್ಯಾಪಾರಿಗಳು ಸೋಂಕಿನ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಮುಂಬಯಿ, ವಾರಾಣಸಿ, ಸೂರತ್, ಬೆಂಗಳೂರು, ಕೋಯಿಮತ್ತೂರು,ಇಂಧೋರ್ ಸೇರಿದಂತೆ ಕೆಲ ಪ್ರಮುಖ ನಗರಗಳು ಜವಳಿ ಉದ್ಯಮದ ಪ್ರಮುಖ ಸ್ಥಳಗಳಾಗಿವೆ. ಆದರೆ ಆ ನಗರಗಳಲ್ಲಿ ಸೋಂಕಿತರ ಪ್ರಮಾಣಹೆಚ್ಚಿರುವುದರಿಂದ ಅಲ್ಲಿಗೆ ಹೋಗಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ವ್ಯಾಪಾರದ ಉತ್ತಂಗದ ಸಮಯದಲ್ಲೇ ಲಾಕ್‌ಡೌನ್ ಆಗಿರುವುದರಿಂದ ಜವಳಿ ಉದ್ಯಮ ಸಂಪೂರ್ಣ ನೆಲಕಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದೇ ಸಮಯವನ್ನೇ ನೆಚ್ಚಿಕೊಂಡು ಹಾಕಿದ ಬಂಡವಾಳ ವ್ಯರ್ಥ್ಯವಾದಂತಾಗಿದೆ. ಅದರ ಬಂಡವಾಳ ದುಡಿಯದ ಪರಿಣಾಮ ಬಡ್ಡಿ, ಉದ್ಯೋಗಿಗಳ ವೇತನ ಎಲ್ಲವೂ ವ್ಯಾಪಾರಿಗಳ ಮೈ ಮೇಲೆ ಬಂದಿದೆ. ಸ್ವಂತ ಕಟ್ಟಡ, ಹಲವುವರ್ಷಗಳಿಂದಈ ಉದ್ಯಮದಲ್ಲಿದ್ದವರು ಕೊಂಚ ಉಳಿದುಕೊಂಡಿದ್ದಾರೆ. ಈ ಪರಿಸ್ಥಿತಿ ಸುಧಾರಿಸಿಕೊಳ್ಳಲು ಕನಿಷ್ಠ ಎರಡು ವರ್ಷಗಳೇ ಬೇಕಾಗುತ್ತದೆ. -ಅಜಿತ ಜವಳಿ, ಜವಳಿ ಉದ್ಯಮಿ
ಕಳೆದ ಆರೇಳು ತಿಂಗಳಿಂದ ಮಾರುಕಟ್ಟೆ ಮತ್ತು ವ್ಯಾಪಾರಿಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೊಸ ಬಟ್ಟೆಗಳು ತಯಾರಾಗಿದ್ದರೂಅವುಗಳನ್ನು ಪರೀಕ್ಷಿಸದೆ ಇಲ್ಲೇ ಕುಳಿತು ಖರೀದಿಸುವ ಧೈರ್ಯವಿಲ್ಲ. ಇನ್ನೂ ಅಲ್ಲಿಗೆ ಹೋಗೋಣವೆಂದರೆ ಕೊರೊನಾ ಸೋಂಕಿನ ಭೀತಿ. ಉತ್ಪಾದನಾ ಘಟಕಗಳಲ್ಲಿ ಕಾರ್ಮಿಕರ ಕೊರತೆಯಿಂದ ಉತ್ಪನ್ನವೂ ಕಡಿಮೆಯಾಗಿದೆ.ಮುಂದಿನ ಸೀಸನ್ ಮೇಲೆ ನಮ್ಮ ಭರವಸೆಯಿದೆ. ಅನ್‌ಲಾಕ್ ಇದ್ದರೂ ಜನರು ಬಟ್ಟೆ ಖರೀದಿಗೆ ಆಸಕ್ತಿ ತೋರುತ್ತಿಲ್ಲ. – ಅಶೋಕ ಭಂಡಾರಿ, ಜವಳಿ ಉದ್ಯಮಿ
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.