ಸಣ್ಣ ನೀರಾವರಿ ಗಣತಿಗೆ ಸಹಕರಿಸಿ: ಕಂಬಾಳಿಮಠ
Team Udayavani, Oct 9, 2020, 5:14 PM IST
ಗಜೇಂದ್ರಗಡ: ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಸಣ್ಣ ನೀರಾವರಿ ಅಂಕಿ ಅಂಶಗಳ ಸಮನ್ವಯೀಕರಣ ಯೋಜನೆ ಅಡಿಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆಸಣ್ಣ ನೀರಾವರಿ ಗಣತಿ ಕೈಗೊಳ್ಳಲಾಗುತ್ತದೆ. ಈ ವರ್ಷದಲ್ಲಿ ನಡೆಯುವ ಆ ಗಣತಿಗೆ ಸಾರ್ವಜನಿಕರು,ರೈತರು ಸಹಕರಿಸಬೇಕು. ಜೊತೆಗೆ ಅಧಿ ಕಾರಿಗಳುಸಮರ್ಪಕ ಮಾಹಿತಿ ಕಲೆಹಾಕಬೇಕಿದೆ ಎಂದು ಜಿಲ್ಲಾಸಂಖ್ಯಾ ಸಂಗ್ರಹಣಾಧಿ ಕಾರಿ ಎ.ಎ. ಕಂಬಾಳಿಮಠ ಹೇಳಿದರು.
ಪುರಸಭೆ ಸಭಾ ಭವನದಲ್ಲಿ ಜಿಲ್ಲಾ ಸಣ್ಣ ನೀರಾವರಿ ಇಲಾಖೆಯಿಂದ ಗಜೇಂದ್ರಗಡ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳಿಗಾಗಿ ಗುರುವಾರ ನಡೆದ 6ನೇ ಸಣ್ಣನೀರಾವರಿ ಗಣತಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈಗಾಗಲೇ ಜಗತ್ತಿನಲ್ಲಿಎರಡು ಮಹಾಯುದ್ಧಗಳು ನಡೆದಿವೆ. ಇನ್ನೇನಾದರೂ ಮೂರನೇ ಮಹಾಯುದ್ಧ ನಡೆದರೆ, ಅದು ಜಲಮೂಲಗಳಿಗಾಗಿಯೇ ನಡೆಯಬಹುದು. ಅಷ್ಟರಮಟ್ಟಿಗೆ ಜಲ ಮೂಲಗಳು ಕ್ಷೀಣಿಸುವ ಹಂತದಲ್ಲಿವೆ. ಇದನ್ನು ಸಂರಕ್ಷಣೆ ಮತ್ತು ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಗಣತಿ ಮಾಡಲಾಗುತ್ತದೆ.
0-200 ಹೆಕ್ಟೇರ್ ಅಚ್ಚುಕಟ್ಟು ಎಲ್ಲ ನೀರಾವರಿ ಯೋಜನೆಗಳು ಸಣ್ಣ ನೀರಾವರಿ ಯೋಜನೆಗಳೆಂದು ಪರಿಗಣಿಸಿದ್ದು, ಅಂತರ್ಜಲ ಯೋಜನೆಗಳು ಹಾಗೂ ಮೇಲ್ಮೈ ಹರಿಯುವ ಜಲ ಯೋಜನೆಗಳು ಎಂದುವಿಧಗಳಾಗಿ ವರ್ಗೀಕರಿಸಲಾಗಿದೆ. ಅಂತರ್ಜಲ ಯೋಜನೆಗಳಡಿ ಅಗೆದ ಬಾವಿ, ಕೊಳವೆ ಬಾವಿಗಳು ನಮೂನೆ 1ರಲ್ಲಿ ಹಾಗೂ ಮೇಲ್ಮೈ ಹರಿಯುವ ಜಲ ಯೋಜನೆಗಳಡಿ ಏತ ನೀರಾವರಿ ಯೋಜನೆಗಳನ್ನು ನಮೂನೆ 2ರಲ್ಲಿ ಭರ್ತಿ ಮಾಡಿ ಗಣತಿ ಕಾರ್ಯ ಕೈಗೊಂಡು ಮಾಹಿತಿ ಸಂಗ್ರಹಿಸಬೇಕು ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.
ಸಹಾಯಕ ಸಾಂಕಿಕ ಅಧಿಕಾರಿ ಟಿ.ಎಸ್. ಬೆಳ್ಳಟ್ಟಿ ಮಾತನಾಡಿ, ಈ ಗಣತಿಯಿಂದ ಎಲ್ಲ ವಿಧದ ಸಣ್ಣ ನೀರಾವರಿ ಯೋಜನೆಗಳ ಸಮಗ್ರವಾದ ಮಾಹಿತಿ ಕ್ರೂಢೀಕರಿಸಲಾಗುತ್ತದೆ. ಗಣತಿದಾರರು, ಗ್ರಾಮ ಲೆಕ್ಕಾಧಿಕಾರಿಗಳು ರೈತರಿಂದ ಮಾಹಿತಿ ಪಡೆಯುವಜತೆಗೆ ಜಲಮೂಲಗಳ ಭೌತಿಕ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಬೇಕಿದೆ ಎಂದರು. ಶಿರಸ್ತೇದಾರ ವೀರಣ್ಣ ಅಡಗತ್ತಿ, ಗಣಪತಸಿಂಗ್, ಎಂ.ಜಿ. ಸಂತೋಷ, ಜಿ.ಬಿ. ಆನಂದಪ್ಪನವರ, ಶಬ್ಬೀರ್ ನಿಶಾನದಾರ, ಉಮೇಶ ಅರಳಿಗಿಡದ ಇತರರು ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.